ಇಸ್ರೊದಿಂದ ೮ ನ್ಯಾನೊ ಉಪಗ್ರಹ, PSಐಗಿ-ಅ೫೪

ರಾಕೆಟ್ ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ

ಶ್ರೀಹರಿಕೋಟ, ನ. ೨೬: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISಖಔ) ಶನಿವಾರ ಪಿಎಸ್‌ಎಲ್‌ವಿ-ಸಿ ೫೪ ರಾಕೆಟ್‌ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಔಛಿeಚಿಟಿsಚಿಣ-೩ ಎಂದು ಕರೆಯಲ್ಪಡುವ ಇಔS-೦೬ ಮತ್ತು ೮ ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿAದ ಯಶಸ್ವಿಯಾಗಿ ಉಡಾವಣೆಗೊಂಡಿತು. ಇಸ್ರೋ ಕೈಗೊಂಡ ಈ ವರ್ಷದ ಕೊನೆಯ ಉಡಾವಣೆ ಇದಾಗಿದೆ. PSಐಗಿ-ಅ೫೪ ಭೂಮಿಯ ವೀಕ್ಷಣಾ ಉಪಗ್ರಹ (ಇಔS-೦೬) ಅಥವಾ ಓಷನ್‌ಸ್ಯಾಟ್‌ನ್ನು ಅದರ ಪ್ರಾಥಮಿಕ ಪೇಲೋಡ್ ಆಗಿ ಒಯ್ಯುತ್ತದೆ. ಎಂಟು ಸಹ-ಪ್ರಯಾಣಿಕ ಉಪಗ್ರಹಗಳನ್ನು ಎರಡು ಗಂಟೆಗಳ ಕಾಲಾವಧಿಯಲ್ಲಿ ಸೂರ್ಯನ ಸಿಂಕ್ರೊನಸ್ ಕಕ್ಷೆಗಳಲ್ಲಿ ಇರಿಸಲಿದೆ. ಭಾರತೀಯ ಕಾಲಮಾನ ಇಂದು ಬೆಳಿಗ್ಗೆ ೧೧.೫೬ಕ್ಕೆ ಉಡಾವಣೆಯಾಗಿದೆ. ಇನ್ನು ಎರಡು ಗಂಟೆಗಳಲ್ಲಿ ಉಪಗ್ರಹಗಳ ಸಂಪೂರ್ಣ ಬೇರ್ಪಡಿಕೆ ಸಂಭವಿಸುವ ನಿರೀಕ್ಷೆಯಿದೆ. ಭೂಮಿಯ ವೀಕ್ಷಣಾ ಉಪಗ್ರಹ-೬ ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ವರ್ಧಿತ ಪೇಲೋಡ್ ವಿಶೇಷಣಗಳು ಮತ್ತು ಅಪ್ಲಿಕೇಶನ್ ಪ್ರದೇಶಗಳೊಂದಿಗೆ ಔಛಿeಚಿಟಿsಚಿಣ-೨ ಬಾಹ್ಯಾಕಾಶ ನೌಕೆಯ ನಿರಂತರತೆಯ ಸೇವೆಗಳನ್ನು ಇದು ಒದಗಿಸುತ್ತದೆ. ಇಸ್ರೋ ಇಂದು ಭೂ ವೀಕ್ಷಣಾ ಉಪಗ್ರಹ, ಓಷನ್‌ಸ್ಯಾಟ್ -೩ ಮತ್ತು ಇತರ ಎಂಟು ಗ್ರಾಹಕ ಉಪಗ್ರಹಗಳನ್ನು ಎರಡು ವಿಭಿನ್ನ ಕಕ್ಷೆಗಳಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಸೆಲ್ಫಿ ತೆಗೆದುಕೊಳ್ಳುವಾಗ ಫಾಲ್ಸ್ಗೆ ಬಿದ್ದು ನಾಲ್ವರು

ಯುವತಿಯರ ಸಾವು, ಓರ್ವಳ ಸ್ಥಿತಿ ಗಂಭೀರ!

