ಕುಶಾಲನಗರ, ನ. ೨೮: ಕುಶಾಲನಗರದ ಯುವತಿಯೊಬ್ಬಳು ಸ್ಯಾಂಡಲ್ವುಡ್ ಪ್ರವೇಶಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಕನ್ನಡ ಸಿನೆಮಾ ‘ರೆಡ್ರಮ್’ ನಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.
ಸ್ಥಳೀಯ ನಿವಾಸಿ ಬೆಳ್ಯನ ಬಬಿತ ಮತ್ತು ಸುರೇಶ್ ದಂಪತಿ ಪುತ್ರಿ ಮಧುರ ಸುರೇಶ್, ಮೊಡೆಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ತರಬೇತಿ ಪಡೆದಿದ್ದು, ಕೌಟಿಲ್ಯ ಸಿನೆಮಾಸ್ ಹಾಗೂ ಹನಿ ಚೌಧರಿ ಫಿಲಂಸ್ ಲಾಂಛನದಡಿ ಪ್ರಾರಂಭಗೊAಡಿರುವ ಚಿತ್ರದ ಚಿತ್ರೀಕರಣ ಉತ್ತರ ಪ್ರದೇಶದ ವಿವಿಧೆಡೆ ನಡೆದಿದೆ.