ಮಾನವನ ಬದುಕಿನಲ್ಲಿ ಯಾತ್ರೆಗಳಿಗೆ ಬಹಳಷ್ಟು ಮಹತ್ವವಿದೆ. ಅವನ ಹುಟ್ಟಿನಿಂದ ಸಾವಿನವರೆಗೆ ವಿವಿಧ ರೀತಿಯ ಯಾತ್ರೆಗಳನ್ನು ಅನೇಕ ಏಳುಬೀಳುಗಳ ನಡುವೆ ಸಾಗಿಸಿಕೊಂಡು ಕೊನೆಗೆ ಅಂತಿಮ ಯಾತ್ರೆಯಲ್ಲಿ ಜೀವನ ಮುಗಿಸುತ್ತಾನೆ. ಜೀವನದ ಎಲ್ಲಾ ಯಾತ್ರೆಗಳ ಜವಾಬ್ದಾರಿಯು ಅವನ ಹೆಗಲ ಮೇಲಿರುತ್ತದೆ ಮತ್ತು ಅದಕ್ಕಾಗಿ ವಿವಿಧ ರೀತಿಯ ವೇಷಗಳನ್ನು ಹಾಕಿಕೊಂಡು ಸಮಾಜದಲ್ಲಿ ಯಾತ್ರೆಗಳನ್ನು ಮಾಡುತ್ತಾನೆ. ಆದರೆ ಅವನ ಅಂತಿಮ ಯಾತ್ರೆಯು ಮಾತ್ರ ಅವನ ಜೀವನದ ಪ್ರತಿಬಿಂಬವಾಗಿರುತ್ತದೆ. ಏಕೆಂದರೆ ಅವನ ಬೇರೆ ಬೇರೆ ಯಾತ್ರೆಗಳಲ್ಲಿ ಅವನಾಡುವ ನಾಟಕಗಳು, ವೇಷಗಳು ಅವನು ಸೇರಿಸುವ ಜನರ ಮೇಲೆ ಅವಲಂಬಿತವಾಗಿದ್ದರೆ ಅವನ ಅಂತಿಮ ಯಾತ್ರೆಯು ಅವನ ವ್ಯಕ್ತಿತ್ವದ ಆಧಾರದ ಮೇಲೆ ನಡೆಯುತ್ತದೆ. ಅದರಲ್ಲಿ ಅವನ ಪಾತ್ರವೇನು ಇರುವುದಿಲ್ಲ. ಅವನ ಬದುಕಿನ ಪಾತ್ರ ನಿರ್ಣಯಕವಾಗಿರುತ್ತದೆ.

ಯಾತ್ರೆಗಳ ಬಗ್ಗೆ ಏಕೆ ಬರೆಯಬೇಕೆನಿಸುತ್ತೆ ಎಂದರೆ, ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷದ ಯಾತ್ರೆಗಳ ಸರಮಾಲೆಗಳನ್ನು ನೋಡುವಾಗ ನಾವೆಂತ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ ಎನಿಸುತ್ತದೆ. ಯಾತ್ರೆಗಳು ಮಾನವನ ನಾಗರಿಕ ಜೀವನದಲ್ಲಿ ಅವನ ಹುಟ್ಟಿನಿಂದಲೇ ಆರಂಭ ವಾಗಿದೆ ಎನ್ನಬಹುದು. ಅದು ಅವನ ಜೀವನದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಅಂದು ರಾಜರು ದಂಡಯಾತ್ರೆ, ವಿಜಯಯಾತ್ರೆ ಗಳನ್ನು ಕೈಗೊಂಡರೆ ಧರ್ಮಬೋಧಕರು ಧಾರ್ಮಿಕ ಚಿಂತನೆಗಳ ಸಾಮಾಜಿಕ ಚಿಂತನೆಗಳ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಇಲ್ಲಿ ಒಬ್ಬರ ಉದ್ದೇಶ ಅಧಿಕಾರ ಪಡೆಯುವುದಾದರೆ ಇನ್ನೊಬ್ಬರದು ಸಾಮಾಜಿಕ ಬದಲಾವಣೆ ತರುವ ಪ್ರಯತ್ನ. ದಂಡಯಾತ್ರೆ, ವಿಜಯಯಾತ್ರೆಗಳಲ್ಲಿ ರಾಜಮಹಾರಾಜರುಗಳ ಬಲಪ್ರದರ್ಶನ ಪ್ರದರ್ಶಿಸುವ ವೇದಿಕೆಯಾಗಿರು ತ್ತದೆ. ಸಾಮಾಜಿಕ ಚಿಂತಕರು ಕೈಗೊಳ್ಳುವ ಯಾತ್ರೆಗಳು ಸಮಾಜದಲ್ಲಿ ಉತ್ತಮ ಸಂದೇಶವನ್ನು ಸಾರುತ್ತಿತ್ತು. ಮೊದಲನೆಯ ಯಾತ್ರೆಯಲ್ಲಿ ಬಲಪ್ರಯೋಗವಿರುತ್ತಿತ್ತು. ಎರಡನೆಯದರಲ್ಲಿ ಜನರು ಸ್ವಯಂ ಪ್ರೇರಿತರಾಗಿ ಬೆಂಬಲಿಸುತ್ತಿದ್ದರು.

