ಮಡಿಕೇರಿ: ನಗರದ ಓಂಕಾರೇಶ್ವರ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ಸುಬ್ರಹ್ಮಣ್ಯ ದೇವರಿಗೆ ಇಂದು ವಿಶೇಷ ಪೂಜೆ ಸೇರಿದಂತೆ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನೆರವೇರಿ ಸಂಜೆ ೬.೩೦ಕ್ಕೆ ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಕೊಳದಲ್ಲಿ ತೆಪ್ಪೋತ್ಸವ ನಡೆಸಲಾಯಿತು.

ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಸುಬ್ರಹ್ಮಣ್ಯ ದೇಗುಲದಲ್ಲಿ ಬೆಳಿಗ್ಗೆಯಿಂದ ವಿಶೇಷ ಪಂಚಾಮೃತ ಅಭಿಷೇಕ ಸೇವೆ, ಕ್ಷೀರಾಭಿಷೇಕ, ಅಪ್ಪಂ, ಪಂಚಕಜ್ಜಾಯ ಸೇವೆ, ಹಣ್ಣು ಕಾಯಿ ಪೂಜೆ, ಪುಷ್ಪಾರ್ಚನೆ , ಮುತ್ತಪ್ಪನ್ ವೆಳ್ಳಾಟಂ ಸೇರಿದಂತೆ ಮೊದಲ ಬಾರಿಗೆ ರಂಗ ಪೂಜೆ ನೆರವೇರಿಸಲಾಯಿತು. ಸುಬ್ರಹ್ಮಣ್ಯ ದೇವರ ಶ್ರೀಭೂತ ಬಲಿ ನಡೆಸಿದ ಬಳಿಕ ಅನ್ನಸಂತರ್ಪಣೆ ನಡೆಯಿತು. ಮಡಿಕೇರಿಯಲ್ಲಿ ಭಕ್ತಾದಿಗಳು ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ಬೈರAಬಾಡದಲ್ಲಿ ಷಷ್ಠಿ ಸಂಭ್ರಮ

ವೀರಾಜಪೇಟೆ : ಅಮ್ಮತ್ತಿ ಸಮೀಪದ ಬೈರಂಬಾಡದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಲಾಯಿತು. ತಳಿರು- ತೋರಣಗಳಿಂದ ಶೃಂಗರಿಸಿದ ದೇಗುಲಗಳಿಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು.

ಕೊಡಗಿನ ಸುಬ್ರಹ್ಮಣ್ಯ ದೇವರ ನೆಲೆಯೆಂದೇ ಹೆಸರುವಾಸಿ ಯಾಗಿರುವ ಅಮ್ಮತ್ತಿ ಒಂಟಿಯAಗಡಿ ಬಳಿಯ ಬೈರಂಬಾಡ ಗ್ರಾಮದ ಸುಬ್ರಹ್ಮಣ್ಯ ದೇಗುಲದಲ್ಲಿ ಷಷ್ಠಿ ಪ್ರಯುಕ್ತ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮುಂಜಾನೆ ಯಿಂದಲೇ ಭಕ್ತರು ಸನ್ನಿಧಿಗೆ ಆಗಮಿಸಿ ಹಣ್ಣು ಕಾಯಿ, ಹರಕೆಯನ್ನು ಸಮರ್ಪಿಸಿದರು.

ದೇವರ ಸನ್ನಿಧಿಗೆ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ ಪರಿಣಾಮವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.

ದೇವಾಲಯದಲ್ಲಿ ಬೆಳಿಗ್ಗೆ ೪ರಿಂದಲೇ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊAಡವು. ದೇವರಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕಗಳು ನಡೆದವು. ಉತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.

ಜಿಲ್ಲೆಯ ನಾನಾ ಭಾಗಗಳಿಂದ ಅಧಿಕ ಭಕ್ತಾದಿಗಳು ದೇವರ ದರ್ಶನಕ್ಕೆ ತಂಡೋಪತAಡವಾಗಿ ಬಂದು ದರ್ಶನ ಪಡೆದರು. ಭಕ್ತಾದಿಗಳೊಂದಿಗೆ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳು ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವಕ್ಕಾಗಿ ಆಗಮಿಸಿದ ಭಕ್ತಾದಿಗಳಿಗೆ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ದೇವರಿಗೆ ಮಹಾಮಂಗಳಾರತಿ ಸೇವೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು. ಇದೇ ಸಂದರ್ಭ ಭಕ್ತಾದಿಗಳಿಗೆ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.

