ಕುಶಾಲನಗರ, ನ. ೨೫: ಗುರುವಾರ ರಾತ್ರಿ ದಿಢೀರ್ ಸುರಿದ ಮಳೆಗೆ ಕುಶಾಲನಗರ-ಮಡಿಕೇರಿ ರಾಷ್ಟಿçÃಯ ಹೆದ್ದಾರಿ ರಸ್ತೆ ನಡುವೆ ತಾವರೆಕೆರೆ ಬಳಿ ರಸ್ತೆ ಜಲಾವೃತಗೊಂಡು ಸಂಚಾರ ವ್ಯವಸ್ಥೆ ಏರುಪೇರಾದ ಘಟನೆ ನಡೆದಿದೆ.

ಸತತ ೨ ಗಂಟೆಗಳ ಕಾಲ ಸುರಿದ ಮಳೆಯಿಂದ ಸುಮಾರು ೧೦೦ ಅಡಿಗಳಷ್ಟು ಉದ್ದದ ರಸ್ತೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಬೆಳಿಗ್ಗೆ ೭ ಗಂಟೆ ತನಕ ವಾಹನ ಸವಾರರು ಬದಿಯಲ್ಲಿದ್ದ ಎಸ್‌ಎಲ್‌ಎನ್ ಸ್ಕೆ÷್ವÃರ್ ಮೂಲಕ ಬದಲಿ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಸಂಬAಧಿಸಿದ ಹೆದ್ದಾರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಇದ್ದ ಹಿನ್ನೆಲೆಯಲ್ಲಿ ಸಮಸ್ಯೆಯನ್ನರಿತು ಎಸ್‌ಎಲ್‌ಎನ್ ಸಂಸ್ಥೆಯ ಮೂಲಕ ಹಿಟಾಚಿ ಬಳಸಿ ರಸ್ತೆಯಿಂದ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಂಡ ದೃಶ್ಯ ಕಂಡುಬAತು.

ಈ ಬಗ್ಗೆ ‘ಶಕ್ತಿ’ ರಾಷ್ಟಿçÃಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಅವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಬಯಸಿದಾಗ ಅವರು ಹೇಳಿದಿಷ್ಟು, ಕುಶಾಲನಗರ ಸಮೀಪ ತಾವರೆಕೆರೆ ಮೂಲಕ ಸಾಗುವ ರಾಷ್ಟಿçÃಯ ಹೆದ್ದಾರಿ ರಸ್ತೆ ಮಳೆಗಾಲದಲ್ಲಿ ಪ್ರವಾಹ ಬಂದು ಮುಳುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಸ್ತೆಯ ಎತ್ತರವನ್ನು ಏರಿಸುವ

(ಮೊದಲ ಪುಟದಿಂದ) ಕಾಮಗಾರಿಗೆ ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂದಾಜು ರೂ. ೪.೫ ಕೋಟಿ ವೆಚ್ಚದಲ್ಲಿ ಸುಮಾರು ೧.೭೫ ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಯೋಜನೆಗೆ ಸಂಬAಧಿಸಿದAತೆ ಕಡತ ಭೂ ಸಾರಿಗೆ ಮಂತ್ರಾಲಯದ ಕೇಂದ್ರ ಕಚೇರಿಯಲ್ಲಿದ್ದು, ಇನ್ನಷ್ಟೇ ಅನುಮೋದನೆ ದೊರಕಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

ಕುಶಾಲನಗರ ಬ್ಲೂಮೂನ್ ಪೆಟ್ರೋಲ್ ಬಂಕ್ ಬಳಿಯಿಂದ ಸರಕಾರಿ ಇಂಜಿನಿಯರಿAಗ್ ಕಾಲೇಜು ಸಮೀಪದ ಎಸ್‌ಎಲ್‌ಎನ್ ಪೆಟ್ರೋಲ್ ಬಂಕ್ ತನಕ ಪ್ರವಾಹ ತಡೆಯಲು ರಸ್ತೆಯನ್ನು ಎತ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ. ತಾವರೆಕೆರೆ ಬಳಿ ಸುಮಾರು ೧೪ ಅಡಿಗಳಷ್ಟು ರಸ್ತೆ ಎತ್ತರದೊಂದಿಗೆ ಉಳಿದೆಡೆ ಸರಾಸರಿ ೬ ರಿಂದ ೭ ಅಡಿಗಳÀಷ್ಟು ಏರಿಕೆ ಮಾಡಿ ೧.೭೫ ಕಿ.ಮೀ. ಉದ್ದದ ಹೆದ್ದಾರಿ ರಸ್ತೆಯನ್ನು ಪ್ರವಾಹ ಮುಕ್ತ ಮಾಡಲಾಗುವುದು. ಆದರೆ, ಕೇಂದ್ರ ಕಚೇರಿಯಿಂದ ಯೋಜನೆಗೆ ಇನ್ನೂ ಗ್ರೀನ್ ಸಿಗ್ನಲ್ ದೊರಕಿಲ್ಲ ಎಂದು ಮಾಹಿತಿ ನೀಡಿದ್ದಾರೆ.