ಮಡಿಕೇರಿ, ನ. ೨೬: ಕೊಡವ ಜನಾಂಗಕ್ಕೆ ಸಂಬAಧಿಸಿದAತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ಮುಂದಿರಿಸಿರುವ ಬೇಡಿಕೆಗಳ ಈಡೇರಿಕೆ ಕುರಿತಾಗಿ ಸುಪ್ರೀಂಕೋರ್ಟ್ನಲ್ಲಿ ಪ್ರಯತ್ನ ನಡೆಸಲಾಗುವುದು. ಈ ಬೇಡಿಕೆಗಳು ನ್ಯಾಯೋಚಿತವಾಗಿದ್ದು, ಈ ಬಗ್ಗೆ ಸ್ವತಃ ತಾವೇ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಾಡಲಿರುವುದಾಗಿ ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಡಾ. ಸುಬ್ರಮಣ್ಯನ್ ಸ್ವಾಮಿ ಅವರು ಆಶ್ವಾಸನೆಯಿತ್ತರು.
ಸಿಎನ್ಸಿ ಸಂಘಟನೆಯಿAದ ನಗರದ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ನಲ್ಲಿ ಈ ಬಾರಿ ಏರ್ಪಡಿಸಲಾಗಿದ್ದ ೩೨ನೆಯ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಡಾ. ಸ್ವಾಮಿ ಅವರು ಮಾತನಾಡಿದರು. ಮುಂದಿನ ವರ್ಷದ ಕೊಡವ ನ್ಯಾಷನಲ್ ಡೇ ಸಂದರ್ಭದÀಲ್ಲಿ ಸಂಘಟನೆಯ ಬೇಡಿಕೆಯಂತೆ ಕೊಡವ ಜನಾಂಗಕ್ಕೆ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ದೊರೆತು ಜನಾಂಗದ ಆಶೋತ್ತರಗಳು ಈಡೇರಲಿವೆ ಎಂಬುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಸ್ವಾಮಿ ಅವರು, ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದರು.
ಕೊಡವರಿಗೆ ಭೂ-ರಾಜಕೀಯ ಸ್ವಾಯತ್ತತೆ ದೊರಕುವ ಸಂಬAಧ ವಕೀಲ ಸತ್ಯ ಸಬರ್ವಾಲ್ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಅರ್ಜಿ ಸಂಬAಧ ತಾವೇ ಕೋರ್ಟ್ನಲ್ಲಿ ವಾದ ಮಾಡಿ ಸ್ವಾಯತ್ತತೆ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಸ್ವಾಮಿ ಅವರು ಹೇಳಿದರು.
೧೯೫೬ ವರೆಗೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಆದರೆ ಯಾವುದೇ ಕಾರಣವಿಲ್ಲದೇ ಕೊಡಗನ್ನು ಕರ್ನಾಟಕಕ್ಕೆ ವಿಲೀನಗೊಳಿಸಿ ಅನ್ಯಾಯ ಮಾಡಲಾಗಿದೆ. ಕೊಡವರು ಹೋರಾಟಗಾರರು. ಸೇನಾ ಕ್ಷೇತ್ರದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಂತಹ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಕೊಡಗು ಕೊಡುಗೆ ನೀಡಿದೆ. ಆದರೂ ಸರಕಾರ ಕೊಡವರ ಹಕ್ಕುಗಳನ್ನು ಜನಾಂಗಕ್ಕೆ ನೀಡದೆ ಅನ್ಯಾಯ ಎಸಗಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ಸಂಘಟನೆಯ ಬೇಡಿಕೆಗಳ ಕುರಿತು ಮಾತನಾಡಿದ್ದೆ. ಅವರು ಅಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಇದೀಗ ಸರಕಾರವೇ ಬದಲಾಗಿದೆ. ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೂ ಈ ಕುರಿತಾಗಿ ಮಾತನಾಡುವುದಾಗಿ ಭರವಸೆ ಇತ್ತರು.
