ಮಡಿಕೇರಿ, ನ. ೨೬: ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮೊದಲನೇ ವರ್ಷದ ‘ಕೊಡವ ಪ್ರೀಮಿಯರ್ ಕ್ರಿಕೆಟ್ ಲೀಗ್’ ಗೆ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕ್ರೀಡೆಯೂ ಆಚಾರ, ವಿಚಾರ ಸಂಸ್ಕೃತಿಯ ಅಂಗವಾಗಿದೆ. ಕೊಡವರ ಗುರುತಿಸುವಿಕೆ ಕ್ರೀಡೆಯಿಂದ ಸಾಧ್ಯವಾಗಿದೆ. ಸಂಸ್ಕೃತಿಯನ್ನು ತಿಳಿಸಲು ಕ್ರೀಡಾಕೂಟದಿಂದ ಸಾಧ್ಯವಾಗಿದೆ. ಕ್ರೀಡೆಗೆ ಜನತೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸೋಲು-ಗೆಲುವು ಸಾಮಾನ್ಯ. ಸ್ಪರ್ಧಿಸುವುದು ಮುಖ್ಯ ಎಂದು ಕರೆ ನೀಡಿದ ಅವರು, ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿಯಾಗಿದೆ. ನಿತ್ಯ ಕೆಲ ಗಂಟೆ ಕ್ರೀಡೆಗೆ ಮೀಸಲಿಡುವಂತೆ ಹೇಳಿದರು.
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರನ್ಜಿಟ್ ಟೆಕ್ನೋಲಾಜಿಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನಂದೀರ ಬಿ. ತಿಮ್ಮಯ್ಯ, ಅಂತರರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಟೀಂ ಕೈಮಡ ತಂಡದ ಪ್ರಾಂಚೈಸಿಗಳಾದ ಕಡೇಮಾಡ ಕನಸು ದೇವಯ್ಯ, ರಿತೇಶ್, ಬೆಂಗಳೂರು ಬಂಬAಗ ತಂಡದ ಅವರೆಮಾದಂಡ ಶರಣ್, ಕರಿನೆರವಂಡ ವಿಲಾಸ್, ಕೊಡವ ಬೀರಂಗ ತಂಡದ ಪಾಸುರ ಕಿಶೋರ್, ಚೆಟ್ಟಿಯಂಡ ನೀರನ್, ಎಲ್.ಸಿ.ಎಂ. ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನಂದೀರ ಬಿ. ತಿಮ್ಮಯ್ಯ, ಅಂತರರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಟೀಂ ಕೈಮಡ ತಂಡದ ಪ್ರಾಂಚೈಸಿಗಳಾದ ಕಡೇಮಾಡ ಕನಸು ದೇವಯ್ಯ, ರಿತೇಶ್, ಬೆಂಗಳೂರು ಬಂಬAಗ ತಂಡದ ಅವರೆಮಾದಂಡ ಶರಣ್, ಕರಿನೆರವಂಡ ವಿಲಾಸ್, ಕೊಡವ ಬೀರಂಗ ತಂಡದ ಪಾಸುರ ಕಿಶೋರ್, ಚೆಟ್ಟಿಯಂಡ ನೀರನ್, ಎಲ್.ಸಿ.ಎಂ. ಟಸ್ಕರ್ಸ್ @ ೯೭ ತಂಡದ ತೀತಿರ ರಂಜು, ಚೇದಂಡ ರೋಷನ್, ಆರುಡ ನಾಣಯ್ಯ, ಕೆ.ಎ.೧೨ ವಾರಿಯರ್ಸ್ನ ನಂದೇಟ್ಟಿರ ಜೋಯಪ್ಪ, ಅಂಜಿಕೇರಿ ನಾಡ್ ಕೂಟದ ತೀತೀರ ರೋಶನ್, ಚೆಕ್ಕೇರ ಆದರ್ಶ್, ಟೀಂ ಭಗವತಿಯ ಬಲ್ಲರಂಡ ಸಜನ್, ಮಾಳೆಟಿರ ನವೀನ್, ಎಂ.ಟಿ.ಬಿ. ರಾಯಲ್ಸ್ ತಂಡದ ತಂಬುಕುತ್ತೀರ ಅರುಣ್, ರಾಣಿ, ಪಿ ಆ್ಯಂಡ್ ಜಿ ನಾಲ್ನಾಡ್ ನರಿಯ ತಂಡದ ಬಾಳೆಯಡ ಪ್ರತೀಶ್, ಅಚ್ಚೆಯಡ ಗಗನ್, ಮೈಸೂರು ಮಕ್ಕ ತಂಡದ ಪುದಿಯೊಕ್ಕಡ ಪ್ರವೀಣ್, ಪುಳ್ಳಂಗಡ ಸಿಮ್ಮು ಕುಟ್ಟಪ್ಪ ಹಾಜರಿದ್ದರು.
ಪಾಲೆಂಗಡ ಕಾವ್ಯ ಪ್ರಾರ್ಥಿಸಿ, ಮುಕ್ಕಾಟೀರ ಸುಧಾ ಪೂಣಚ್ಚ ಸ್ವಾಗತಿಸಿ, ಬಾಳೆಯಡ ದಿವ್ಯ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೆ ಮುನ್ನ ಸಾಂಪ್ರದಾಯಿಕ ವಾಲಗದೊಂದಿಗೆ ಗಣ್ಯರನ್ನು ಸ್ವಾಗತಿಸಲಾಯಿತು. ವಿವಿಧ ಕಲಾ ತಂಡಗಳಿAದ ಕೊಡವ ಸಾಂಸ್ಕೃತಿಕ ನೃತ್ಯಗಳು ನಡೆದವು.