ಮಡಿಕೇರಿ, ನ. ೨೯: ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶ್ರೀಮಂಗಲ ಸಮೀಪದ ಹರಿಹರದ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ಅನ್ಯಕೋಮಿನ ವ್ಯಾಪಾರಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ತಡೆಯೊಡ್ಡಿ, ಅಂಗಡಿಯನ್ನು ತೆರವು ಮಾಡಿಸಿದ ಘಟನೆ ನಡೆದಿದೆ.

ಕಳೆದ ಕೆಲವು ದಿನದ ಹಿಂದಷ್ಟೆ ಹಿಂದೂ ಸಂಘಟನೆಗಳು ದೇವಾಲಯದ ಆವರಣದಲ್ಲಿ ಅನ್ಯಕೋಮಿನವರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿತ್ತು. ಇದರ ನಡುವೆಯೇ ವ್ಯಕ್ತಿಯೋರ್ವ ಫ್ಯಾನ್ಸಿ ವಸ್ತುಗಳ ವ್ಯಾಪಾರ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಸ್ಥಳೀಯರು ಆತನನ್ನು ವಿಚಾರಣೆ ನಡೆಸಿದಾಗ ಆಧಾರ್ ಕಾರ್ಡ್ನ ಒಂದು ಬದಿ ರವೀಶ್, ಮತ್ತೊಂದು ಬದಿಯಲ್ಲಿ ಶಂಭು ಶಾ ಹುಸೈನಿ ಎಂದು ದಾಖಲಾಗಿತ್ತು.

(ಮೊದಲ ಪುಟದಿಂದ) ಅದಲ್ಲದೆ ಬಿಹಾರ ರಾಜ್ಯದ ವಿಳಾಸವಿದ್ದ ಹಿನ್ನೆಲೆ ಅನುಮಾನ ಗೊಂಡ ಹಿಂದೂ ಕಾರ್ಯಕರ್ತರು ವ್ಯಾಪಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಅದಾದ ಬಳಿಕ ಪೊಲೀಸರು ಸ್ಥಳದಲ್ಲಿಯೇ ವ್ಯಾಪಾರಿಯನ್ನು ವಿಚಾರಣೆ ನಡೆಸಿ ಕಳುಹಿಸಿದ್ದಾರೆ.

ಪ್ರತಿವರ್ಷ ೨ ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತಿದ್ದ ಜಾತ್ರಾಮಹೋತ್ಸವಕ್ಕೆ ಅನ್ಯಕೋಮಿನ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ವರ್ಷ ವಿವಾದ ಏರ್ಪಟ್ಟ ಹಿನ್ನೆಲೆ ಅನ್ಯಕೋಮಿನ ಓರ್ವ ವ್ಯಾಪಾರಿ ಹೊರತುಪಡಿಸಿ ಯಾವುದೇ ವ್ಯಾಪಾರಿಗಳು ಕೂಡ ಬಂದಿರಲಿಲ್ಲ.

ಈ ವಿಚಾರಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿರುವ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಹಿಂದೂ ಸಂಘಟನೆಗಳ ನಿಲುವು ನಿರಾಕರಿಸಿದ್ದಾರೆ. ಜಾತ್ರೆಯಲ್ಲಿ ಜಾತಿ ಧರ್ಮದ ಬೇಧವಿಲ್ಲ ಯಾರು ಬೇಕಾದರೂ ಬಂದು ಇಲ್ಲಿ ವ್ಯಾಪಾರ ಮಾಡಬಹುದು. ಕೆಲವು ಸಂಘಟನೆಗಳು ಅವರಿಗೆ ಬೇಕಾದ ರೀತಿ ವರ್ತಿಸುತ್ತಿವೆ ಇದು ಖಂಡನೀಯ. ಆಡಳಿತ ಮಂಡಳಿ ವ್ಯಾಪಾರದ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.