ಪೊನ್ನಂಪೇಟೆ, ನ. ೨೯: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕ ) ನಿಯಮಗಳು, ೨೦೨೧ ರಲ್ಲಿ ನಿರ್ದಿಷ್ಟಪಡಿಸಿರುವಂತೆ ಪೋನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಕಟ್ಟಡಗಳು ಮತ್ತು ಭೂಮಿಗಳ ಮೇಲೆ ಕರ್ನಾಟಕ ಮುದ್ರಾಂಕ ಅಧಿನಿಯಮ, ೧೯೫೭ ರ ೪೫ ಬಿ ಪ್ರಕರಣದಡಿಯಲ್ಲಿ ಪ್ರಕಟಿಸಿರುವ ಮಾರುಕಟ್ಟೆ ಮಾರ್ಗಸೂಚಿ ದರಗಳನ್ವಯ ಸ್ವತ್ತಿನ ಮೂಲ ಮೌಲ್ಯ/ಸ್ವತ್ತಿನ ಬಂಡವಾಳ ಮೌಲ್ಯದ ಮೇಲೆ ಮೌಲ್ಯಾಧಾರಿತ ವರ್ಗೀಕರಣದಲ್ಲಿ ನಿಗದಿಪಡಿಸಿದ ತೆರಿಗೆಯ ದರಗಳಂತೆ ನಿರ್ಧರಿತ ಆಸ್ತಿ ತೆರಿಗೆಗೆ ಸಾರ್ವಜನಿಕರು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಯಿಂದ ನಮೂನೆ ೯ ಮತ್ತು ೧೧ ಎ (ಕರ ನಿರ್ಧರಣೆ ಪಟ್ಟಿ) ಯನ್ನು ನಿಗದಿತ ಶುಲ್ಕ ಪಾವತಿಸಿ ಪಡೆದು ಕೊಳ್ಳಬಹುದಾಗಿದೆ.
ನಮೂನೆ ೯ ಮತ್ತು ೧೧ ಎ ಅನ್ನು ಆಯಾ ತಿಂಗಳ ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ದಿನಾಂಕದಿAದ ಅನುಮೋದನೆ ಮಾಡಲಾಗುತ್ತದೆ. ಸಭೆಯಲ್ಲಿ ಅನುಮೋದನೆ ಗೊಂಡ ನಂತರ ೪೫ ಕೆಲಸದ ದಿನಗಳಲ್ಲಿ (ತಾಲೂಕು ಪಂಚಾಯಿತಿಯಿAದ ಏಕನಿವೇಶ ಅನುಮೋದನೆ ಪಡೆಯಲು ತಗಲುವ ದಿನಗಳನ್ನು ಹೊರತುಪಡಿಸಿ) ಇ-ಸ್ವತ್ತು ತಂತ್ರಾಶದ ಮುಖಾಂತರ ಶೃಜಿಸಿ ವಿತರಿಸಲಾಗುವುದು. ಸಾರ್ವಜನಿಕರು ನಮೂನೆ ಶುಲ್ಕ ೧೦೦ ರೂಪಾಯಿಯನ್ನು ಪಾವತಿಸಿ ಪಡೆದುಕೊಳ್ಳಬಹುದು. ಆಸ್ತಿ ತೆರಿಗೆ ಪ್ರತ್ಯೇಕವಾಗಿರುತ್ತದೆ. ಸಲ್ಲಿಕೆಯಾದ ಅರ್ಜಿಗಳ ಪೂರಕ ದಾಖಲಾತಿಗಳನ್ನು ಪರಿಶೀಲಿಸಿ ಅಂಗೀಕರಿಸುವ ಅಥವಾ ಅರ್ಜಿ ಅಪೂರ್ಣವಾಗಿದ್ದರೆ ತಿರಸ್ಕರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಹೊಂದಿರುತ್ತದೆ. ನಮೂನೆ ೯ ಮತ್ತು ೧೧ಎ ಪಡೆಯಲು ಬೇಕಾಗುವ ದಾಖಲಾತಿಗಳು. ಅರ್ಜಿ, ೫೦ ರೂ. ಗಳ ಬಾಂಡ್ ಪೇಪರ್, ಇ ಸಿ ಪ್ರತಿ, ಆರ್ ಟಿ ಸಿ, ಎಂ.ಸಿ.ಪ್ರತಿ, ಭೂ ಪರಿವರ್ತನಾ ಆದೇಶ, ತೆರಿಗೆ ಪಾವತಿ ರಶೀಧಿ, ಸೇಲ್ ಡೀಡ್/ವಿಭಾಗ ಪತ್ರ/ಇತರೆ, ಸೈಟ್ ಸ್ಕೆಚ್, ೨೦೧೩ ರ ಹಿಂದಿನ ವಿದ್ಯುತ್ ಬಿಲ್, ಆಧಾರ್ ಪ್ರತಿ, ಅರ್ಜಿದಾರರ ಭಾವಚಿತ್ರ ಮತ್ತು ಸ್ಥಳದ ಚಿತ್ರ, ಹಕ್ಕುಪತ್ರ, ೨೦೧೩ ರ ಹಿಂದಿನ ಕಟ್ಟಡ ಪರವಾನಗಿ, ಏಕ ನಿವೇಶನ ಆದೇಶ, ಇತರೆ (ಅಗತ್ಯವಿದ್ದಲ್ಲಿ) ಬಡಾವಣೆ ಆದೇಶ ಮತ್ತು ಸರ್ಕಾರದ ಇತರೆ ಆದೇಶದಂತೆ ದಾಖಲೆ ಸಲ್ಲಿಸಬೇಕು.
ನಮೂನೆ ೧೧ಬಿ ಪಡೆಯಲು ಬೇಕಾಗುವ ದಾಖಲಾತಿಗಳು ಅರ್ಜಿ, ೫೦ ರೂ. ಗಳ ಬಾಂಡ್ ಪೇಪರ್, ನಮೂನೆ ೯ ಮತ್ತು ೧೧ಎ ಗೆ ಬೇಕಾದ ದಾಖಲಾತಿಗಳು, ಫಾರಂ ಹೌಸ್ ಆದೇಶ, ಸರ್ಕಾರದ ಆದೇಶಗಳಿ ಗನುಸಾರ ಇತರೆ ದಾಖಲಾತಿಗಳನ್ನು ನೀಡಬೇಕು. ನಮೂನೆ ೯ ಮತ್ತು ೧೧ ಎ ಅನ್ನು ಪಡೆಯಲು ಯಾವುದೇ ಮಧ್ಯವರ್ತಿಗಳ ಪ್ರವೇಶಕ್ಕೆ ಆಸ್ಪದವಿರುವುದಿಲ್ಲ. ಸಾರ್ವಜನಿಕರು ನೇರವಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಪಂಚಾಯಿತಿ ಆಡಳಿಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.