ಮಡಿಕೇರಿ, ನ. ೨೬: ಜಿಲ್ಲೆಯ ಕೆಲವು ಶಾಲಾ ಬಸ್‌ಗಳನ್ನು ಮದುವೆ ಹಾಗೂ ಪ್ರವಾಸೋದ್ಯಮಕ್ಕೆ ಸಂಬAಧಪಟ್ಟ ಇನ್ನಿತರ ಕಾರ್ಯಕ್ರಮಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಬಾಡಿಗೆ ರೂಪದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸ್ಥಳೀಯ ಪ್ರವಾಸಿ ಚಾಲಕರು ಹಾಗೂ ಮಾಲೀಕರ ವಾಹನಗಳಿಗೆ ಬಾಡಿಗೆ ಇಲ್ಲದೆ ನಷ್ಟದಲ್ಲಿದ್ದು, ತಮ್ಮ ವಾಹನಗಳಿಗೆ ತೆರಿಗೆ ಕಟ್ಟಲು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬಾಡಿಗೆ ಮಾಡದಂತೆ ಆದೇಶ ಮಾಡಿ ಅಂತಹ ವಾಹನಗಳಿಗೆ ದಂಡ ವಿಧಿಸಿ

ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮ್ಯಾಕ್ಸಿ ಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರಿಗೆ ಇಲಾಖೆಯ ಮೋಟಾರ್ ವಾಹನಗಳ ನಿರೀಕ್ಷಕ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಶಿವರಾಮೇಗೌಡರ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ರವಿ ಗೌಡ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷÀ ಬಿ. ಆರ್.ದಿನೇಶ್, ಉಪಾಧ್ಯಕ್ಷ ವಿನೋದ್, ಖಜಾಂಚಿ ರಾಜೇಶ್, ಕಾರ್ಯದರ್ಶಿ ಸುಜಿತ್, ಸದಸ್ಯರುಗಳಾದ ಶಿವಾಜಿ, ಪುನೀತ್, ವಿಶ್ವಪೂಜಾರಿ, ಹರೀಶ್, ಉಮೇಶ್ ಪೂಜಾರಿ, ಶಿವು, ದರ್ಶನ್, ಪ್ರೀತಮ್ ಗೌಡ, ಸದಸ್ಯರು ಹಾಜರಿದ್ದರು