ಇದೇ ರೀತಿ ಸ್ವಾತಂತ್ರö್ಯ ಹೋರಾಟಗಳಲ್ಲಿ ಅನೇಕ ಯಾತ್ರೆಗಳ ಪಾತ್ರಗಳನ್ನು ನಾವು ಕಾಣಬಹುದು. ಅಂದು ಜನರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದರು ಅಥವಾ ನಾಯಕರು ಕರೆ ಕೊಟ್ಟರೆ ಸ್ವಯಂ ಪ್ರೇರಿತ ರಾಗಿ ಚಳುವಳಿಗಳಲ್ಲಿ ಧುಮುಕುತ್ತಿದ್ದರು. ಅಂದು ಧ್ಯೇಯ ಮುಖ್ಯ ವಾಗಿತ್ತು. ಯಾತ್ರೆಗಳ ಚಳುವಳಿಗಳ ಖರ್ಚು ವೆಚ್ಚವನ್ನು ಜನರೇ ಸ್ವಯಂ ಭರಿಸುತ್ತಿದ್ದರು. ಇವುಗಳಲ್ಲಿ ತ್ಯಾಗದ ಮನೋಭಾವವಿತ್ತು. ಆ ಯಾತ್ರೆಗಳ ಮುಖ್ಯ ಉದ್ದೇಶ ಗುಲಾಮಗಿರಿಯಿಂದ ಮುಕ್ತಿ ಪಡೆಯು ವುದು. ಇಲ್ಲಿ ಯಾವುದೇ ಸ್ವಾರ್ಥಪರ ಚಿಂತನೆಗೆ ಜಾಗವಿರಲಿಲ್ಲ. ಎಲ್ಲರ ಹೋರಾಟ ಭಾರತವನ್ನು ಸ್ವತಂತ್ರಗೊಳಿಸುವುದಾಗಿತ್ತು. ಸ್ವಾತಂತ್ರö್ಯದ ನಂತರ ದೇಶದೊಳಗಿನ ಜಾತಿ ವ್ಯವಸ್ಥೆ, ಅಜಾಗರೂಕತೆ, ಮೂಢನಂಬಿಕೆ ವಿರುದ್ಧ ಅನೇಕ ಪರಿವರ್ತನಾ ಯಾತ್ರೆಗಳು ನಡೆದವು. ಅವುಗಳೆಲ್ಲವೂ ದೇಶದ ಚಿಂತನೆ, ಜನರ ಚಿಂತನೆಯನ್ನೊಳಗೊAಡಿತ್ತು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಅಧಿಕಾರ ಚಲಾವಣೆ ಭಾರತದಲ್ಲಿ ಜಾರಿಗೆ ಬಂದಲ್ಲಿAದ ಆರಂಭವಾಯಿತು. ಅಧಿಕಾರ ಪಡೆಯಲು ರಾಜಕೀಯ ಪಕ್ಷಗಳ ವಿವಿಧ ರೀತಿಗಳ ಯಾತ್ರೆಗಳ ಸರಮಾಲೆ. ೮೦ರ ದಶಕದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್‌ರವರ ಕನ್ಯಾಕುಮಾರಿಯಿಂದ ಕಾಶ್ಮೀರವರೆಗಿನ ಪಾದಯಾತ್ರೆ, ವಿನೋದಭಾವೆಯವರ ಭೂದಾನ ಚಳುವಳಿ, ಜೆ.ಪಿ. ಜಯಪ್ರಕಾಶ್ ನಾರಾಯಣರವರ ಸಾಮಾಜಿಕ ಚಿಂತನೆಗಳ ಯಾತ್ರೆ, ಅದೇ ರೀತಿ ೯೦ ರ ದಶಕದಲ್ಲಿ ರಾಮಜನ್ಮ ಭೂಮಿಯ ಇಟ್ಟಿಗೆ ಯಾತ್ರೆ, ಅದ್ವಾಣಿಯವರ ರಥಯಾತ್ರೆ ಪ್ರಮುಖವಾದವುಗಳು. ಇವುಗಳು ಕೆಲವು ಪಕ್ಷಗಳಿಗೆ, ಕೆಲವು ನಾಯಕರುಗಳಿಗೆ ಒಂದು ಆಯಕಟ್ಟಿನ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಅವುಗಳಲ್ಲಿ ಒಂದು ಧ್ಯೇಯವಿತ್ತು. ಇಂತಹ ಯಾತ್ರೆಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಇದರಿಂದ ಸಮಾಜದಲ್ಲಿ ಒಂದಷ್ಟು ಬದಲಾವಣೆಯ ಗಾಳಿ ಬೀಸಿತ್ತು.

