ಮಡಿಕೇರಿ, ನ. ೨೫: ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಮಡಿಕೆಬೀಡುವಿನಲ್ಲಿರುವ ಹಿಂದುಳಿದ ವರ್ಗಗಳ ಬಸವೇಶ್ವರ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಶಿಪಾರಸ್ಸಿನ ಮೇರೆಗೆ ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಶಾಸಕರ ನಿಧಿಯಿಂದ ರೂ. ೩ ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಎ.ಎಸ್. ಪೊನ್ನಣ್ಣ ಅವರು ಹಣ ಬಿಡುಗಡೆಯ ಪತ್ರವನ್ನು ಸಂಘದ ಅಧ್ಯಕ್ಷ ಶಾಂತಕುಮಾರ್ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಯಾದರೆ ದೇಶವೇ ಅಭಿವೃದ್ಧಿ ಯಾದಂತೆ. ಸಮಾಜದ ಮುಖ್ಯ ವಾಹಿನಿಗೆ ಪ್ರತಿಯೊಬ್ಬರು ಬರು ವಂತಾಗಬೇಕು ಎಂದು ಹೇಳಿದರು.

ಗ್ರಾ.ಪಂ. ಅಧ್ಯಕ್ಷ ಎಂ.ಪಿ. ಮೀನಾ, ಉಪಾಧ್ಯಕ್ಷ ಸುಮಿತ್ರ ರವಿ, ಸದಸ್ಯರಾದ ಎ.ಎಸ್. ಟಾಟು ಮೊಣ್ಣಪ್ಪ, ಶಾಂತ, ಹೆಚ್.ಆರ್. ಸುಶೀಲ, ಸಿದ್ದಪ್ಪ, ಎ.ಎಸ್. ವಿಠಲ ನಾಚಯ್ಯ, ಮಾಜಿ ಸದಸ್ಯರಾದ ಎಸ್.ಎಂ. ವಿಶ್ವನಾಥ್, ಕೆ.ಆರ್. ಶ್ರೀನಿವಾಸ್, ರಾಯ್ ಮಾದಪ್ಪ, ಜಿ.ಪಂ. ಮಾಜಿ ಸದಸ್ಯ ಬಿ.ಎನ್. ಪ್ರತ್ಯು ಸೇರಿದಂತೆ ಬಸವೇಶ್ವರ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.