*ಗೋಣಿಕೊಪ್ಪ, ನ. ೨೬: ಕೊಡಗು ಹಿಂದು ಮಲಯಾಳಿ ಸಮಾಜದ ಯೂತ್ ವಿಂಗ್ ವತಿಯಿಂದ ಕೊಡಗು ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ತಾ. ೩೦ ರಂದು ಬೃಹತ್ ರಕ್ತದಾನ ಶಿಬಿರವನ್ನು ಗೋಣಿಕೊಪ್ಪದಲ್ಲಿರುವ ಕೊಡಗು ಹಿಂದು ಮಲಯಾಳಿ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯೂತ್ವಿಂಗ್ ಅಧ್ಯಕ್ಷ ಎ.ಎಂ. ಅಖಿಲ್ ತಿಳಿಸಿದ್ದಾರೆ.
ಸಮಾಜ ಸದಸ್ಯರಲ್ಲಿ ರಕ್ತದಾನದ ಮಹತ್ವದ ಜಾಗೃತಿ ಕೂಡ ನೀಡಲಾಗುತ್ತಿದೆ. ಹೆಚ್ಚು ಜನರು ರಕ್ತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಆಟೋ ಚಾಲಕರು, ಕಾರ್ಮಿಕ ವರ್ಗ ಸೇರಿದಂತೆ ಎಲ್ಲ ವರ್ಗದವರು ರಕ್ತದಾನದಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ರಕ್ತದ ಬೇಡಿಕೆ ಹೆಚ್ಚಿರುವುದರಿಂದ ಸಮರ್ಪಕವಾಗಿ ರಕ್ತ ದೊರೆಯುವಂತೆ ಮಾಡಲು ಎಲ್ಲರ ಸಹಕಾರ ಮುಖ್ಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ೯೫೩೫೫೩೧೫೭೪, ೮೨೭೭೦೨೧೨೧೨ ಸಂಖ್ಯೆ ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಟಿ.ಪಿ. ಚೈತನ್ಯ, ಸಹ-ಕಾರ್ಯದರ್ಶಿ ಕೆ.ವಿ. ಸುನಿಲ್, ನಿರ್ದೇಶಕ ಕೆ. ಸತೀಶ್ ಇದ್ದರು.