ಇತ್ತೀಚಿನ ದಿನಗಳಲ್ಲಿ ಆರಂಭವಾಗಿದೆ ರಾಜಕೀಯ ಪಕ್ಷಗಳ ಯಾತ್ರೆಗಳ ಸರಮಾಲೆ. ಚುನಾವಣಾ ವರ್ಷಗಳಲ್ಲಿ ಇವುಗಳ ಅಬ್ಬರ ಚಂಡಮಾರುತಗಳಿಗಿAತಲೂ ತೀವ್ರವಾಗಿರುತ್ತದೆ. ವರ್ಷವಿರುವಾಗಲೇ ಇಂತಹ ಯಾತ್ರೆಗಳು ಆರಂಭವಾಗಿಬಿಡುತ್ತವೆ. ಇಲ್ಲಿ ಪಾತ್ರಧಾರಿಗಳು ಅವರೇ, ಅವರೇ ಪ್ರೇಕ್ಷಕರು, ಅವರಿಗೆ ಬೇಕಾದ ಹಾಗೇ ಅವರ ಪಕ್ಷ ಸಿದ್ಧಾಂತಕ್ಕೆ ಅವರ ಅಧಿಕಾರವನ್ನು ಬಳಸಿಕೊಂಡು ಯಾತ್ರೆಗಳನ್ನು ರೂಪಿಸಿಕೊಳ್ಲುತ್ತಾರೆ. ಅದಕ್ಕೊಂದು ಹೆಸರಿಡುತ್ತಾರೆ. ಅವರೇ ಬಂಡವಾಳ ಹೂಡುತ್ತಾರೆ. ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಕೊನೆಗೆ ಅದನ್ನು ಅವರೇ ಕೊನೆಗೊಳಿಸುತ್ತಾರೆ. ಇದು ಒಂದು ರೀತಿಯ ವ್ಯಾಪಾರಕ್ಕೆ ಬಂಡವಾಳ ಹೂಡಿಕೆ ಎನ್ನಬಹುದು. ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ರಾಜಕೀಯ ಪಕ್ಷಗಳು ನಡೆಸುವ ಏಕಪಾತ್ರ ಅಭಿನಯದ ನಾಟಕ ಎನ್ನಬಹುದು.

