ಸೋಮವಾರಪೇಟೆ, ನ. ೨೯: ರೈತರ ಶ್ರೇಯೋಭಿವೃದ್ಧಿಗಾಗಿ ರೈತರಿಂದಲೇ ಸ್ಥಾಪನೆಯಾಗಿರುವ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೪೭ ಸಾವಿರ ರೂ.ಗಳ ನಿವ್ವಳ ಲಾಭಗಳಿಸಿದ್ದು, ಸರ್ಕಾರಿ ಯೋಜನೆಗಳನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಹೇಳಿದರು.
ಪಟ್ಟಣದ ಸಫಾಲಿ ಹಾಲ್ನಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿಕರಿಗೆ ಅವಶ್ಯಕವಿರುವ ಎಲ್ಲಾ ರೀತಿಯ ಪರಿಕರಗಳನ್ನು ಒದಗಿಸಲಾಗುತ್ತಿದೆ. ಅತೀ ಕಡಿಮೆ ಲಾಭಾಂಶ ಇಟ್ಟುಕೊಂಡು ವಹಿವಾಟು ಮಾಡಲಾಗುತ್ತಿದೆ ಎಂದರು.
ಕಳೆದ ವರ್ಷದಿಂದ ಗುಣಮಟ್ಟದ ಕಾಫಿಯನ್ನು ಸಂಸ್ಥೆಯ ಮೂಲಕ ಖರೀದಿ ಮಾಡಲಾಗುತ್ತಿದೆ. ಸಂಸ್ಥೆಯಲ್ಲಿ ೫೪೦ ಸದಸ್ಯರಿದ್ದು, ಪ್ರತಿ ಸದಸ್ಯರು ೧೦ ಚೀಲ ಕಾಫಿಯನ್ನು ಸಂಸ್ಥೆಗೆ ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು.
ಕಾಫಿ ಮಂಡಳಿ ಮತ್ತು ಕ್ಥಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಕಾಫಿ ಮಂಡಳಿ ವಿಸ್ತರಣಾಧಿಕಾರಿ ಲಕ್ಷಿö್ಮÃಕಾಂತ್, ಕೃಷಿ ಸಹಾಯಕ ನಿರ್ದೇಶಕ ಯಾದವ್ಬಾಬು ಅವರುಗಳು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಮಡಿಕೇರಿ ನಬಾರ್ಡ್ ಬ್ಯಾಂಕ್ ಡಿ.ಡಿ.ಎಂ. ರಮೇಶ್ ಬಾಬು, ಓ.ಡಿ.ಪಿ. ಸಂಸ್ಥೆ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಸಂಯೋಜಕ ರಮೇಶ್, ಸಂಸ್ಥೆಯ ಪದಾಧಿಕಾರಿಗಳಾದ ಖಾಲಿಸ್ತಾ ಡಿಸಿಲ್ವಾ, ಪಿ.ಡಿ. ಮೋಹನ್ದಾಸ್, ಕವಿತ ವಿರೂಪಾಕ್ಷ, ಎಂ.ಟಿ. ಲೋಕೇಶ್, ಸಿ.ಇ.ಓ. ಹೆಚ್.ಪಿ. ತೃಪ್ತಿ ಇದ್ದರು.