ಸೋಮವಾರಪೇಟೆ, ನ. ೨೮: ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿದ್ದು, ಇದೀಗ ಹಾಸನಕ್ಕೆ ವರ್ಗಾವಣೆ ಗೊಂಡಿರುವ ವಿಜಯ ಅಂಗಡಿ ಅವರನ್ನು ಸೋಮವಾರಪೇಟೆ ಲಯನ್ಸ್ ಕ್ಲಬ್‌ನಿಂದ ಸನ್ಮಾನಿಸ ಲಾಯಿತು.
ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷರಾದ ಸಿ. ಕೆ. ರೋಹಿತ್ ವಹಿಸಿದ್ದರು. ಈ ಸಂದರ್ಭ ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಖಜಾಂಜಿ ಜಿ. ಟಿ. ಯೋಗೇಂದ್ರ, ನಿಕಟಪೂರ್ವ ಅಧ್ಯಕ್ಷ ಸಿ. ಕೆ. ಮಲ್ಲಪ್ಪ, ಎ.ಎಂ. ಹರೀಶ್, ಪಿ.ಎಸ್. ಮಂಜುನಾಥ ಚೌಟ, ಎಸ್.ಎನ್. ಯೋಗೇಶ್, ಎ.ಆರ್. ಮುತ್ತಣ್ಣ, ಎ.ಎಸ್. ಮಹೇಶ್, ಎಸ್.ಬಿ. ಲೀಲಾರಾಮ್, ಸಿ.ಕೆ. ಶಿವಕುಮಾರ್, ಲಿಂಗಪ್ಪ, ಗಣೇಶ್, ನಿರ್ವಾಣಿಶೆಟ್ಟಿ, ಅಮೃತ ರೋಹಿತ್, ಆಶಾ ಯೋಗೇಂದ್ರ, ಶಶಿಕಲಾ ಚೌಟ ಸೇರಿದಂತೆ ಉಪಸ್ಥಿತರಿದ್ದರು.