ಹರಕೆ ಹೊತ್ತ ಭಕ್ತರು ಸುಬ್ರಹ್ಮಣ್ಯ ದೇವರಿಗೆ ನಾಗನರೂಪ, ಆಳ್‌ರೂಪ ಮುಂತಾದ ಪ್ರತಿರೂಪಗಳನ್ನು ದೇಗುಲಕ್ಕೆ ಒಪ್ಪಿಸಿದರು.

(ಮೊದಲ ಪುಟದಿಂದ) ದೇವಾಲಯದ ಹೊರಭಾಗದಲ್ಲಿ ಭಕ್ತಾದಿಗಳು ಕೇಶ ಮುಂಡನ ಮಾಡಿಸಿಕೊಂಡು ಹರಕೆ ಒಪ್ಪಿಸಿದರು. ಹೆಚ್ಚುವರಿ ವಾಹನಗಳ ವ್ಯವಸ್ಥೆ ಇದ್ದ ಹಿನ್ನೆಲೆ ಇದರಿಂದ ದೇವಾಲಯಕ್ಕೆ ತೆರಳಲು ಅನುಕೂಲವಾಯಿತು. ವೀರಾಜಪೇಟೆ, ಮೂರ್ನಾಡು ಕಡೆಯಿಂದ ಬರುತ್ತಿದ್ದ ವಾಹನಗಳು ಹಾಗೂ ಅಮ್ಮತ್ತಿ ಕಡೆಯಿಂದ ಬರುತ್ತಿದ್ದ ವಾಹನಗಳು ದೇವಾಲಯದ ರಸ್ತೆಯಿಂದ ಸುಮಾರು ೬ಕಿ.ಮೀ ದೂರದಲ್ಲಿ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ದೇವಾಲಯ ಆಡಳಿತ ಮಂಡಳಿ ಪ್ರಮುಖರು ಮಾತನಾಡಿ ಮಹಾಮಾರಿ ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ಆಚರಣೆಗೆ ಹಿನ್ನೆಡೆಯಾಗಿತ್ತು. ಈ ವರ್ಷ ಹಿಂದಿನ ವರ್ಷಗಳಂತೆ ಈ ಬಾರಿಯೂ ಷಷ್ಠಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದ್ದಾರೆ ಎಂದರು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಆಗಮಿಸಿದ ಭಕ್ತಾಧಿಗಳಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಹಾಗೂ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸರ್ವರೂ ಹಾಜರಿದ್ದರು.

ಕೂಡಿಗೆ: ಕೂಡಿಗೆಯ ಶ್ರೀ ಉದ್ಭವ ಸ್ವಾಮಿಯ ೫೪ನೇ ವಾರ್ಷಿಕ ಮಹಾ ರಥೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ೭ ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ, ಮಹಾಪೂಜೆ, ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದು ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆದು ಮಧ್ಯಾಹ್ನ ೧೨ ಗಂಟೆಗೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಧಿಗ್ಬಲಿ, ರಥಬಲಿ, ನಂತರ ರಥಪೂಜೆ, ನಡೆದ ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವವು ಹೊರಡುವ ಮುನ್ನ ಅಯ್ಯಪ್ಪ ವ್ರತದಾರಿಗಳು ದೇವರ ಕೀರ್ತನೆಗಳನ್ನು ಹಾಡಿ ಬೃಹತ್ ಪ್ರಮಾಣದ ಕರ್ಪೂರಗಳನ್ನು ಹಚ್ಚಿ ಭಕ್ತಿ ಮೆರೆದರು. ರಥೋತ್ಸವವು ಶ್ರೀ ಸ್ವಾಮಿ ಸನ್ನಿಧಿಯಿಂದ ಸಂಪ್ರದಾಯದAತೆ ಕೂಡಿಗೆ ಮುಖ್ಯ ರಸ್ತೆಯ ಮೂಲಕ ಕೂಡುಮಂಗಳೂರು ಗ್ರಾಮದವರೆಗೆ ಸಾಗಿತು. ಸಾವಿರಾರು ಭಕ್ತರು ರಥಕ್ಕೆ ಪೂಜೆ ಮಾಡುವುದರ ಜೊತೆಗೆ ರಥಕ್ಕೆ ಬಾಳೆ ಹಣ್ಣು ಮತ್ತು ಜವನಗಳನ್ನು ಎಸೆದು ಭಕ್ತಿ ಮೆರೆದರು.

