*ಗೋಣಿಕೊಪ್ಪ, ನ. ೩೦: ಬಾಡಗರಕೇರಿ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ರೂ. ೧೦.೧೦ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ನಲಿ ಕಲಿ ಕೊಠಡಿಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ಪ್ರತಿ ಮಕ್ಕಳು ಶಿಕ್ಷಣವಂತರಾ ದಾಗ ಮಾತ್ರ ಈ ದೇಶ ಸಮೃದ್ಧಿ ಕಾಣಲಿದೆ ಎಂದು ಅವರು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರೀನಾ ಶÀಮಿ, ಉಪಾಧ್ಯಕ್ಷ ರಾಜೇಶ್, ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮದುದೇವಯ್ಯ, ತಾಲೂಕು ಮಾಧ್ಯಮ ಸಂಚಾಲಕ ಚಟ್ಟಗಂಡ ಮಹೇಶ್ ಮಂದಣ್ಣ, ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಸಿ ಜಯಮ್ಮ, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.