*ಗೋಣಿಕೊಪ್ಪ, ನ. ೩೦: ಲಯನ್ಸ್ ಪದವಿ ಪೂರ್ವ ಕಾಲೇಜಿನ ಎಂಟು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದ ಬಾಲಕಿಯರ ಕಾಲ್ಚೆಂಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರು ತಾ. ೩ ಮತ್ತು ೪ ರಂದು ಬಳ್ಳಾರಿಯಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ತಂಡಲ್ಲಿ ಕಾರ್ತಿಕಾ, ಪಂಚಮಿ, ದೀಪಾಲಿ, ಭೂಮಿ ಬಿದ್ದಪ್ಪ, ನಾಟ್ಯ ದೇಚಕ್ಕ, ತಶ್ವಿ ಪಾರ್ವತಿ, ನಿಧಿ, ಅಕ್ಷರ ಸೋನಲ್ ಭಾಗವಹಿಸಲಿದ್ದು, ತರಬೇತುದಾರ ಪಿ.ಎ. ನಾಗೇಶ್ ವ್ಯವಸ್ಥಾಪಕ ನಾಣಯ್ಯ ಕೆ.ಜೆ. ಕ್ರೀಡಾ ವಿದ್ಯಾರ್ಥಿಗಳ ತಂಡವನ್ನು ನಿರ್ವಹಿಸಲಿದ್ದಾರೆ ಎಂದು ಪ್ರಾಂಶುಪಾಲೆ ಲತಾ. ಸಿ.ಬಿ. ತಿಳಿಸಿದ್ದಾರೆ.