ಮಡಿಕೇರಿ, ನ. ೩೦: ತಾಲೂಕು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನೆ ಇವರ ವತಿಯಿಂದ ೨೦೨೨-೨೩ನೇ ಸಾಲಿನ ಕನ್ನಡ ರಾಜೋತ್ಸವ ಪ್ರಯುಕ್ತ ೫ ರಿಂದ ೧೬ ವರ್ಷದ ಮಕ್ಕಳಿಗೆ ವೈಯಕ್ತಿಕ ಕನ್ನಡ ಗೀತೆಗಾಯನ ಸ್ಪರ್ಧೆ ಮತ್ತು ಗಾಂಧಿ ಜಯಂತಿ ದಿನಾಚರಣೆ ಪ್ರಯುಕ್ತ ೫ ರಿಂದ ೧೬ ವರ್ಷದ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯು ತಾ. ೫ ರಂದು ಬೆಳಿಗ್ಗೆ ೧೧ ಗಂಟೆಗೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಆವರಣದ ಸ್ತಿçÃಶಕ್ತಿ ಭವನ ಕಟ್ಟಡದಲ್ಲಿ ನಡೆಯಲಿದೆ.

ಆಸಕ್ತ ಮಕ್ಕಳು ಸ್ಪರ್ಧೆಗೆ ಭಾಗವಹಿಸಲು ತಿಳಿಸಿದೆ. ೫ ರಿಂದ ೧೬ ವರ್ಷ ವಯಸ್ಸಿನ ಮಕ್ಕಳನ್ನು ೩ ವಿಭಾಗಗಳನ್ನಾಗಿ ಮಾಡಲಾಗುವುದು ೫ ರಿಂದ ೮ ವರ್ಷ, ೯ ರಿಂದ ೧೨ ವರ್ಷ ಮತ್ತು ೧೩ ರಿಂದ ೧೬ ವರ್ಷದ ಒಂದೊAದು ವಿಭಾಗಕ್ಕೆ ಒಂದು ಮಗುವಿನಂತೆ ಒಂದು ಶಾಲೆಯಿಂದ ಕನ್ನಡ ಗೀತಗಾಯನಕ್ಕೆ ೩ ಮಕ್ಕಳನ್ನು ಹಾಗೂ ಚಿತ್ರಕಲಾ ಸ್ಪರ್ಧೆಗೆ ೩ ಮಕ್ಕಳನ್ನು ಮಾತ್ರ ಆಯ್ಕೆ ಮಾಡಿ ಕಳುಹಿಸುವುದು.

ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸೋಮವಾರಪೇಟೆ, ದೂರವಾಣಿ ಸಂಖ್ಯೆ: ೦೮೨೭೬-೨೮೨೨೮೧ ಇವರನ್ನು ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಸಿ.ಎಂ. ಅವರು ತಿಳಿಸಿದ್ದಾರೆ.