ವೀರಾಜಪೇಟೆ, ಡಿ. ೨: ಇತ್ತೀಚೆಗೆ ರಾಜ್ಯ ತಂಡದಲ್ಲಿ ಗುರುತಿಸಿಕೊಂಡು ಉತ್ತಮ ಅಂಕಗಳನ್ನು ಪಡೆದು ರಾಷ್ಟಿçÃಯ ತಂಡಕ್ಕೆ ಆಯ್ಕೆಯಾದ ವೀರಾಜಪೇಟೆಯ ಕೀತಿಯಂಡ ಮಂಜು ಅಯ್ಯಪ್ಪ ಹಾಗೂ ಕವಿತ ದಂಪತಿ ಪುತ್ರಿ ಪೂರ್ವಿ ಪೂವಮ್ಮ ಮತ್ತು ವೀರಾಜಪೇಟೆ ಪುರಸಭೆ ಸದಸ್ಯ ಅಬ್ದುಲ್ ಜಲಿಲ್ ಹಾಗೂ ಇರ್ಫಾನ ದಂಪತಿ ಪುತ್ರ ಮಹಮ್ಮದ್ ಜಹಿದ್ ಅವರುಗಳನ್ನು ಪ್ರಗತಿ ಶಾಲೆಯ ಆವರಣದಲ್ಲಿ ಸನ್ಮಾನಿಸಲಾಯಿತು.

ಪೂರ್ವಿ ಪೂವಮ್ಮ ವೀರಾಜ ಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಶಿಕ್ಷಣ ಮತ್ತು ಹಾಕಿ ತರಬೇತಿ ಪಡೆದು ಪ್ರೌಢಶಾಲೆಯನ್ನು ಪೊನ್ನಂಪೇಟೆಯ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ರಾಜ್ಯ ತಂಡದಲ್ಲಿ ಹಾಕಿ ಆಟದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಈಗ ರಾಷ್ಟಿçÃಯ ತಂಡದಲ್ಲಿ ಆಡಲು ತೆರಳಲಿದ್ದಾರೆ. ಮಹಮ್ಮದ್ ಜೈನ್ ಕೂಡ ವೀರಾಜ ಪೇಟೆ ಸಂತ ಅನ್ನಮ್ಮ ಶಾಲೆಯ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ಮೈಸೂರಿನಲ್ಲಿ ಶಟಲ್ ಬ್ಯಾಡ್‌ಮಿಂಟನ್ ನಲ್ಲಿ ಹೆಚ್ಚು ಆಸಕ್ಕಿ ಇದ್ದ ಕಾರಣ ಅವರಿಗೆ ವೀರಾಜಪೇಟೆ ಕ್ರೀಡಾಪಟು ಇಚ್ಚು (ಇರ್ಷಾದ್), ಗುಡ್ಡೆಹೊಸೂರಿನಲ್ಲಿ ಪೊನ್ನಣ್ಣ, ಮೈಸೂರಿನಲ್ಲಿ ಹರೀಶ್ ಅವರು ತರಬೇತಿಯನ್ನು ನೀಡಿದರು.

ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತ ನಾಡಿ ಈ ಇಬ್ಬರೂ ವೀರಾಜಪೇಟೆ ನಗರದಲ್ಲಿ ಹುಟ್ಟಿ ಬೆಳೆದ ಮಕ್ಕಳು, ಪೂರ್ವಿಯಲ್ಲಿ ಒಳ್ಳೆಯ ಭವಿಷ್ಯ ಇದೆ. ಅದೇ ರೀತಿಯಲ್ಲಿ ಕಳೆದ ಬಾರಿ ಕಂಚಿನ ಪದಕ ಗೆದ್ದ ಜಹಿದ್ ಮುಂದೆ ಚಿನ್ನ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಪೋಷಕರು ಪ್ರಗತಿ ಅಕಾಡೆಮಿಯ ಕ್ರೀಡಾಪಟುಗಳು, ಕೋಚ್ ಆಕಾಶ್ ಭಾಗವಹಿಸಿದ್ದರು.