ರಥೋತ್ಸವದ ಅಂಗವಾಗಿ ವರ್ಷಂಪ್ರತಿಯAತೆ ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಮಿತಿ, ಮತ್ತು ಶ್ರೀ ಸುಬ್ರಹ್ಮಣ್ಯ ಭಕ್ತ ಮಂಡಳಿ ವತಿಯಿಂದ ಸುಪ್ರಸಿದ್ಧ ಮಂಗಳೂರಿನ ಶಾರದ ಪುಲಿ ತಂಡದಿAದ ಚಂಡೆವಾದ್ಯ ಹಬ್ಬಕ್ಕೆ ಮೆರುಗು ತಂದಿತು.

ರಥವು ಸನ್ನಿಧಿಯಿಂದ ಸಾಗಿದ ನಂತರ ರಥೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ನಂತರ ಸಂಜೆ ೪ ಗಂಟೆಗೆ ಕೂಡುಮಂಗಳೂರು ಗ್ರಾಮದಿಂದ ಸ್ವಸ್ಥಳಕ್ಕೆ ರಥವನ್ನು ಭಕ್ತರು ಎಳೆದುಕೊಂಡು ಬಂದರು.

ಶ್ರೀ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವಕ್ಕೆ ಜಿಲ್ಲೆಯ ಭಕ್ತರು ಸೇರಿದಂತೆ ಹಾಸನ, ಮೈಸೂರು ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದರು. ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗಿನಿಂದ ಸಂಜೆ ೭ ಗಂಟೆಯವರೆಗೆ ಪೂಜೆಗಳು ನಡೆದು ನಂತರ ರಾತ್ರಿ ೮ ಗಂಟೆಗೆ ವಿದ್ಯುತ್‌ನಿಂದ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಮಂಟಪೋತ್ಸವವನ್ನು ನಡೆಸಲಾಯಿತು. ಇದರ ಅಂಗವಾಗಿ ಕೂಡಿಗೆ ಆಸ್ಪತ್ರೆ ಸಮೀಪದ ಮೈದಾನದಲ್ಲಿ ಸಿಡಿಸಿದ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸಳೆಯಿತು.

