ನಾಪೋಕ್ಲು, ನ. ೩೦: ದೇಶದ ಮೊದಲ ಅಂತರರಾಷ್ಟಿçÃಯ ಮಹಿಳಾ ಹಾಕಿ ತೀರ್ಪುಗಾರ್ತಿಯಾಗಿ ಆಯ್ಕೆಯಾಗುವ ಮೂಲಕ ಅನುಪಮ ದೇಶಕ್ಕೆ, ಕೊಡಗಿಗೆ ಕೀರ್ತಿ ತಂದಿದ್ದಾರೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.

ನಾಪೋಕ್ಲು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ಆಯೋಜಿಸಲಾಗಿರುವ ಅನುಪಮಾ ಜ್ಞಾಪಕಾರ್ಥ ಮುಕ್ತ ಹಾಕಿ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಸಣ್ಣ ಪ್ರಾಯದಲ್ಲಿಯೇ ದೇಶದ ಮೊದಲ ಅಂತರರಾಷ್ಟಿçÃಯ ಮಹಿಳಾ ಹಾಕಿ ತೀರ್ಪುಗಾರ್ತಿಯಾಗಿ ಆಯ್ಕೆಯಾದ ಅನುಪಮಾ ಯುವ ಮಹಿಳಾ ಹಾಕಿ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ. ಏಷ್ಯಾ ಕಪ್ ಸೇರಿದಂತೆ ನೂರಾರು ಪಂದ್ಯಗಳಲ್ಲಿ ತೀರ್ಪುಗಾರ್ತಿಯಾಗಿ ಭಾಗವಹಿಸಿ ಹೆಸರುಗಳಿಸಿದ್ದಾರೆ ಎಂದರು. ಅವರ ಜ್ಞಾಪಕಾರ್ಥ ನಾಪೋಕ್ಲು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಮುಕ್ತ ಹಾಕಿ ಪಂದ್ಯಾವಳಿ ನಡೆಸುವ ಮೂಲಕ ಅವರ ಸಾಧನೆಯನ್ನು ಇತರ ಕ್ರೀಡಾಪಟುಗಳಿಗೂ ತಿಳಿಸುವ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ನಾಮ ನಿರ್ದೇಶಕ ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೇಲೇಟಿರ ದೀಪು ದೇವಯ್ಯ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪುಚ್ಚಿಮಂಡ ಬಬ್ಲೂ, ನಾಯಕಂಡ ದೀಪು ಚಂಗಪ್ಪ, ಅರೆಯಡ ರತ್ನಾ ಪೆಮ್ಮಯ್ಯ, ಕುಂಚ್ಚೆಟ್ಟಿರ ಸುದಿ, ಪಾಡಿಯಮ್ಮಂಡ ಮನು ಮಹೇಶ್ ಮತ್ತಿತರರು ಇದ್ದರು.

ಕೇಲೇಟಿರ ದೇಚಮ್ಮ ಪ್ರಾರ್ಥಿಸಿದರೆ, ಐಚ್ಚೆಟ್ಟಿರ ವಿಕ್ರಂ ಉತ್ತಪ್ಪ ಸ್ವಾಗತಿಸಿದರು. ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ವಂದಿಸಿದರು.

ಪAದ್ಯಾಟದ ವಿವರ: ಮಲ್ಮ ಎ ಮತ್ತು ಬೇತು ಯೂತ್ ಕ್ಲಬ್ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಲ್ಮ ತಂಡವು ಬೇತು ತಂಡವನ್ನು ೫-೦ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೇಂಗ್‌ನಾಡ್ ಫೋನಿಕ್ಸ್ ಮತ್ತು ಶಿವಾಜಿ ಬಿ ತಂಡಗಳ ನಡುವಿನ ಪಂದ್ಯದಲ್ಲಿ ಬೇಂಗ್‌ನಾಡ್ ತಂಡವು ಶಿವಾಜಿ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ಡ್ರಿಬ್ರ‍್ಸ್ ಮತ್ತು ಶ್ರೀಮಂಗಲ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡ್ರಿಬ್ರ‍್ಸ್ ತಂಡವು ಶ್ರೀಮಂಗಲ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ನಾಲಡಿ ಎ ಮತ್ತು ಸುಂಟಿಕೊಪ್ಪ ತಂಡಗಳ ನಡುವಿನ ಪಂದ್ಯದಲ್ಲಿ ನಾಲಡಿ ಎ ತಂಡವು ಸುಂಟಿಕೊಪ್ಪ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿತು. ಡಾಲ್ಫಿನ್ಸ್ ಮತ್ತು ಮಲ್ಮ ಬಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡಾಲ್ಫಿನ್ಸ್ ತಂಡವು ಮಲ್ಮ ಬಿ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಂಜಿಕೇರಿ ನಾಡ್ ಮತ್ತು ಬೊಳಿಯೂರ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಿಕೇರಿ ತಂಡವು ಬೊಳಿಯೂರ್ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಮೂರ್ನಾಡು ಮತ್ತು ಕೊಡವ ಸಮಾಜ ವಿರಾಜಪೇಟೆ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಮೂರ್ನಾಡು ತಂಡವು ಕೊಡವ ಸಮಾಜ ವಿರಾಜಪೇಟೆ ತಂಡವನ್ನು ಶೂಟ್‌ಔಟ್‌ನಲ್ಲಿ ಪರಾಭವಗೊಳಿಸಿತು. ನಾಲಡಿ ಬಿ ಮತ್ತು ಪಾರಾಣೆ ತಂಡಗಳ ನಡುವೆ ನಡೆದ ಕೊನೆಯ ಪಂದ್ಯದಲ್ಲಿ ನಾಲಡಿ ತಂಡವು ಪಾರಾಣೆ ತಂಡವನ್ನು ೪-೩ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

-ಪ್ರಭಾಕರ್