ತೆಲಂಗಾಣ, ಉತ್ತರಾಖಂಡ, ಹಿಮಾಚಲ, ಹರ್ಯಾಣ ರಾಜ್ಯಗಳು ನೂತನ ರಾಜ್ಯಗಳಾಗಿದ್ದು ನಿರಂತರ ಹೋರಾಟದ ಫಲವಾಗಿದೆ. ಕೊಡಗು ಈ ಹಿಂದೆಯೇ ಪ್ರತ್ಯೇಕ ರಾಜ್ಯವಾಗಿತ್ತು. ಆದರೆ ೧೯೫೬ರಲ್ಲಿ ಕರ್ನಾಟಕದೊಂದಿಗ ವಿಲೀನಗೊಂಡಿತು. ಈ ತಪ್ಪನ್ನು ಸರಿಪಡಿಸಬೇಕು. ಆದ್ದರಿಂದ ಕೊಡಗನ್ನು ರಾಜ್ಯವನ್ನಾಗಿ ಮಾಡುವ ಬೇಡಿಕೆಯು ಅರ್ಥಹೀನವಲ್ಲ. ಸಂವಿಧಾನದ ಪರಿಚ್ಛೇದ ೩೭೧ನ ಸಹಾಯವಿಲ್ಲದೆಯೇ ಕೊಡವರ ಸಾಂವಿಧಾನಿಕ ಹಕ್ಕು ಸೇರಿದಂತೆ ಈ ಹಿಂದೆಯೇ ಕೊಡಗು ರಾಜ್ಯವಾಗಿದ್ದ ಅಂಶಗಳ ಆಧಾರದಲ್ಲಿ ತಾವು ಸುಪ್ರೀಂ ಕೋರ್ಟ್ನಲ್ಲಿ ವಾದ ಮಾಡಿ
(ಮೊದಲ ಪುಟದಿಂದ) ಕೊಡವರ ಬೇಡಿಕೆಗಳನ್ನು ಈಡೇರಿಸಬಹುದಾಗಿದೆ ಎಂದರು. ಕೊಡವರಿಗೆ ಭೂ-ರಾಜಕೀಯ ಸ್ವಾಯತತ್ತೆ ಒದಗಿಸುವ ಸಲುವಾಗಿ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು. ಜೂನ್, ಜುಲೈ ಒಳಗಾಗಿ ಬೇಡಿಕೆಗಳ ಈಡೇರಿಕೆಗೆ ಯತ್ನ ಮಾಡಲಾಗುವುದಾಗಿ ಹೇಳಿದರು.
ಶಾಂತಿಯುತ ಹೋರಾಟ – ಜಗದೀಶ್ ಶೆಟ್ಟಿ ಶ್ಲಾಘನೆ
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ವಿರಾಟ್ ಹಿಂದುಸ್ಥಾನ ಸಂಗಮದ ರಾಷ್ಟಿçÃಯ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮಾತನಾಡಿ, ಸಂಘಟನೆಯು ಸಂವಿಧಾನಿಕವಾಗಿ ಶಾಂತಿಯುತವಾಗಿ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುತ್ತಿದೆ. ರಾಷ್ಟçದಲ್ಲಿ ಇತರ ಹಲವು ಹೋರಾಟಗಳು ಅಶಾಂತಿಯುತವಾಗಿ ಅಸಂವಿಧಾನಿಕವಾಗಿ ಒಂದು ರೀತಿಯಲ್ಲಿ ಭಯೋತ್ಪಾದನಾ ವಾತಾವರಣವನ್ನು ಸೃಷ್ಟಿ ಮಾಡಿ ನಡೆದಿವೆ. ಇಂತಹವರಿಗೆ ಅವರುಗಳ ಹಕ್ಕುಗಳೂ ದೊರೆತಿವೆ. ಆದರೆ ಸಿ.ಎನ್.ಸಿ ಶಾಂತಿಯುತವಾಗಿ ಸಂವಿಧಾನಿಕ ಹೋರಾಟ ನಡೆಸಿ ಮಾದರಿ ಎನಿಸಿದೆ. ಲಡಾಕ್, ಬಂಗಾಳ ಹಾಗೂ ಈಶಾನ್ಯ ರಾಜ್ಯಗಳ ಕೆಲ ಜನಾಂಗಗಳಿಗೆ ಭೂ-ಸ್ವಾಯತ್ತತೆ ದೊರಕಿದೆ. ಇದೇ ರೀತಿ ಸಿ.ಎನ್.ಸಿಯ ಬೇಡಿಕೆಗಳಿಗೂ ಮನ್ನಣೆ ನೀಡುವಂತಹ ಕೆಲಸವನ್ನು ಸರಕಾರ ಮಾಡಬೇಕೆಂದರು. ಪವಿತ್ರವಾದ ಕಾವೇರಿ ನದಿ ಹುಟ್ಟುವ ನಾಡನ್ನು ಚುನಾಯಿತ ಜನಪ್ರತಿನಿಧಿಗಳು ನಿರ್ಲಕ್ಷಿಸದೆ ಜನರ ಆಸಕ್ತಿಗಳನ್ನು ಕಾಪಾಡುವತ್ತ ಗಮನಿಸಬೇಕೆಂದರು.