ರಥೋತ್ಸವದ ಅಂಗವಾಗಿ ನಡೆದ ಪೂಜಾ ಕೈಂಕರ್ಯಗಳನ್ನು ಮೈಸೂರಿನ ಯಜ್ಞಶ್ವರ್ ಐತಾಳ್ ತಂಡ ಮತ್ತು ದೇವಾಲಯದ ಪ್ರಮುಖ ಅರ್ಚಕ ನವೀನ ಭಟ್ ತಂಡದವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟಾಟಾ ಕುಶಾಲನಗರ ಕಾಫಿ ಸಂಸ್ಥೆ ಉಪ ವ್ಯವಸ್ಥಾಪಕ ನಿರ್ದೇಶಕ ರೋಷನ್ ಸೋಮಯ್ಯ, ದೇವಾಲಯ ಸಮಿತಿಯ ಗೌರವ ಕಾರ್ಯದರ್ಶಿ ಮಂದಣ್ಣ, ಕಾರ್ಯದರ್ಶಿ ಶಮಂತ್ ರೈ, ಪೊನ್ನಪ್ಪ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಕೂಡುಮಂಗಳೂರು ಗ್ರಾಮ ಪ್ರಮುಖರಾದ ಕೆ ಟಿ ಅರುಣ್ ಕುಮಾರ್, ಸಣ್ಣಪ್ಪ, ಸುಗುಣನಂದ, ಕೆ. ರಾಜನ್ ಶಿವಕುಮಾರ್ ಶಶಿಕಿರಣ್, ಕೆ ವರದ, ಬೀಜೂ ಸುರೇಶ್ ಉದ್ಯಮಿ ಕಿಶೋರ್ ಕುಮಾರ್, ಶಶಿಕಿರಣ್, ಹರೀಶ್, ಆರ್. ಕೃಷ್ಣ, ಸುಬ್ಬಯ್ಯಣ್ಣ , ಲೋಕೇಶ್, ಕೇಶವ ರೈ, ರೀಜೂ ಸೇರಿದಂತೆ ಇನ್ನಿತರರು ಹಾಜರಿದ್ದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಪ್ರಸಿದ್ಧ ಹರಿಹರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ತೀರ್ಥ ಪ್ರಸಾದ ಸೇವಿಸಿ, ಹರಕೆ ತೀರಿಸುವ ಮೂಲಕ ಪುನೀತರಾದರು. ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯ ವತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು. ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಈ ಸಂದರ್ಭ ತಕ್ಕ ಮುಖ್ಯಸ್ಥ ಚಿಮ್ಮುಣಿರ ತಮ್ಮಯ್ಯ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸಮಿತಿಯ ಪ್ರಮುಖರಾದ ಪೆಮ್ಮಣಮಾಡ ತಿಮ್ಮಯ್ಯ, ಮುಕ್ಕಾಟಿರ ಸಂದೀಪ್, ಪೆಮ್ಮಣಮಾಡ ಸಂಪತ್, ಇಟ್ಟಿರ ನಿತ್ಯ, ಕೊಟ್ಟಂಗಡ ಹರೀಶ್, ಕಳ್ಳೇಂಗಡ ಹರೀಶ್, ಮುಕ್ಕಾಟಿರ ವಿನು, ಮುಕ್ಕಾಟಿರ ಸತೀಶ್, ದೇಯಂಡ ಸುಜು, ನೂರೇರ ಸತೀಶ್, ಬಾಚೀರ ಪ್ರದೀಪ್, ಬಾಚೀರ ಶರಣು ಇನ್ನಿತರರು ಇದ್ದರು.ಮರಗೋಡು: ಮರ ಗೋಡು ಗ್ರಾಮದ ಜನತಾ ಕಾಲೋನಿ ವಾಸುಕಿ ಸನ್ನಿಧಿಯಲ್ಲಿ ಶ್ರೀ ವಾಸುಕಿ ಕಲಶೋತ್ಸವ ಸಮಿತಿ ವತಿಯಿಂದ ಚಂಪಾ ಷಷ್ಠಿ ಪ್ರಯುಕ್ತ ಅರ್ಚಕರಾದ ಅಮ್ಮತ್ತಿ ಗುರುರಾಜ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಂತರ ಅನ್ನದಾನ ನಡೆಯಿತು. ನೆರೆದಿದ್ದ ನೂರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು. ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ನಾಪೋಕ್ಲು: ಇಲ್ಲಿಗೆ ಸಮೀಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಷಷ್ಠಿ ಉತ್ಸವವನ್ನು ಭಕ್ತರ ಆಗಮನದೊಂದಿಗೆ ವಿಜೃಂಭಣೆಯಿAದ ಆಚರಿಸಲಾಯಿತು. ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ್ ನಾಗನಿಗೆ ಹಾಲು ತುಪ್ಪ ಎರೆದು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ದೇವಾಲಯದಲ್ಲಿ ವಿಶೇಷ ಮಹಾಪೂಜೆ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ನಾಪೋಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷಿö್ಮÃವೆಂಕಟೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯAತೆ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಆಶ್ಲೇಷ, ಬಲಿಪೂಜೆ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಹೂವಿನ ಅಲಂಕಾರಗೊಳಿಸಿರುವ ಭವ್ಯ ಶ್ರೀ ಲಕ್ಷಿö್ಮÃವೆಂಕಟೇಶ್ವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿತು. ಮಹಾಮಂಗಳಾರತಿಯ ನಂತರ ತಿರ್ಥ ಪ್ರಸಾದ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಅರ್ಚಕ ಸುಧೀರ ಕೇಕುಣ್ಣಾಯ ಪೂಜಾ ವಿಧಿ ವಿಧಾನ ಕಾರ್ಯವನ್ನು ನೆರವೇರಿಸಿದರು . ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಂಜಯ್ಯ ಟಿ.ಎಸ್, ಉಪಾಧ್ಯಕ್ಷ ಶ್ರೀನಿವಾಸ್ ಟಿ.ಆರ್, ಕಾರ್ಯದರ್ಶಿ ಸುಜಿಕುಮಾರ್ ಟಿ.ಎ, ಖಜಾಂಚಿ ಗೋಪಾಲ ಎಂ.