ಇಂತಹ ಯಾತ್ರೆಗಳಿಗೆ ಒಂದೊAದು ತರತರಹದ ವೈಭವೀಕರಣದ ಹೆಸರು. ಹೆಸರು ಕೇಳಿದರೆ ಎಲ್ಲೋ ಒಂದು ರೀತಿಯ ರೋಮಾಂಚನ. ಹಿಂದೆ ರಾಜರುಗಳು ದಂಡಯಾತ್ರೆ ಹೊರಡುವಾಗ ರಣಕಹಳೆ ಊದುತ್ತಿದ್ದರು. ಇಂದು ಚುನಾವಣೆಗೆ

ಹೊರಡುವಾಗ ರಣಕಹಳೆ ಊದುತ್ತಾರೆ. ಇಲ್ಲಿ ಪ್ರಶ್ನೆ ಏನೆಂದರೆ, ಇಂತಹ ಯಾತ್ರೆಗಳ ಅವಶ್ಯಕತೆಯೇನು ? ಮಾನದಂಡವೇನು ? ಎರಡೂ ಶೂನ್ಯ! ಅಧಿಕಾರದಲ್ಲಿರುವವರು ತಮ್ಮ ಸಾಧನೆಯನ್ನು ಬಿಂಬಿಸಲು ಹೂಡುವ ತಂತ್ರವಿದು. ವಿರೋಧ ಪಕ್ಷದವರು ಅಧಿಕಾರದಲ್ಲಿರುವವರ ನ್ಯೂನತೆಗಳನ್ನು ಪ್ರತಿಬಿಂಬಿಸಲು ಹೂಡುವ ಇನ್ನೊಂದು ತಂತ್ರ. ಎರಡರ ಉದ್ದೇಶವು ಅಧಿಕಾರವನ್ನು ಪಡೆಯುವುದೇ ಆಗಿದೆ. ಆದರೆ ಇದರಲ್ಲಿ ಭಾಗವಹಿಸುವ ಶೇ. ೮೦ ರಷ್ಟು ಜನರಿಗೆ ಇಂತಹ ಯಾತ್ರೆಗಳ ಗಂಧಗಾಳಿಯೇ ಇರುವುದಿಲ್ಲ. ಇಲ್ಲಿ ಭಾಗವಹಿಸುವ ಜನರನ್ನು ದಿನಕೂಲಿ ಕೊಟ್ಟು ಕರೆದುಕೊಂಡು ಬಂದಿರುತ್ತಾರೆ. ಒಂದೊAದು ವಲಯದಿಂದ ಒಂದೊAದು ಗ್ರಾಮದಿಂದ ಒಬ್ಬೊಬ್ಬರಿಗೆ ಇಷ್ಟು ಜನರನ್ನು ಸೇರಿಸಬೇಕೆಂಬ ನಿರ್ದೇಶನ ನೀಡಿ ಅದಕ್ಕಾಗಿ ಇಂತಿಷ್ಟು ಹಣವನ್ನು ನೀಡಿರುತ್ತಾರೆ. ಅದನ್ನು ನೀಡಿದ ನಾಯಕರುಗಳು ಬಂದವರಿಗೆ ಸಾರಿಗೆ, ಊಟ, ತಿಂಡಿ, ತೀರ್ಥಾ ವ್ಯವಸ್ಥೆ ಮಾಡಿ ಕರೆದುಕೊಂಡು ಬಂದಿರುತ್ತಾರೆ. ಅನೇಕ ವೇಳೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳು ತಮ್ಮ ಬಲಪ್ರದರ್ಶನ ಮಾಡಲು ಇಂತಹ ಯಾತ್ರೆಗಳನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಒಂದಷ್ಟು ಖರ್ಚು ಮಾಡಿ ಜನ ಸೇರಿಸು ತ್ತಾರೆ. ಯಾತ್ರೆಗಳು ಮುಗಿದ ನಂತರ ಜನರ ಪಾಡು ನಾಯಿ ಪಾಡು.

ಇಂತಹ ಯಾತ್ರೆಗಳ, ಸಮಾವೇಶಗಳ ಅಗತ್ಯತೆಯೇನು? ಇವುಗಳಿಗೆ ವ್ಯಯವಾಗುವ ವೆಚ್ಚವನ್ನು ಭರಿಸುವುದು ಯಾರು ಎಂದು ಪ್ರಜ್ಞಾವಂತ ನಾಗರಿಕರು ಮತ್ತು ಮತದಾರರು ಪ್ರಶ್ನಿಸಿಕೊಳ್ಳಬೇಕು. ಇದಕ್ಕೆ ವ್ಯಯ ವಾಗುವ ಹಣದ ಮೂಲವನ್ನು ಕಂಡುಹಿಡಿಯಬೇಕು. ಇಲ್ಲಿ ಪೋಲಾಗುವುದು ನಮ್ಮ ಹಣ. ಅದರ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಯಾರು ಇಂತಹ ಯಾತ್ರೆಗಳಿಂದ ಸಮಾವೇಶಗಳಲ್ಲಿ ದೂರವಿರುತ್ತಾರೋ ಅಂತಹವರು ಬುದ್ಧಿವಂತರು.

ಇತ್ತೀಚಿನ ದಿನಗಳಲ್ಲಿ ಜನಸ್ಪಂದನ, ಪಾಂಚಜನ್ಯ, ಕಾವೇರಿ ಬಚಾವೋ, ಭಾರತ್ ಜೋಡೊ, ಹೀಗೇ ಹಲವು ಯಾತ್ರೆಗಳು ಆರಂಭವಾಗಿವೆ. ಇಂತಹ ಯಾತ್ರೆಗಳಿಂದ ರಾಜಕೀಯ ಲಾಭವಿದೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ. ಇಂತಹ ಯಾತ್ರೆಗಳಿಂದ ಸಾರ್ವಜನಿಕವಾಗಿ ಆಗುವ ನಷ್ಟಗಳೆಷ್ಟು. ಇಂಧನ ವ್ಯಯ, ಮಾನವನ ಸಮಯದ ವ್ಯಯ, ಹಣದ ಪೋಲು, ಸಾರಿಗೆಯಲ್ಲಿ ವ್ಯತ್ಯಾಸ ಹೀಗೇ ಪಟ್ಟಿ ಮಾಡುತ್ತಾ ಹೋದರೆ ವೆಚ್ಚಗಳ ಕಿರಿಕಿರಿಗಳ ಸರಮಾಲೆಯೇ ಸಿಗುತ್ತದೆ. ಇಂತಹ ಯಾತ್ರೆಗಳಲ್ಲಿ ಬಳಸುವ ವಾಹನಗಳ ಐಷಾರಾಮಿ ವೈಭವ ನೋಡಿದರೆ ಇವರ ಯಾತ್ರೆಯ ಉದ್ದೇಶ ಅರಿವಾಗುತ್ತದೆ. ಹಿಂದೆ ರಾಜಕೀಯ ನಾಯಕರು ಅಂಬಾಸೆಡರ್ ಕಾರು, ಜೀಪುಗಳಲ್ಲಿ ರಾಷ್ಟಿçÃಯ ನಾಯಕರು ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡು ಕಷ್ಟಪಟ್ಟು ಪ್ರವಾಸ ಮಾಡಿ ಪಕ್ಷಕಟ್ಟಿರುವುದನ್ನು ನೋಡಿದ್ದೇವೆ. ಇಂದು ನಮ್ಮ ನಾಯಕರುಗಳಿಗೆ ಐಷಾರಾಮಿ ಬಸ್ಸುಗಳೇ ಬೇಕು. ರಾಜಕೀಯ ಉದ್ದೇಶಗಳ ಇಂತಹ ಯಾತ್ರೆಗಳನ್ನು ಜನರು ಸ್ವಯಂಪ್ರೇರಿತರಾಗಿ ಬಹಿಷ್ಕರಿಸಬೇಕು ಅಥವಾ ಕಾನೂನಿನ ಮೂಲಕ ಕಡಿವಾಣ ಹಾಕಬೇಕು.