ಬೆಳಗಾವಿ, ನ. ೨೬: ಮಹಾರಾಷ್ಟç- ಕರ್ನಾಟಕ ಗಡಿಯಲ್ಲಿರುವ ಕಿತವಾಡ ಫಾಲ್ಸ್ಗೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ ಮತ್ತೋರ್ವಳ ಸ್ಥಿತಿ ಗಂಭೀರವಾಗಿದೆ. ಬಾಶಿಬಾನ್ ಮದರಸ ಶಾಲೆಯಲ್ಲಿ ಓದುತ್ತಿದ್ದ ೪೦ ಯುವತಿಯರ ತಂಡ ಬೆಳಗಾವಿ ನಗರದಿಂದ ೨೬ ಕಿ.ಮೀ. ದೂರದಲ್ಲಿರುವ ಮಹಾರಾಷ್ಟç -ಕರ್ನಾಟಕದ ಗಡಿಯಲ್ಲಿರುವ ಕಿತ್ವಾಡ್ ಅಣೆಕಟ್ಟು ಮತ್ತು ಜಲಪಾತ ವೀಕ್ಷಣೆಗೆ ತೆರಳಿತ್ತು. ಈ ವೇಳೆ ಜಲಪಾತದ ಸೆಲ್ಫಿ ತೆಗೆದುಕೊಳ್ಳಲು ಯುವತಿಯ ತಂಡ ಮುಂದಾಗಿತ್ತು. ಈ ವೇಳೆ ಐವರು ಯುವತಿಯರು ಕಾಲು ಜಾರಿ ಫಾಲ್ಸ್ಗೆ ಬಿದ್ದಿದ್ದಾರೆ. ಮೃತ ಯುವತಿಯರನ್ನು ಉಜ್ವಲ್ ನಗರ ನಿವಾಸಿ ೧೭ ವರ್ಷದ ಆಸೀಯಾ ಮುಜಾವರ್, ಅನಗೋಳದ ೨೦ ವರ್ಷದ ಕುದ್‌ಶೀಯಾ ಹಾಸಂ ಪಟೇಲ್, ಝಟ್‌ಪಟ್ ಕಾಲೋನಿಯ ೨೦ ವರ್ಷದ ರುಕ್ಕಶಾರ್ ಭಿಸ್ತಿ ಹಾಗೂ ೨೦ ವರ್ಷದ ತಸ್ಮಿಯಾ ಎಂದು ಗುರುತಿಸಲಾಗಿದೆ.

ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ರೈತ ಸಾವು!

ಚೆನ್ನೆöÊ, ನ. ೨೬: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ ೮೫ ವರ್ಷದ ರೈತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲೈಯಾರ್‌ನಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಕಚೇರಿ ಎದುರು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ರೈತ ತಂಗವೇಲ್ ಬೆಂಕಿ ಹಚ್ಚಿಕೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಂಗವೇಲ್ ಅವರು ಡಿಎಂಕೆ ಪಕ್ಷದಲ್ಲಿ ಸಕ್ರಿಯ ಸದಸ್ಯರಾಗಿದ್ದು ಪಕ್ಷದ ಕೃಷಿ ಒಕ್ಕೂಟದ ಸಂಘಟಕರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಸದೀಯ ಅಧಿಕೃತ ಭಾಷಾ ಸಮಿತಿಯ ವರದಿಯ ನಂತರ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ವಿರೋಧಿ ಹೋರಾಟ ಕಾವು ಮತ್ತೊಮ್ಮೆ ಏರಿಕೆಯಾಗಿದೆ. ಈ ವರದಿಯಲ್ಲಿ, ಹಿಂದಿ ಮಾತನಾಡುವ ರಾಜ್ಯಗಳಲ್ಲಿರುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಮತ್ತು ಹಿಂದಿಯೇತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನಾಗಿ ಮಾಡಲು ಶಿಫಾರಸು ಮಾಡಲಾಗಿದೆ. ಇದಲ್ಲದೇ ಕೇಂದ್ರೀಯ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಬಳಸಲು ಶಿಫಾರಸು ಮಾಡಲಾಗಿದೆ. ಸಮಿತಿಯ ಶಿಫಾರಸಿಗೆ ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟçದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ

ಬೆಳಗಾವಿ/ ಬೆಂಗಳೂರು, ನ. ೨೬: ಮಹಾರಾಷ್ಟçದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆದಿದ್ದು, ವಿಚಾರಕ್ಕೆ ಸಂಬAಧಿಸಿದAತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಮಹಾರಾಷ್ಟç ಗೃಹ ಸಚಿವರ ಜತೆ ನಮ್ಮ ಗೃಹ ಸಚಿವರು ಚರ್ಚಿಸುತ್ತಾರೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಸೂಚನೆ ನೀಡಿದ್ದೇನೆ. ಎರಡು ರಾಜ್ಯಗಳ ಸಾಮರಸ್ಯ ಹಾಳುಮಾಡುವುದು ಬೇಡ ಎಂದಿದ್ದಾರೆ. ಕರ್ನಾಟಕದ ಬಸ್ ಮೇಲೆ ಮಹಾರಾಷ್ಟçದ ಗೂಂಡಾಗಳಿAದ ಕಲ್ಲು ತೂರಾಟವಾಗಿದೆ. ಮಹಾರಾಷ್ಟç- ಕರ್ನಾಟಕ ಗಡಿಯಲ್ಲಿ ಕಿಡಿಗೇಡಿಗಳು ಪುಂಡಾಟ ನಡೆಸುತ್ತಿದ್ದು, ನಿನ್ನೆ ಮಸಿ ಬಳಿದಿದ್ದು, ಇಂದು ಕರ್ನಾಟಕ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೀರಜ್- ಕಾಗವಾಡ ಮಧ್ಯೆ ಸಂಚಾರ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ. ಬಸ್ ಪುಣೆಯಿಂದ ಅಥಣಿ ಕಡೆಗೆ ಬರುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದ ಗಾಜು ಜಖಂಗೊAಡಿದೆ.