ಪಿ, ಹಿರಿಯರಾದ ಶ್ರೀನಿವಾಸ, ಠಾಣಾಧಿಕಾರಿ ಸದಾಶಿವ, ಸಿಬ್ಬಂದಿ, ಆಡಳಿತ ಮಂಡಳಿ ನಿರ್ದೇಶಕರು ಭಕ್ತಾದಿಗಳು ಪಾಲ್ಗೊಂಡಿದ್ದರು. ವೀರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದ ಪಾಲ್ಟ್ಮಕ್ಕಿ ನಾಗ ದೇವರ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಮುಂಜಾನೆಯಿAದಲೇ ಅರ್ಚಕರು ವಿಶೇಷ ಪೂಜೆಯನ್ನು ಸಲ್ಲಿಸಿದರು. ನಾಗತಂಬಿಲ ಸೇವೆ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆಯೊಂದಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಿದರು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನದಾನ ಏರ್ಪಡಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮವನ್ನು ಅರ್ಚಕ ವೇಣುಗೋಪಾಲ್ ಭಟ್ ನೆರವೇರಿಸಿದರು.ಸೋಮವಾರಪೇಟೆ : ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದ ವಿವಿಧ ದೇವಾಲಯಗಳಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ಸುಬ್ರಹ್ಮಣ್ಯ, ನಾಗ ದೇವರ ಬನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳಿ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ನಾಗನಕಲ್ಲು ಮತ್ತು ಹುತ್ತಗಳಿಗೆ ಕುಟುಂಬಸ್ಥರೊAದಿಗೆ ಪೂಜೆ ಸಲ್ಲಿಸಿ ಹಾಲೆರೆದರು. ಇಲ್ಲಿನ ಸೋಮೇಶ್ವರ ದೇವಾಲಯದ ನಾಗಬನದಲ್ಲಿ ಮಹಿಳೆಯರು ಮತ್ತು ಪುರುಷರಾದಿಯಾಗಿ ಪೂಜೆ ಸಲ್ಲಿಸಿ ಹುತ್ತಕ್ಕೆ ಹಾಲೆರೆದು ಪ್ರಾರ್ಥನೆ ಸಲ್ಲಿಸಿದರು. ಆನೆಕೆರೆ ಬಳಿಯಲ್ಲಿರುವ ನಾಗರ ಕಲ್ಲಿಗೆ ವಿಶೇಷ ಪೂಜೆ ನಡೆಯಿತು. ಪಟ್ಟಣದ ಅಯ್ಯಪ್ಪ ದೇವಸ್ಥಾನದಲ್ಲಿರುವ ನಾಗಬನದಲ್ಲಿಯೂ ವಿಶೇಷ ಪೂಜೆ ನಡೆದವು. ಹಿರಿಕರ ಗ್ರಾಮದ ಮಲ್ಲೇಶ್ವರ ದೇವಾಲಯದ ಅರಳಿ ಮರದ ನಾಗದೇವ ಬನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಬಾಲುಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ತಣ್ಣೀರುಹಳ್ಳದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿಯ ವಿಶೇಷ ಪೂಜೆ ನಡೆಯಿತು. ಗ್ರಾಮಸ್ಥರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್, ಪ್ರಮುಖರಾದ ರವಿ ಸೇರಿದಂತೆ ಇತರರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮಂಜುನಾಥ ದೇವಾಲಯದಲ್ಲಿ: ಸಮೀಪದ ಸಿದ್ದಲಿಂಗಪುರ-ಅರಶಿನಕುಪ್ಪೆ ಗ್ರಾಮದ ಶ್ರೀ ಮಂಜುನಾಥ ಮತ್ತು ನವನಾಗನಾಥ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜೆ, ಹೋಮ, ಅಭಿಷೇಕ, ತಂಬಿಲ ಸೇವೆ, ಮಹಾಮಂಗಳಾರತಿ ನಡೆಯಿತು. ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್‌ಜೀ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ, ಪರಮೇಶ್ವರ ಭಟ್, ವಾದಿರಾಜ್ ಭಟ್ ಅವರುಗಳ ಪೌರೋಹಿತ್ವದಲ್ಲಿ ವಿಶೇಷ ಪೂಜೆಗಳು ನಡೆದವು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಮೇಶ್ ಸೇರಿದಂತೆ ನೂರಾರು ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.ಗೋಣಿಕೊಪ್ಪಲು : ನಗರದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿAದಲೇ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಗೋಣಿಕೊಪ್ಪಲಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ತಮ್ಮ ಹರಕೆ ತೀರಿಸಿದರು. ಸಾರ್ವಜನಿಕರಿಗೆ ದೇವಸ್ಥಾನ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು. ತುಲಾಭಾರ ಸೇವೆಗಳು ನಡೆದವು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.ಕುಶಾಲನಗರ: ಕುಶಾಲನಗರದ ಹೌಸಿಂಗ್ ಬೋರ್ಡ್ ಶ್ರೀ ಉದ್ಭವ ಸುಬ್ರಮಣ್ಯ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು. ೩ ದಿನಗಳ ಕಾಲ ದೇವಾಲಯದಲ್ಲಿ ಕುಂಭಾಭಿಷೇಕ, ಗಣಹೋಮ ಮತ್ತು ನವಗ್ರಹ ಪೂಜಾ ಕಾರ್ಯಕ್ರಮಗಳು ಜರುಗಿ ಸುಬಹ್ಮಣ್ಯ ಸ್ವಾಮಿಗೆ ಅಭಿಷೇಕ, ಷಷ್ಠಿ ಪೂಜೆ ಆರಂಭಗೊAಡು ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭವ್ಯ ಮಂಟಪದಲ್ಲಿ ಮಂಗಳವಾದ್ಯದೊAದಿಗೆ ಉತ್ಸವ ಮೂರ್ತಿ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿತು.

