ಸುಂಟಿಕೊಪ್ಪ, ನ. ೨೭ : ಸುಂಟಿಕೊಪ್ಪ ನಿವಾಸಿ ಸುರೇಶ್ ಮತ್ತು ಪುಷ್ಪಲತ ದಂಪತಿಗಳ ಪುತ್ರಿ ಸ್ಪಂದನ ಭಾರತೀಯ ನೌಕಪಡೆಯಲ್ಲಿ ಸಬ್‌ಲೆಪ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.
ಸಿವಿಲ್ ಇಂಜಿನಿಯರಿAಗ್ ಪದವಿ ಪಡೆದಿರುವ ಸ್ಪಂದನ ಭಾರತೀಯ ನೌಕಪಡೆಯನ್ನು ಸೇರಿ ತರಬೇತಿ ಅವಧಿಯಲ್ಲಿ ತಮ್ಮ ತಂಡದ ನೇತೃತ್ವ ವಹಿಸಿ ಸಮಗ್ರ ಸಾಧನೆಯೊಂದಿಗೆ ೪ನೇ ಸ್ಥಾನ ಪಡೆದಿದ್ದಾರೆ. ಇದೀಗ ತರಬೇತಿಯ ಬಳಿಕ ವಿಶಾಖಪಟ್ಟಣಂನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಲಿದ್ದಾರೆ.