ಮಡಿಕೇರಿ, ನ. ೩೦: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋರ‍್ಯಾಕ್ಟ್ ಕ್ಲಬ್‌ನ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಮಡಿಕೇರಿ ವುಡ್ಸ್ ಈ ಕ್ಲಬ್‌ನ ಪ್ರಾಯೋಜಕತ್ವವನ್ನು ಮಾಡಿತ್ತು. ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ರೊ. ಡಾ. ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಬೆಳವಣಿಗೆಯಲ್ಲಿ ರೋರ‍್ಯಾಕ್ಟ್ ಕ್ಲಬ್ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯ ಸಮಾಜದ ನೆರವಿಲ್ಲದೆ ಯಶಸ್ವಿಯಾಗಲಾರನು. ಆದರೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುವುದು ಸಾಧ್ಯವಾಗದು. ಹಾಗಾಗಿ ಈ ರೀತಿಯ ಕ್ಲಬ್ ಸೇರುವ ಮೂಲಕ ಸಮಾಜಕ್ಕೆ ಏನಾದರು ಕೊಡುಗೆ ಸಲ್ಲಿಸುವ ಮೂಲಕ ಧನ್ಯತೆ ಪಡೆಯಬಹುದು ಎಂದು ನುಡಿದರು.

ರೋರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಶ್ರಿರಕ್ಷಾ, ಇದೊಂದು ಮಡಿಕೇರಿ, ನ. ೩೦: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋರ‍್ಯಾಕ್ಟ್ ಕ್ಲಬ್‌ನ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಮಡಿಕೇರಿ ವುಡ್ಸ್ ಈ ಕ್ಲಬ್‌ನ ಪ್ರಾಯೋಜಕತ್ವವನ್ನು ಮಾಡಿತ್ತು. ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ರೊ. ಡಾ. ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಬೆಳವಣಿಗೆಯಲ್ಲಿ ರೋರ‍್ಯಾಕ್ಟ್ ಕ್ಲಬ್ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯ ಸಮಾಜದ ನೆರವಿಲ್ಲದೆ ಯಶಸ್ವಿಯಾಗಲಾರನು. ಆದರೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುವುದು ಸಾಧ್ಯವಾಗದು. ಹಾಗಾಗಿ ಈ ರೀತಿಯ ಕ್ಲಬ್ ಸೇರುವ ಮೂಲಕ ಸಮಾಜಕ್ಕೆ ಏನಾದರು ಕೊಡುಗೆ ಸಲ್ಲಿಸುವ ಮೂಲಕ ಧನ್ಯತೆ ಪಡೆಯಬಹುದು ಎಂದು ನುಡಿದರು.

ರೋರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಶ್ರಿರಕ್ಷಾ, ಇದೊಂದು ಉದ್ಘಾಟನೆಯಾದದ್ದು ಸಂತೋಷ ತಂದಿದೆ. ಸದಸ್ಯರು ಇಂತಹ ಅಂರ‍್ರಾಷ್ಟಿçÃಯ ಕ್ಲಬ್‌ನ ಸದಸ್ಯರಾದದ್ದಕ್ಕಾಗಿ ಹೆಮ್ಮೆಪಡಬೇಕು. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಕ್ಲಬ್‌ನ ಘನತೆ-ಗೌರವಗಳನ್ನು ಹೆಚ್ಚಿಸುವಂತಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ರೋಟರಿ ವುಡ್ಸ್ನ ಅಧ್ಯಕ್ಷ ರೊ. ಸಂಪತ್ ಕುಮಾರ್, ಕಾರ್ಯದರ್ಶಿ ರೊ. ವಸಂತ್ ಕುಮಾರ್, ವುಡ್ಸ್ನ ಸದಸ್ಯರಾದ ರಂಜಿತ್ ಕಿಗ್ಗಾಲ್, ನವೀನ್, ಬೋಪಣ್ಣ, ಪದ್ಮನಾಭ ಶೆಟ್ಟಿ, ಲೀಲಾವತಿ, ಬೋಪಣ್ಣ, ರೋಟರಿ ಮಿಸ್ಟಿ ಹಿಲ್ಸ್ನ ಧನಂಜಯ, ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ವೇಣು ಅಪ್ಪಣ್ಣ ಅವರು ಭಾಗವಹಿಸಿದ್ದರು.

ನೂತನ ಕ್ಲಬ್‌ನ ಕಾರ್ಯದರ್ಶಿಯಾಗಿ ಸಂಜಯ್, ಉಪಾಧ್ಯಕ್ಷರಾಗಿ ಲೀಲಾವತಿ, ಖಜಾಂಚಿಯಾಗಿ ಲೀಶ್ಮಾ ಚೋಂದಮ್ಮ, ಸಾರ್ಜೆಂಟ್ ಎಟ್ ಆರ್ಮ್ಸ್ ಆಗಿ ಮಹ್ಮದ್ ಆಶಿಕ್ ಅವರು ಅಧಿಕಾರ ವಹಿಸಿಕೊಂಡರು.