ದೇವಾಲಯ ಸಮಿತಿ ಅಧ್ಯಕ್ಷ ಡಿ.ಆರ್ ಚಿಕ್ಕೆಗೌಡ, ಗೌರವಾಧ್ಯಕ್ಷÀ ಮೊಗಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಮಧುಸೂಧನ್, ಪ್ರಮುಖರಾದ ಎನ್.ಡಿ ನಾಗೇಶ್, ಹೆಚ್.ಡಿ ಶಿವಾಜಿ ರಾವ್, ಎನ್.ಕೆ ಹನುಮರಾಜ್, ನಿರ್ದೇಶಕರುಗಳು ಇದ್ದರು. ಕ್ಷೇತ್ರ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಆಗಮಿಸಿ ಪೂಜೆ ಸಲ್ಲಿಸಿದರು.ಸಿದ್ದಾಪುರ

ಸಿದ್ದಾಪುರ: ಸಿದ್ದಾ ಪುರದ ಮಡಿಕೇರಿ ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸ ಲಾಗಿತ್ತು. ದೇವಾಲಯದ ಮುಖ್ಯಸ್ಥರಾದ ಮಣಿ ನಾರಾಯಣ ಹಾಗೂ ಇನ್ನಿತರರು ಹಾಜರಿದ್ದರು. ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

