ಮಡಿಕೇರಿ, ನ. ೨೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಸಂಯುಕ್ತಾಶ್ರಯದಲ್ಲಿ ನಗರದ ಟರ್ಫ್ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಬಾಲಕ ಹಾಗೂ ಬಾಲಕಿಯರ ಹಾಕಿ ಪಂದ್ಯಾಟದಲ್ಲಿ ಕೊಡಗು ಆಟಗಾರರನ್ನು ಒಳಗೊಂಡ ಮೈಸೂರು ವಿಭಾಗೀಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
೧೪ರ ವಯೋಮಾನದೊಳಗಿನ ಹಾಗೂ ೧೭ ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ನಡೆದ ಪಂದ್ಯಾಟದಲ್ಲಿ ಮೈಸೂರು ವಿಭಾಗೀಯ ಎಲ್ಲಾ ಹಂತದಲ್ಲಿ ಗೆಲ್ಲುವ ಮೂಲಕ ರಾಷ್ಟಿçÃಯ ಮಟ್ಟದ ಪಂದ್ಯಾವಳಿಗೆ ಅರ್ಹತೆ ಗಳಿಸಿಕೊಂಡಿದೆ. ಇದಕ್ಕೂ ಕೆಲದಿನಗಳ ಹಿಂದೆ ಮಡಿಕೇರಿಯಲ್ಲಿಯೇ ನಡೆದ ಮೈಸೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿ ರಾಜ್ಯಮಟ್ಟಕ್ಕೆ ಕಾಲಿಟ್ಟಿತ್ತು. ಇದೀಗ ರಾಜ್ಯ ಮಟ್ಟದ ತಂಡದಲ್ಲಿ
(ಮೊದಲ ಪುಟದಿಂದ) ಕೊಡಗಿನ ಆಟಗಾರರನ್ನು ಒಳಗೊಂಡ ತಂಡ ಮೈಸೂರು ವಿಭಾಗೀಯವಾಗಿ ಪಾಲ್ಗೊಂಡು ಟ್ರೋಫಿ ತನ್ನದಾಗಿಸಿಕೊಂಡಿದೆ. ರಾಷ್ಟಿçÃಯ ಮಟ್ಟದಲ್ಲಿಯೂ ಕೊಡಗಿನ ಆಟಗಾರರೇ ಬಹುಪಾಲು ಇರಲಿದ್ದಾರೆ.
ಫಲಿತಾಂಶ
೧೭ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಡೆದ ಪಂದ್ಯಾಟದಲ್ಲಿ ೩-೦ ಗೋಲುಗಳ ಅಂತರದಲ್ಲಿ ಮೈಸೂರು ವಿಭಾಗೀಯ ಜಯಗಳಿಸಿತು. ತಂಡದ ಪರ ನಿತ್ಯ ರುಬಿನಿ ೨, ಲಕ್ಷಿö್ಮ ೧ ಗೋಲು ಬಾರಿಸಿ ಜಯಕ್ಕೆ ಕಾರಣರಾದರು. ಕೂಡಿಗೆ ಕ್ರೀಡಾ ಶಾಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಒಟ್ಟು ಪಂದ್ಯಾವಳಿಯಲ್ಲಿ ೬ ಅಂಕ ಪಡೆದ ಬೆಳಗಾವಿ ತೃತೀಯ ಬಹುಮಾನ ಗಳಿಸಿಕೊಂಡಿತು.
ಬಾಲಕರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆ ತಂಡವನ್ನು ೨-೧ ಅಂತರದಲ್ಲಿ ಮಣಿಸಿ ಮೈಸೂರು ವಿಭಾಗೀಯ ಟ್ರೋಫಿ ತನ್ನದಾಗಿಸಿ ಕೊಂಡಿತು. ಮೈಸೂರು ಪರ ಬಿ.ಜೆ. ಗಣಪತಿ, ಎಂ. ನಿಶಾಂತ್ ತಲಾ ಒಂದೊAದು ಗೋಲು ಹೊಡೆದರೆ, ಕೂಡಿಗೆಯ ಕೆ.ಆರ್. ಪೂಜಿತ್ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರ ತಗ್ಗಿಸಿದರು. ಅಂಕದ ಆಧಾರದಲ್ಲಿ ೬ ಅಂಕ ಪಡೆದ ಬೆಂಗಳೂರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು,
ಅಂಕಗಳ ಆಧಾರದಲ್ಲಿ ೧೪ ವರ್ಷದ ಬಾಲಕಿಯರ ವಿಭಾಗದ ಹೆಚ್ಚು ಪಂದ್ಯ ಗೆದ್ದು ಒಟ್ಟು ೯ ಅಂಕಗಳಿಸಿದ ಮೈಸೂರು ವಿಭಾಗ ತಂಡ ಪ್ರಥಮ, ೬ ಅಂಕ ಗಳಿಸಿದ ಬೆಳಗಾವಿ ದ್ವಿತೀಯ, ೩ ಅಂಕ ಪಡೆದ ಕಲ್ಬುರ್ಗಿ ತೃತೀಯ ಸ್ಥಾನ ಪಡೆದುಕೊಂಡಿತು.
ಬಾಲಕಿಯರ ವಿಭಾಗದಲ್ಲಿ ೯ ಅಂಕ ಪಡೆದು ಮೈಸೂರು ಪ್ರಥಮ, ಬೆಳಗಾವಿ ೬ ಅಂಕದೊAದಿಗೆ ದ್ವಿತೀಯ, ೩ ಅಂಕದೊAದಿಗೆ ಕಲ್ಬುರ್ಗಿ ತೃತೀಯ ಸ್ಥಾನ ಪಡೆದು ಕೊಂಡಿತು. ತೀರ್ಪುಗಾರರಾಗಿ ಚೆಕ್ಕೇರ ಆದರ್ಶ್, ಮೈಂದಪAಡ ಡ್ಯಾನಿ ದೇವಯ್ಯ, ಬಲ್ಲಚಂಡ ನಾಣಯ್ಯ, ಚೇಂದೀರ ಡ್ಯಾನಿ, ಮಣವಟ್ಟಿರ ಅಯ್ಯಪ್ಪ, ರತೀಶ್, ಪೂರ್ಣೇಶ್, ತಮ್ಮಯ್ಯ, ತಾಂತ್ರಿಕ ವಿಭಾಗದಲ್ಲಿ ಪರಿಚನ. ಕಿರಣ್, ಪ್ರೇಮಲತಾ ಶೆಟ್ಟಿ, ಕೆಮ್ಮಾರನ ಗಣೇಶ್ ಕುಮಾರ್ ಕಾರ್ಯನಿರ್ವಹಿಸಿದರು.