ಶನಿವಾರಸAತೆ, ನ. ೨೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಡ್ಲಿ ವೃತ್ತದ ಪೌತಿಖಾತೆ ಆಂದೋಲನ ತಾ. ೨೯ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ನರಗುಂದ, ಹೋಬಳಿ ಉಪತಹಶೀಲ್ದಾರ್ ಪುರುಷೋತ್ತಮ್, ಕಂದಾಯ ನಿರೀಕ್ಷಕ ಮನುಕುಮಾರ್ ಪಾಲ್ಗೊಳ್ಳುವರು. ಹಂಡ್ಲಿ ವೃತ್ತಕ್ಕೆ ಸಂಬAಧಿಸಿದ ಗ್ರಾಮಗಳ ಪೌತಿ ಖಾತೆ ಬದಲಾವಣೆ ಆಂದೋಲನದಲ್ಲಿ ಅರ್ಜಿ ನಮೂನೆ ೧ರ ಜೊತೆಗೆ ಪಹಣಿ, ಮೃತರ ಮರಣ ಸಮರ್ಥನಾ ಪತ್ರ, ವಂಶವೃಕ್ಷ, ಪಡಿತರ ಚೀಟಿ, ಆಧಾರ್ ಕಾರ್ಡ್ ಸಲ್ಲಿಸಿ ಸದುಪಯೋಗಪಡಿಸಿ ಕೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿ ಶ್ವೇತಶ್ರೀ ತಿಳಿಸಿದ್ದಾರೆ.