ಮಡಿಕೇರಿ, ಡಿ. ೨: ಮಡಿಕೇರಿ ಸನಿಹದ ಕಡಗದಾಳು ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರದಂದು ವ್ಯಾಪಾರ - ವಹಿವಾಟಿನ ಸಂಭ್ರಮ ಕಂಡುಬAದಿತು... ದಿನಂಪ್ರತಿ ತರಗತಿ ಯೊಳಗೆ ಪಠ್ಯ - ಪ್ರವಚನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಒಂದು ದಿನದ ಮಟ್ಟಿಗೆ ತಾವು ಸ್ವತಃ ವ್ಯಾಪಾರಿಗಳಾಗುವ ಅವಕಾಶ ದೊರೆತಿದ್ದು, ಇದರಲ್ಲಿ ಲಗು - ಬಗೆಯಿಂದ ನಾಮುಂದು... ತಾ... ಮುಂದು ಎಂಬAತೆ ತೊಡಗಿಸಿ ಕೊಂಡಿದ್ದರು. ಈ ‘ಉದ್ಯಮಿ’ಗಳ ಉತ್ಸಾಹಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಶಿಕ್ಷಕರು ಗ್ರಾಮ ಪಂಚಾಯಿತಿ ಯವರು ಉತ್ತೇಜನ ನೀಡಿದರು... ಶಾಲೆಯ ಇಲ್ಲಿಯ ಗ್ರಾಹಕರ ಸಂಘದ ವತಿಯಿಂದ ಮಕ್ಕಳ ಸಂತೆ ಎನ್ನುವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿವಿಧ ಬಗೆಯ ಹಣ್ಣು, ತರಕಾರಿಗಳು, ಸೊಪ್ಪು, ತಿಂಡಿ ತಿನಿಸುಗಳು ಮತ್ತು ದಿನಬಳಕೆಯ ವಸ್ತುಗಳನ್ನು ತಾವೇ ಮಾರಾಟ ಗಾರರಾಗಿ ಹೇಗೆ ವ್ಯಾಪಾರವನ್ನು ನಡೆಸಬಹುದು ಎಂಬ ಅನುಭವ ವನ್ನು ಪಡೆಯುವುದರೊಂದಿಗೆ ತಾವು ಕೂಡ ಅಂದು ಗ್ರಾಹಕರಾಗಿ ಯಾವ ರೀತಿ ವಸ್ತುಗಳ ಕೊಂಡು ಕೊಳ್ಳುವಿಕೆಯ ಬಗ್ಗೆ ವ್ಯವಹಾರಿಕ ಜ್ಞಾನ ಹೊಂದಿರಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ಪಡೆದು ಕೊಂಡರು. ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಣ್ಣ ಬಿ.ಟಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಇಂತಹ ತಿಳುವಳಿಕೆ ಯನ್ನು ವಿದ್ಯಾರ್ಥಿ ದೆಸೆಯಿಂದಲೇ ಕೊಡುವುದು ತುಂಬಾ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಉತ್ಸಾಹವನ್ನು ಕಂಡು ಮೆಚ್ಚುಗೆಯ ನುಡಿಗಳನ್ನು ಆಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿಯ ಉದ್ಯಮಿ ಪಂಚಮಿ ವ್ಯಾಪಾರ ಮಳಿಗೆಯ ಮಾಲೀಕರಾದ ಕನ್ನಂಡ ಕವಿತಾ ಬೊಳ್ಳಪ್ಪ ಅವರು ವಿದ್ಯಾರ್ಥಿಗಳು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಕೊಂಡು ಪೂರ್ವಲೋಚನೆಯಿಂದ ವ್ಯಾಪಾರದ ಬಗ್ಗೆ ಎಲ್ಲಾ ಮಾಹಿತಿ ಯನ್ನು ಕಲೆಹಾಕಿ ಲಾಭ ನಷ್ಟಗಳ ಬಗ್ಗೆ ತಿಳಿದುಕೊಂಡು ವ್ಯಾಪಾರವನ್ನು ನಡೆಸಿ ಮುಂದಕ್ಕೆ ವ್ಯವಹಾರಿಕ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಗಳಿಸ ಬಹುದು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಸೀರ್ ಅವರು ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ದೈನಂದಿನ ಬದುಕಿನ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಅನಿತಾ ಎಸ್.ಡಿ., ಗ್ರಾಹಕರ ಸಂಘದ ಮಾರ್ಗ ದರ್ಶಕ ಶಿಕ್ಷಕಿ ಚಂದ್ರಮ್ಮ, ಸಂಸ್ಥೆಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಪಾಲ್ಗೊಂಡರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ನೆರೆಕರೆ ಯವರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಬೆಂಬ ಲವನ್ನು ಕೊಟ್ಟರು. ಸರಿ ಸುಮಾರು ೨೦ ವ್ಯಾಪಾರ ಮಳಿಗೆಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿ ಕಡಗದಾ ಳುವಿನ ಪ್ರೌಢಶಾಲೆಯ ಮೈದಾನದಲ್ಲಿ ತೆರೆದಿದ್ದರು. ಮೆಚ್ಚುಗೆಗೆ ಪಾತ್ರವಾದ ಕ್ರಿಯಾಶೀಲ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವ್ಯಾಪಾರದ ಮೂಲಕ ಲಾಭಗಳಿಸಿದ ಮಕ್ಕಳ ಸಂತಸ ಹೆಚ್ಚಾಗಿತ್ತು...