ಸೋಮವಾರಪೇಟೆ, ನ. ೨೬: ಸಮೀಪದ ಹಾನಗಲ್ಲು ಮತ್ತು ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೨೮ರಂದು ಪೂರ್ವಾಹ್ನ ೧೦.೩೦ ರಿಂದ ೧.೩೦ರವರೆಗೆ ಸೋಮವಾರಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಗ್ರಾಮ ಲೆಕ್ಕಿಗರಾದ ರಜಾಕ್ ತಿಳಿಸಿದ್ದಾರೆ. ಶನಿವಾರಸಂತೆ ಹೋಬಳಿಯ ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೩೦ರಂದು ಬೆಳಿಗ್ಗೆ ೧೦.೩೦ರಿಂದ ೧.೩೦ರವರೆಗೆ ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ನಡೆಯಲಿದೆ. ಸಾರ್ವಜನಿಕರು ಅರ್ಜಿ, ಪಹಣಿ, ಮೃತರ ಮರಣ ಸಮರ್ಥನಾ ಪತ್ರ, ವಂಶವೃಕ್ಷ, ಪಡಿತರ ಚೀಟಿ, ಆಧಾರ್ ಕಾರ್ಡ್ನೊಂದಿಗೆ ಆಂದೋಲನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.