ಪರಿಚ್ಛೇದ ೨೫, ೨೬ ಅನ್ವಯ ಭೂ-ರಾಜಕೀಯ ಸ್ವಾಯತ್ತತೆ ದೊರಕಲಿದೆ
ಸುಪ್ರೀಂ ಕೋರ್ಟ್ ವಕೀಲ ಸತ್ಯ ಸಬರ್ವಾಲ್ ಅವರು ಮಾತನಾಡಿ, ಜನಾಂಗದ ಬೇಡಿಕೆಗಳ ಈಡೇರಿಕೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದರು. ಸಂವಿಧಾನದ ಪರಿಚ್ಛೇದ ೨೫ ಹಾಗೂ ೨೬ರ ಪ್ರಕಾರ ಭೂ-ರಾಜಕೀಯ ಸ್ವಾಯತ್ತತೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಂವಿಧಾನಿಕ ಹೋರಾಟಕ್ಕೆ ಬದ್ಧ – ಎನ್.ಯು ನಾಚಪ್ಪ
ಸಂವಿಧಾನವು ಒಂದು ಪವಿತ್ರ ಗ್ರಂಥವಾಗಿದ್ದು, ಸಂವಿಧಾನ ದಿನವಾದ ನವೆಂಬರ್ ೨೬ ರಂದೇ ಪ್ರತಿ ವರ್ಷ ಕೊಡವ ನ್ಯಾಷನಲ್ ಡೇ ಆಚರಿಸಿಕೊಂಡು ಬರುತ್ತಿದ್ದೇವೆ. ಸಂಘಟನೆಯು ನಡೆಸುವ ಹೋರಾಟವು ಸಾಂವಿಧಾನಿಕವಾಗಿಯೇ ನಡೆಯುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ಯು ನಾಚಪ್ಪ ಅವರು ಹೇಳಿದರು. ೧೯೫೬ರಲ್ಲಿ ಕೊಡಗನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಿದ್ದು ಬಹುದೊಡ್ಡ ಅನ್ಯಾಯವಾಗಿದೆ. ಕರ್ನಾಟಕದ ಉತ್ತರದಲ್ಲಿ ಮರಾಠಿ, ಉರ್ದು, ಹಳೇ ಮೈಸೂರಿನಲ್ಲಿ ಹಳೆ ಕನ್ನಡ, ಬೆಂಗಳೂರಿನ ಗಡಿಭಾಗಗಳಲ್ಲಿ ತೆಲುಗು, ತಮಿಳು, ದಕ್ಷಿಣ ಕನ್ನಡದಲ್ಲಿ ತುಳು ಸೇರಿದಂತೆ ಕೊಡಗಿನಲ್ಲಿ ಕೊಡವ ಭಾಷೆ ಮಾತನಾಡುತ್ತಿದ್ದರೂ ಕರ್ನಾಟಕ ರಾಜ್ಯವನ್ನು ಇವೆಲ್ಲ ಭಾಷಾ ಪ್ರದೇಶಗಳನ್ನೊಳಗೊಂಡು ವಿಲೀನಗೊಳಿಸಿದ್ದು ಅನ್ಯಾಯ. ಈ ಕಾರ್ಯದಿಂದಾಗಿ ಕೊಡವರ ಭೂಮಿ ಹಕ್ಕುಗಳು ಸೇರಿದಂತೆ ಇತರ ಹಕ್ಕುಗಳಿಂದ ವಂಚಿತರಾಗಿದ್ದೇವೆ, ಇದೀಗ ಕೋವಿ ಹಕ್ಕುವಿಗೆ ಕೂಡ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಇಂದು ಹೊರಗಿನವರಿಗೆ, ಹೊರಗಿಂದ ಇಲ್ಲಿಗೆ ಬರುವ ಕೆಲ ಅಧಿಕಾರಿಗಳಿಗೆ, ಬಲಿಷ್ಠರಿಗೆ ಕೊಡಗು ಆದಾಯ ಸೃಷ್ಟಿಸುವ ಒಂದು ಪ್ರದೇಶವಾಗಿ ಮಾರ್ಪಟ್ಟಿದೆ. ಇವೆಲ್ಲವೂ ನಿಲ್ಲಬೇಕಾದರೆ ಭೂ-ರಾಜಕೀಯ ಸ್ವಾಯತ್ತತೆ ದೊರಕುವುದು ಅತ್ಯಗತ್ಯ ಎಂದು ಹೇಳಿದರು. ಕೊಡವರಿಗೆ ಬುಡಕಟ್ಟು ಸ್ಥಾನಮಾನ ನೀಡುವ ಕುರಿತಾಗಿ ಕುಲಶಾಸ್ತç ಅಧ್ಯಯನ ಕಳೆದ ೧೦ ವರ್ಷಗಳಿಂದ ನಡೆಯುತ್ತಿದ್ದು, ಪ್ರಭಾವಿ ಜನಾಂಗವೊAದು ಇದಕ್ಕೆ ಅಡೆತಡೆ ಮಾಡುತ್ತಿರುವ ಬಗ್ಗೆ ನಾಚಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು. ದೇವಾಟ್ಪರಂಬು ನರಮೇಧ ಸ್ಥಳವನ್ನು ಸ್ಮಾರಕವನ್ನಾಗಿ ಮಾಡದೆ ಸರಕಾರ ನಿರ್ಲಕ್ಷö್ಯ ವಹಿಸಿದೆ. ಕಾವೇರಿ ನಾಡಿನಲ್ಲಿ ನಮಗೆ ಕಾವೇರಿ ನೀರು ಸಿಗದ ಪರಿಸ್ಥಿತಿ ಇದೆ. ವಿಶ್ವ ಯುದ್ಧ ಸೇರಿದಂತೆ ಸ್ವಾತಂತ್ರö್ಯ ಕಳೆದು ನಡೆದ ಯುದ್ಧಗಳಲ್ಲಿ ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಭಾಗÀವಹಿಸಿದ್ದರೂ ನಮ್ಮ ಜನಾಂಗವನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಷಾದಿಸಿದರು. ಚೈನಾ ರಾಷ್ಟçದಲ್ಲಿ ೬ ಭೂ-ಸ್ವಾಯತ್ತತೆ ಪ್ರದೇಶಗಳಿವೆ. ರಷ್ಯಾದಲ್ಲೂ ‘ಜಿವ್’ ಜನಾಂಗಕ್ಕೆ ಭೂ-ಸ್ವಾಯತ್ತತೆಯ ಪ್ರದೇಶ ನೀಡಲಾಗಿದೆ. ಆದರೆ ಕೊಡವರು ಹುಟ್ಟಿ ಬೆಳೆದ ನಾಡಿನಲ್ಲೇ ಅವರಿಗೆ ಭೂ-ಸ್ವಾಯತ್ತತೆ ದೊರಕಿಲ್ಲ. ಇದಕ್ಕೆ ಹೋರಾಟ ಅಗತ್ಯ ಎಂದರು.
ಸ್ವಾಮಿಗೆ ಗೆಜ್ಜೆತಂಡ್ ಕೊಡುಗೆ
ಕೊಡವ ಸಾಂಪ್ರದಾಯಿಕ ಗೆಜ್ಜೆತಂಡ್ ಅನ್ನು ಡಾ. ಸುಬ್ರಮಣ್ಯನ್ ಸ್ವಾಮಿ ಅವರಿಗೆ ಸಿ.ಎನ್.ಸಿ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಸ್ವಾಮಿ ಅವರು ಜನಾಂಗದ ಹೋರಾಟಕ್ಕೆ ಸಹಕರಿಸುತ್ತಿರುವ ಹಿನ್ನೆಲೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದು, ಕಾರ್ಯಕ್ರಮಕ್ಕೂ ಮುನ್ನ ಆಗಸಕ್ಕೆ ಗುಂಡು ಹಾರಿಸಿ ಬಾಳೆ ಕಡಿಯಲಾಯಿತು. ದುಡಿಕೊಟ್ಟ್ ಪಾಟ್ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಉಡುಪು ಧರಿಸಿದ್ದ ಕೊಡವರು ಸ್ವಾಮಿಯವರನ್ನು ಬರಮಾಡಿಕೊಂಡರು. ವೇದಿಕೆಯಲ್ಲಿ ಸಿ.ಎನ್.ಸಿ.ಯ ಕಲಿಯಂಡ ಪ್ರಕಾಶ್ ಇದ್ದರು. ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿ, ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು. ವಿರಾಟ್ ಹಿಂದೂಸ್ಥಾನ್ ಸಂಗಮದ ನಿಕುನ್, ಗೋಪಿ, ಸುಧೀರ, ಮಯೂರಿ ಫೌಂಡೇಶನ್ನ ಜಯ ಕೆ.ಶೆಟ್ಟಿ ಸೇರಿದಂತೆ ಸಿ.ಎನ್.ಸಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಮೈಸೂರು ತನಕ ವಿಶೇಷ ಜೆಟ್ ವಿಮಾನದಲ್ಲಿ ಆಗಮಿಸಿ . ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮಿ ಅವರಿಗೆ ಝಡ್ ಪ್ಲಸ್ ದರ್ಜೆಯ ಭದ್ರತೆಯಿದ್ದು, ಶಸ್ತçಸಜ್ಜಿತ ಸಿ.ಆರ್.ಪಿ.ಎಫ್ ಸಿಬ್ಬಂದಿ, ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ರಕ್ಷಣೆ ಒದಗಿಸಿದ್ದರು.
ಕೊಡವ ಜನಪದ ಪರಿಕರಗಳು ಹಾಗೂ ನೃತ್ಯ ಕಲೆಗಳ ಪ್ರದರ್ಶನ ನಡೆಯಿತು.