ಕುಶಾಲನಗರ, ನ. ೨೬: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಕುಶಾಲನಗರದ ಯುವಕನೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಪಿರಿಯಾಪಟ್ಟಣ ಸಮೀಪದ ಆನೆಚೌಕೂರು ಬಳಿ ನಡೆದ ಅಪಘಾತದಲ್ಲಿ ಕುಶಾಲನಗರ ರಥಬೀದಿಯ ನಿವಾಸಿ ತೇಜಸ್ (೨೯) ತೀವ್ರ ಗಾಯಗೊಂಡು ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಟೆಲಿಕಾಮ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತೇಜಸ್ ಗೋಣಿಕೊಪ್ಪದಿಂದ ಪಿರಿಯಾಪಟ್ಟಣ ಮೂಲಕ ತನ್ನ ದ್ವಿಚಕ್ರ ವಾಹನ (ಏಂ-೧೨ U- ೬೫೮೨)ದಲ್ಲಿ ಕುಶಾಲನಗರಕ್ಕೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.