ಹಿಂದೆ ರಾಜಕೀಯ ಪಕ್ಷಗಳು ಚುನಾವಣಾ ಭಾಷಣಗಳನ್ನು ಆಯೋಜಿಸುತ್ತಿದ್ದರು. ದೂರದರ್ಶನಗಳಲ್ಲಿ, ರೇಡಿಯೋಗಳ ಮೂಲಕ ಚರ್ಚಾಕೂಟಗಳ ಮೂಲಕ ತಮ್ಮ ಪಕ್ಷದ ಧ್ಯೇಯಗಳನ್ನು ವಿರೋಧಪಕ್ಷಗಳು ಆಡಳಿತ ಪಕ್ಷಗಳ ನ್ಯೂನತೆಗಳನ್ನು ತಮ್ಮ ಮಾತಿನ ವರಸೆಯ ಮೂಲಕ ಪ್ರಸ್ತುತ ಪಡಿಸುತ್ತಿದ್ದರು. ಇವುಗಳನ್ನು ನೋಡಲೇ ಕೇಳಲು ಅಷ್ಟು ಆಸಕ್ತಿಯಿರುತ್ತಿತ್ತು. ಆದರೆ ಇಂದು ಹಣವೇ ಮುಖ್ಯವಾಗಿ ಎಲ್ಲಾ ಸಿದ್ದಾಂತಗಳು ಗಾಳಿಗೆ ತೂರಿದೆ. ಜನರನ್ನು ಮಂಗ ಮಾಡುವ ಇಂತಹ ಯಾತ್ರೆಗಳು ಮುಂದಿನ ದಿನಗಳಲ್ಲಿ ಯಾತ್ರೆಗಳಿಗೆ ಕಡಿವಾಣ ಬೀಳಲಿ. ಪ್ರಜ್ಞಾವಂತ ನಾಗರಿಕರು ಇದರಿಂದ ದೂರವಿರಬೇಕು.

ಮನುಷ್ಯನ ಎಲ್ಲಾ ಯಾತ್ರೆಗಳಿಗಿಂತ ಯಶಸ್ವಿಯಾಗಬೇಕಿರುವುದು ಅವನ ಅಂತಿಮ ಯಾತ್ರೆ. ಅದು ಯಶಸ್ಸಾಗಬೇಕೆಂದರೆ ಅವನು ಏನಾದರೂ ಸಾಧನೆ ಮಾಡಿರಬೇಕು. ಪರಿಪೂರ್ಣ ಬದುಕನ್ನು ಸಾಧಿಸಿರಬೇಕು. ಬದುಕಿಗೊಂದು ಅರ್ಥ ಕಲ್ಪಿಸಿಕೊಂಡಿರಬೇಕು. ಆಗ ಅವನ ಬದುಕಿಗೂ ಅರ್ಥ ಬರುತ್ತದೆ. ಅವನ ಅಂತಿಮ ಯಾತ್ರೆಯಲ್ಲಿ ಸೇರುವ ಜನರೇ ಅವನ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿರುತ್ತದೆ. ಇಂತಹ ನಿದರ್ಶನಗಳು ಸಮಾಜದಲ್ಲಿ ಅನೇಕ ವ್ಯಕ್ತಿಗಳ ನಾಯಕರುಗಳ ಅಂತಿಮ ಯಾತ್ರೆಗೆ ಸೇರಿದ ಜನರೇ ಸಾಕ್ಷಿ.

-ಬಾಳೆಯಡ ಕಿಶನ್ ಪೂವಯ್ಯ

ನೋಟರಿ ಮತ್ತು ವಕೀಲರು,

ಮಡಿಕೇರಿ

ಮೊ : ೯೪೪೮೮೯೯೫೫೪