ಸುಂಟಿಕೊಪ್ಪ : ಇಲ್ಲಿನ ಮಾದಾಪುರ ರಸ್ತೆಯ ಮಧುರಮ್ಮ ಬಡಾವಣೆಯಲ್ಲಿ ನೆಲೆಗೊಂಡಿರುವ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿ ಪ್ರಯುಕ್ತ ನಾಗದೇವರ ದೇವಸ್ಥಾನದಲ್ಲಿ ೩೦ನೇ ವಾರ್ಷಿಕೋತ್ಸವ ವಿಜೃಂಭಣೆಯಿAದ ನೆರವೇರಿತು.ಮುಂಜಾನೆಯಿAದಲೇ ನಾಗಾಭಿಷೇಕ ಪೂಜೆÀ, ನಾಗಾಲಂಕಾರ, ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯ ನಡೆಯಿತು. ಬಳಿಕ ಅನ್ನದಾನ ನಡೆಯಿತು. ಸುಂಟಿಕೊಪ್ಪ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಇತರ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೆದಕಲ್ ಭದ್ರಕಾಳಿ ದೇವಸ್ಥಾನದ ದೇವರ ಕಾಡು ನಾಗಬನದಲ್ಲಿ, ಕೊಡಗರ ಹಳ್ಳಿ ಬೈತೂರಪ್ಪ ದೇವಸ್ಥಾನ ನಾಗಬನದಲ್ಲಿ ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪನ್ಯ ಬೆಳ್ಳಾರಿಕಮ್ಮ ದೇವಸ್ಥಾನದಲ್ಲಿಯೂ ಪೂಜೆ ನೆರವೇರಿತು.

೫ನೇ ಪುಟಕ್ಕೆ (ನಾಲ್ಕನೇ ಪುಟದಿಂದ) ಭಾಗಮಂಡಲ: ಭಗಂಡೇಶ್ವರ - ತಲಕಾವೇರಿ ದೇವಾಲಯದಲ್ಲಿ ಷಷ್ಠಿ ಉತ್ಸವದ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಅಧಿಕ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಸುಬ್ರಹ್ಮಣ್ಯ ದೇವರಿಗೆ ಬೆಳಿಗ್ಗೆ ಗಣ ಹೋಮ ನೆರವೇರಿಸಲಾಯಿತು, ಪಂಚಾಮೃತ ಅಭಿಷೇಕ ಸಂಪ್ರೋಕ್ಷಣೆ, ಕಳಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ರಾತ್ರಿ ಭೂತ ಬಲಿ ಹಾಗೂ ಸುಬ್ರಹ್ಮಣ್ಯ ದೇವರ ಉತ್ಸವ ನೆರವೇರಿತು.

ತಾ. ೩೦ರಂದು ಮಹಾವಿಷ್ಣು ದೇವರಿಗೆ ಬೆಳಿಗ್ಗೆ ೭.೩೦ಕ್ಕೆ ಗಣ ಹೋಮ ನಡೆಯಲಿದೆ. ಮಹಾವಿಷ್ಣು ಮತ್ತು ಪರಿವಾರ ದೇವರುಗಳ ಶುದ್ಧಿ ಕಲಶ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಶ್ರೀ ಭೂತಕೋಲ ಹಾಗೂ ಶ್ರೀ ಮಹಾವಿಷ್ಣು ದೇವರ ಉತ್ಸವ ನಡೆಯಲಿದೆ ಎಂದು ಭಗಂಡೇಶ್ವರ-ತಲಕಾವೇರಿ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.

ಮುಳ್ಳೂರು : ಮಂಗಳವಾರ ಸುಬ್ರಹ್ಮಣ್ಯ ಷಷ್ಠಿ ಹಬ್ಬದ ಪ್ರಯುಕ್ತ ಶನಿವಾರಸಂತೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಹಬ್ಬದ ಪ್ರಯುಕ್ತ ಶನಿವಾರಸಂತೆ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣಪತಿ, ಪಾರ್ವತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು, ದೇವರಿಗೆ ಕ್ಷೀರಾಭಿಷೇಕ ಮತ್ತು ಎಳನೀರು ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾಧಿಗಳು ಹಬ್ಬದ ಪ್ರಯುಕ್