ಕುಶಾಲನಗರ, ನ. ೨೫: ಸಿದ್ದರಾಮಯ್ಯ ೭೫ ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಕಾರ್ಯಕರ್ತ ಪಿ.ಮಲ್ಲೇಶ್ ಎಂಬವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರುವ ಪ್ರಕರಣ ಖಂಡಿಸಿ ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಶಾಲನಗರದ ಗಣಪತಿ ದೇವಾಲಯದಿಂದ ರಥಬೀದಿ ಮೂಲಕ ಡೋಲು, ಜಾಗಟೆ, ಶಂಖಗಳನ್ನು ಮೊಳಗಿಸಿ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ತಾಲೂಕು ತಹಶೀಲ್ದಾರ್ ಮೂಲಕ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಪ್ರತಿಭಟನೆ ನಡೆಯಿತು.
ಕುಶಾಲನಗರದ ಗಣಪತಿ ದೇವಾಲಯದಿಂದ ರಥಬೀದಿ ಮೂಲಕ ಡೋಲು, ಜಾಗಟೆ, ಶಂಖಗಳನ್ನು ಮೊಳಗಿಸಿ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ತಾಲೂಕು ತಹಶೀಲ್ದಾರ್ ಮೂಲಕ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು, ಇದೇ ೧೫ ನೇ ತಾರೀಖು ಸಿದ್ದರಾಮಯ್ಯ ೭೫ ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಿ.ಮಲ್ಲೇಶ್ ಎಂಬಾತ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ.
ನಾವು ಯಾವುದೇ ಪಕ್ಷದಲ್ಲಿ ಇರಲಿ, ಬ್ರಾಹ್ಮಣರನ್ನು ನಿಂದಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಚುನಾವಣೆಯಲ್ಲಿ ಇದರ ಫಲ ಪಡೆಯುತ್ತೀರ ಎಂದು ಸಿದ್ದರಾಮಯ್ಯ ಮತ್ತು ಮಲ್ಲೇಶ್ ಅವರನ್ನು ಪ್ರಶ್ನಿಸಿದರು.
ವೇದ ಬ್ರಹ್ಮ ಸುಬ್ಬರಾಮು ಮಾತನಾಡಿ, ವೇದ ಉಪನಿಷತ್ತು ಶಕ್ತಿಯನ್ನು ಅರಿತ ಅಮೆರಿಕ ದೇಶ ಅದರ ಪ್ರಭಾವವನ್ನು ನಾಸಾದಲ್ಲಿ ಬಳಕೆ ಮಾಡುತ್ತಿದೆ. ಹಿಂದೂಗಳ ಮನೆಗಳಲ್ಲಿ ಯಾವುದೇ ಶುಭ ಮತ್ತು ಅಶುಭ ಕಾರ್ಯ ನಡೆದರೂ ಮಂತ್ರ ಘೋಷ ಮೊಳಗುತ್ತದೆ. ಅಂತಹ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವ ಪುಣ್ಯ ಭೂಮಿಯಲ್ಲಿ ವಿಷದ ಬೀಜ ಬಿತ್ತುವ ಪ್ರಯತ್ನ ಖಂಡಿತ ಫಲಿಸುವುದಿಲ್ಲ. ಸರ್ವೇ ಜನಃ ಸುಖಿನೋ ಭವಂತು ಎಂದು ಹೇಳುವ ಬ್ರಾಹ್ಮಣ ಮತ್ತು ಬ್ರಾಹ್ಮಣಿಕೆ ಬಗ್ಗೆ ಯಾರೇ ಅವಹೇಳನಕಾರಿಯಾಗಿ ಮಾತನಾಡಿದರೆ ಉದ್ಧಾರವಾಗುವುದಿಲ್ಲ ಎಂದರು.
ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಮಾತನಾಡಿ, ಸರ್ಕಾರ ಕೂಡಲೇ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬ್ರಾಹ್ಮಣರನ್ನು ನಿಂದಿಸುವುದರಿAದ ಅವರಿಗೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚು. ಪಿ.ಮಲ್ಲೇಶ್ ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಸಾರ್ವಜನಿಕವಾಗಿ ಬ್ರಾಹ್ಮಣರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಿಲ್ ಶೇಷಾದ್ರಿ, ಖಜಾಂಚಿ ಶ್ರೀದೇವಿ ರಾವ್, ಡಾ.ರಾಧಾಕೃಷ್ಣ, ಎಂ.ವಿ.ನಾರಾಯಣ, ಮಂಜುನಾಥ್ ಗುಂಡೂರಾವ್, ಜಿಎಲ್ ನಾಗರಾಜ, ವಿಜೇಂದ್ರ,, ರಜಿನಿ ಪ್ರದೀಪ್, ಅರ್ಚಕರಾದ ಸುಬ್ರಮಣ್ಯ ಭಟ್, ಗಿರೀಶ್ ಭಟ್, ಯೋಗೀಶ್ ಭಟ್ ಮತ್ತಿತರರು ಪಾಲ್ಗೊಂಡಿದ್ದರು.