ಮಡಿಕೇರಿ, ನ. ೨೬: ಭಾರತ ಸರ್ಕಾರ ಯುವ ಪುರಸ್ಕಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಡಿಕೇರಿ ಇದರ ವತಿಯಿಂದ ೨೦೨೨-೨೩ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಯುವ ಸಂಘ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ೨೦೨೧-೨೨ನೇ ಸಾಲಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ರಾಷ್ಟಿçÃಯ ಭಾವೈಕ್ಯತೆ, ಕೋಮು ಸೌಹಾರ್ದತೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಇನ್ನು ಮುಂತಾದ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಅತ್ಯುತ್ತಮ ಸೇವೆಗೈದಿರುವ ಜಿಲ್ಲೆಯ ಯುವಕ / ಯುವತಿ ಸಂಘಗಳಿಗೆ ಜಿಲ್ಲಾ ಅತ್ಯುತ್ತಮ ಯುವ ಸಂಘ ಪ್ರಶಸ್ತಿಗಾಗಿ ಅರ್ಜಿಯನ್ನು ಕರೆಯಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಸಂಘಕ್ಕೆ ನಗದು ರೂ.೨೫,೦೦೦/- ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ಸಂಘವು ರಾಜ್ಯಮಟ್ಟಕ್ಕೆ, ನಂತರ ಅಂತಿಮವಾಗಿ ರಾಷ್ಟçಮಟ್ಟದಲ್ಲಿ ಅರ್ಹತೆಯನ್ನು ಪಡೆಯುತ್ತದೆ. ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನವಾಗಿ ರೂ.೭೫,೦೦೦/-, ೫೦,೦೦೦/-, ೨೫,೦೦೦/- ಹಾಗೂ ರಾಷ್ಟಿçÃಯ ಮಟ್ಟದಲ್ಲಿ ರೂ.೩,೦೦,೦೦೦/-, ರೂ.೧,೦೦,೦೦೦/-, ರೂ.೫೦,೦೦೦/- ನಗದು ಬಹುಮಾನವಾಗಿ ನೀಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸುವವರು ಈ ಕೆಳಗೆ ತಿಳಿಸಿದ ಮಾಹಿತಿಗಳನ್ನು ಸಲ್ಲಿಸಬೇಕು.
*ಸಂಘವು ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ ೧೯೬೦ರ ಅಧಿನಿಯಮ ಮೇರೆಗೆ ನೋಂದಣಿಯಾಗಿರಬೇಕು.
*ಸAಘವು ನೆಹರು ಯುವ ಕೇಂದ್ರದಲ್ಲಿ ನೋಂದಣಿಯಾಗಿರಬೇಕು ಮತ್ತು ಪ್ರಮಾಣ ಪತ್ರವನ್ನು ಪಡೆದಿರಬೇಕು.
*ಸಂಘವು ಕಡ್ಡಾಯವಾಗಿ ಸಂಘದ ಹೆಸರಿನಲ್ಲಿ ರಾಷ್ಟಿçÃಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರಬೇಕು.
* ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ (ಂuಜiಣ ಖeಠಿoಡಿಣ) ವರದಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
*೨೦೨೧-೨೨ನೇ ಸಾಲಿನಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿರಬೇಕು. ಕಾರ್ಯಗೈದ ಸಾಧನೆಗಳ ಬಗ್ಗೆ ವಿವರ ಮತ್ತು ಇತರೆ ಸಾಧನೆಗಳ ಬಗ್ಗೆ ಮಾಹಿತಿ ಪ್ರತಿಗಳನ್ನು ಲಗತ್ತಿಸಿರಬೇಕು. ದಿನಾಂಕ ೦೧.೦೪.೨೦೨೧ರಿಂದ ೩೧.೦೩.೨೦೨೨ರವರೆಗಿನ ಅವಧಿಗೆ ಸಂಬAಧಪಟ್ಟ ಮಾಹಿತಿಗಳನ್ನು ಮಾತ್ರ ಸಲ್ಲಿಸತಕ್ಕದ್ದು ಹಾಗೂ ಒಮ್ಮೆ ಸಲ್ಲಿಸಿದ ಪ್ರಸ್ತಾವನೆಯನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
*ಈ ಹಿಂದೆ ಅಂದರೆ (೨ ವರ್ಷದೊಳಗೆ) ಪಡೆದಂತಹ ಯುವ ಸಂಘವು ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಸಲ್ಲಿಸಬಯಸುವವರು ಅರ್ಜಿ ನಮೂನೆಯನ್ನು ನೆಹರು ಯುವ ಕೇಂದ್ರ ಮಡಿಕೇರಿ ಕಚೇರಿಯಿಂದ ಪಡೆದು ದಿನಾಂಕ :೧೫.೧೨.೨೦೨೨ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.೦೮೨೭೨-೨೨೫೪೭೦, ೯೯೬೧೩೩೨೯೬೮, ೯೭೩೧೧೦೮೧೫೪ ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.