ಮಡಿಕೇರಿ, ನ. ೨೮: ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಬಲ್ಲಣಮಾಡ ರೀಟಾ ದೇಚಮ್ಮ ಅವರು ಆಯ್ಕೆಗೊಂಡಿದ್ದಾರೆ. ಈ ಹಿಂದಿನ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಚಿರಿಯಪಂಡ ಇಮ್ಮಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಪೂವಯ್ಯ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಮಹಿಳಾ ಒಕೂಟದ ಅಧ್ಯಕ್ಷರಾಗಿ ಬಲ್ಲಣಮಾಡ ರೀಟಾ ದೇಚಮ್ಮ, ಉಪಾಧ್ಯಕ್ಷರಾಗಿ ಮೂವೇರ ಬೊಳ್ಳು ಕುಟ್ಟಪ್ಪ, ಕಾರ್ಯದರ್ಶಿ ಚೇನಂಡ ಮೀರಾ ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ ಹಾಗೂ ಖಜಾಂಚಿಯಾಗಿ ಕಳ್ಳಿಚಂಡ ಅಕ್ಕಮ್ಮ ಮುತ್ತಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಈ ಹಿಂದಿನ ಪೊಮ್ಮಕ್ಕಡ ಕೂಟದ ಆಡಳಿತ ಪದಾಧಿಕಾರಿಗಳಾದ ಚಿರಿಯಪಂಡ ಇಮ್ಮಿ ಉತ್ತಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಸಣ್ಣುವಂಡ ಅನಿತಾ ಕಾವೇರಪ್ಪ ಅವರು ಮುಂದಿನ ಆಡಳಿತ ಮಂಡಳಿ ಸಲಹಾ ಸಮಿತಿಗಾರರಾಗಿ ಆಯ್ಕೆ ಗೊಂಡರು. ಈ ಸಂದರ್ಭದಲ್ಲಿ ಎಲ್ಲಾ ಕೊಡವ ಸಮಾಜಗಳ ಪೊಮ್ಮಕ್ಕಡ ಕೂಟದ ಸದಸ್ಯರು ಹಾಜರಿದ್ದರು.