ಮಡಿಕೇರಿ, ನ. ೨೫: ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ಕೊಡಗು ಜಿಲ್ಲೆಗೆ ರೂ. ೨.೩೫ ಕೋಟಿ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಜಿಲ್ಲೆಯಲ್ಲಿನ ಒಟ್ಟು ೪೧ ಕಾಮಗಾರಿಗಳಿಗೆ ಈ ಮೊತ್ತವನ್ನು ನೀಡಲಾಗಿದೆ. ೨೦೨೨-೨೩ನೇ ಸಾಲಿನ ೧ನೇ ಕಂತಿನ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈ ಅನುದಾನವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ. (ಕಾಮಗಾರಿಗಳ ವಿವರ ಮುಂದಿನ ಸಂಚಿಕೆಯಲ್ಲಿ...)