ಪೊನ್ನಂಪೇಟೆ, ನ. ೨೯: ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆ ಪ್ರಶಾಂತಿ ನಿಲಯದ ಬಿ.ಎಡ್ ಕಾಲೇಜಿನಲ್ಲಿ ದೂರ ಶಿಕ್ಷಣ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಉಪನ್ಯಾಸಕರಿಗೆ ಗುರುವಂದನೆ ಸಲ್ಲಿಸಿದರು. ಈ ಸಂದರ್ಭ ಬಿ.ಎಡ್. ವಿಭಾಗದ ಪ್ರಾಚಾರ್ಯ ಪಿ.ಎ. ನಾರಾಯಣ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಎರಡು ವರ್ಷಗಳಲ್ಲಿ ಪಡೆದ ಜ್ಞಾನವನ್ನು ತರಗತಿ ಬೋಧನೆಯಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಸಫಲರಾಗುವ ಮೂಲಕ ದೇಶಕ್ಕಾಗಿ ಉತ್ತಮ ಸತ್ಪçಜೆಗಳನ್ನು ನಿಮ್ಮ ಶಾಲೆಗಳಲ್ಲಿ ಹೊರಹೊಮ್ಮಿಸಲು ಕಂಕಣಬದ್ದರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಾಯಿ ಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಝರು ಗಣಪತಿ ಅವರು ಮಾತನಾಡಿ, ಮಕ್ಕಳಲ್ಲಿ ಉತ್ತಮ ಮಾನವೀಯ ಮೌಲ್ಯಗಳು ಮತ್ತು ಉತ್ತಮ ಸಂಸ್ಕಾರಗಳನ್ನು ಬೆಳೆಸುವಂತಹ ಪ್ರಜ್ಞಾವಂತ ಶಿಕ್ಷಕರಾಗುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬಿ.ಎಡ್ ದೂರ ಶಿಕ್ಷಣದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಭಾಗವಹಿದ್ದರು.

ಸೌಮ್ಯ ಸ್ವಾಗತಿಸಿ ವಿದ್ಯಾ ವಂದಿಸಿದರು. ಓಬಳೇಶ್ ಮತ್ತು ಸುಮ ನಿರೂಪಿಸಿದರು.