ಸುಂಟಿಕೊಪ್ಪ, ನ. ೩೦: ಗ್ರಾಮ ಪಂಚಾಯಿತಿ ಭೂ ಪರಿವರ್ತನೆ ಯಾಗದ ಜಾಗಕ್ಕೆ ೯ ಮತ್ತು ೧೧ ಬಿ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಆಸ್ತಿಯನ್ನು ಸರ್ವೆ ಮಾಡಿಸಿ ಹದ್ದು ಬಸ್ತಿನಲ್ಲಿಡುತ್ತಿಲ್ಲ, ಪಂಚಾಯಿತಿ ಮಾಸಿಕ ಸಭೆಯ ನಡಾವಳಿಯನ್ನು ಅನುಷ್ಠಾನ ಗೊಳಿಸುತ್ತಿಲ್ಲ. ಅಭಿವೃದ್ಧಿ ಕಾಮಗಾರಿ ಯಾಗುತ್ತಿಲ್ಲ ಎಂದು ಆರೋಪಿಸಿ ಸುಂಟಿಕೊಪ್ಪ ಗ್ರಾ.ಪಂ.ನ ೪ ಮಂದಿ ಸದಸ್ಯರುಗಳು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಪ್ರಸಂಗ ಎದುರಾಯಿತು.
ಸುಂಟಿಕೊಪ್ಪ ಗ್ರೇಡ್-೧ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಪ್ರಸ್ತುತ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ೨ ವರ್ಷ ಆಗಿದೆ. ಶ್ರೀ ಸಾಮಾನ್ಯರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ಆಡಳಿತ ವಿಫಲವಾಗಿದೆ. ಪಂಚಾಯಿತಿ ವ್ಯಾಪ್ತಿಯ ಭೂಪರಿವರ್ತನೆಯಾಗದ ಜಾಗಕ್ಕೂ ಪಂಚಾಯಿತಿಯಿAದ ೯ ಮತ್ತು ೧೧ಬಿ ದಾಖಲೆ ನೀಡಲಾಗುತ್ತಿದೆ. ನೂತನ ಆಡಳಿತ ಮಂಡಳಿಯಾಗಿ ಆಗಮಿಸಿದ್ದ ನಾವುಗಳು ಭೂ ಪರಿವರ್ತನೆಯಾದ ಜಾಗಗಳಿಂದ ಪಂಚಾಯಿತಿಗೆ ನೀಡಲಾಗಿರುವ ಆಸ್ತಿಯನ್ನು ಸರ್ವೆ ನಡೆಸಿ ಬೇಲಿ ಹಾಕಿ ಪಂಚಾಯಿತಿ ಸುಪರ್ದಿಗೆ ತೆಗೆದುಕೊಳ್ಳುವಂತೆ ಸಾಮಾನ್ಯ ಸಭೆಯಲ್ಲಿ ಕಳೆದ ೨ ವರ್ಷಗಳಿಂದ ಸೂಚಿಸುತ್ತ್ತಾ ಬರುತ್ತಿದ್ದರೂ ಸಂಬAಧಿಸಿದವರು ಇದರ ಬಗ್ಗೆ ಗಮನಹರಿಸದೆ ನಿರ್ಲಕ್ಷö್ಯತೆ ತಳೆದಿದ್ದಾರೆ. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯವಾದ ಕೆಲಸ ಕಾರ್ಯಗಳು ಅನುಷ್ಠಾನಗೊಳ್ಳುತ್ತಿಲ್ಲ. ಕೆಲವು ಸದಸ್ಯರ ಅಣತಿಯಂತೆ ಬೇಕಾಬಿಟ್ಟಿ ಕೆಲಸ ನಡೆಯುತ್ತಿದೆ. ಸಾಮಾನ್ಯ ಸಭೆಗೆ ಬಾರದೆ ಕೆಲವು ಅರ್ಜಿಗಳ ಕಾರ್ಯವೈಖರಿಗಳು ನಡೆಯುತ್ತಿದೆ ಎಂದು ಸದಸ್ಯ ಸೋಮನಾಥ್ ಆರೋಪಿಸಿದರು. ಚರಂಡಿ ನೀರು ಮನೆಗೆ ನುಗ್ಗಿ ಜನಸಾಮಾನ್ಯರು ಪರದಾಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಶಿವರಾಂ ಬಡಾವಣೆಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆಯಾಗದಿದ್ದರೂ ನಿವೇಶನ ಖರೀದಿಸಿದವರಿಗೆ ೯ ಮತ್ತು ೧೧ ಬಿ ಪಂಚಾಯಿತಿಯಿAದ ನೀಡಲಾಗುತ್ತಿದೆ. ಪಾರದರ್ಶಕ ಆಡಳಿತ ನಡೆಯುತ್ತಿಲ್ಲ. ‘ಡೀಲ್’ ಆಗುತ್ತಿದೆ ಎಂದು ಗ್ರಾ.ಪಂ. ಸದಸ್ಯರುಗಳಾದ ಸೋಮನಾಥ್, ಶಾಂತಿ, ಮಂಜುಳ ಹಾಗೂ ಹಸೀನಾ ಗಂಭೀರ ಆರೋಪ ಮಾಡಿ ಸಭೆಯಿಂದ ಹೊರ ಬಂದು ಆಕ್ರೋಶ ವ್ಯಕ್ತಪಡಿಸಿದರು.
ಗದ್ದೆಹಳ್ಳ ಅಂಗನವಾಡಿ ಕೇಂದ್ರದ ಶೌಚ ಗುಂಡಿ ತುಂಬಿ ದುರ್ವಾಸನೆ ಬರುತ್ತಿದೆ. ಕಲ್ಮಶ ನೀರು ಹೊರ ಬರುತ್ತಿದ್ದು, ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಕ್ರಮಕೈಗೊಂಡಿಲ್ಲ ಎಂದು ಮಂಜುಳ ಸದಸ್ಯೆ ಅವಲತ್ತುಕೊಂಡರು.
ಪಂಚಾಯಿತಿ ಸಾಮಾನ್ಯ ಸಭೆಯಿಂದ ಹೊರ ಬಂದ ಸದಸ್ಯರುಗಳನ್ನು ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಸದಸ್ಯರುಗಳಾದ ಶಬೀರ್, ರಫೀಕ್, ಆಲಿಕುಟ್ಟಿ ಹಾಗೂ ಜಿನಾಸುದ್ದೀನ್ ಅವರುಗಳು ಮನ ಓಲೈಸಲು ಎಷ್ಟೇ ಪ್ರಯತ್ನಿಸಿದರೂ ಅಸಮಾಧಾನಿತ ಸದಸ್ಯರು ಅವರನ್ನು ಲೆಕ್ಕಿಸದೆ ಸಭಾತ್ಯಾಗ ಮಾಡಿ ತೆರಳಿದರು.