ಶ್ರದ್ಧಾ ಹತ್ಯೆ ಪ್ರಕರಣ: ಅಫ್ತಾಬ್ ಪೂನಾವಾಲಾಗೆ ನ್ಯಾಯಾಂಗ ಬಂಧನ

ನವದೆಹಲಿ, ನ. ೨೬: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾಗೆ ಕೋರ್ಟ್ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದಕ್ಕೂ ಮುನ್ನ ಅಫ್ತಾಬ್‌ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇನ್ನು ವೀಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿ ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ದೆಹಲಿ ಪೊಲೀಸ್ ತಂಡವು ನಾರ್ಕೋ ಪರೀಕ್ಷೆಯ ಮೊದಲು ಕಾರ್ಯವಿಧಾನಕ್ಕಾಗಿ ಅಫ್ತಾಬ್‌ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನ್ಯಾಯಾಂಗ ಬಂಧನ ಹಿನ್ನೆಲೆ ಅಫ್ತಾಬ್‌ನನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಶ್ರದ್ಧಾ ಕೊಲೆ ಪ್ರಕರಣದ ನಿಗೂಢತೆ ಇನ್ನೂ ಕಗ್ಗಂಟಾಗಿದೆ. ಆರೋಪಿ ಅಫ್ತಾಬ್ ತನ್ನ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರೂ, ನ್ಯಾಯಾಲಯದಲ್ಲಿ ಅಫ್ತಾಬ್ ತಪ್ಪಿತಸ್ಥನೆಂದು ಸಾಬೀತುಪಡಿಸಲು ದೆಹಲಿ ಪೊಲೀಸರಿಗೆ ಅಂತಹ ಪುರಾವೆಗಳು ಇನ್ನೂ ಸಿಕ್ಕಿಲ್ಲ. ಶ್ರದ್ಧಾ ಹತ್ಯೆ ದೆಹಲಿಯಲ್ಲಿ ನಡೆದಿದ್ದರೂ ಸಂಪೂರ್ಣ ಸಂಚು ಹಿಮಾಚಲದಲ್ಲಿ ನಡೆದಿದೆ ಎಂದು ದೆಹಲಿ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಪರಿಹರಿಸಲು ದೆಹಲಿ ಪೊಲೀಸರು ಐದು ರಾಜ್ಯಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮುಂಬೈನಲ್ಲಿರುವ ಶ್ರದ್ಧಾ ಮತ್ತು ಅಫ್ತಾಬ್ ಅವರ ಆಪ್ತ ಸ್ನೇಹಿತರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲೂ ಗುರುಗ್ರಾಮದಲ್ಲಿ ಶ್ರದ್ಧಾ ಹತ್ಯೆಗೆ ಬಳಸಿದ ಶಸ್ತಾçಸ್ತçಗಳಿಗಾಗಿ ಪೊಲೀಸರು ಹಲವು ಬಾರಿ ಶೋಧ ನಡೆಸಿದ್ದಾರೆ. ಶ್ರದ್ಧಾಳನ್ನು ಕೊಂದು ಶವವನ್ನು ೩೫ ತುಂಡುಗಳಾಗಿ ಕತ್ತರಿಸಿರುವುದಾಗಿ ವಿಚಾರಣೆ ವೇಳೆ ಅಫ್ತಾಬ್ ತಿಳಿಸಿದ್ದಾನೆ. ಅದರ ನಂತರ, ಮೃತದೇಹದ ತುಂಡುಗಳನ್ನು ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದನು. ಅಫ್ತಾಬ್ ಉಲ್ಲೇಖಿಸಿರುವ ಸ್ಥಳಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸಿದರು. ಆದರೆ ಇನ್ನೂ ಹೆಚ್ಚಿನ ನಿಖರವಾದ ಪುರಾವೆಗಳು ಸಿಗಲಿಲ್ಲ.