ಕುಶಾಲನಗರ, ನ. ೨೬: ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ, ದೇಶದ ಪ್ರಗತಿಗೆ ಸಂಶೋಧನೆ ನಡೆಸಿ ಮುಂದಿನ ಪೀಳಿಗೆಗೆ ದಾರಿಯಾಗುವ ವೈಜ್ಞಾನಿಕ ಆವಿಷ್ಕಾರಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಕರೆ ನೀಡಿದರು.
ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸೋಮವಾರ ಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕುಶಾಲನಗರ ಫಾತಿಮ ಪ್ರೌಢಶಾಲೆ ಯಲ್ಲಿ ಜಿಲ್ಲಾ ರಾಷ್ಟಿçÃಯ ಹಸಿರು ಪಡೆ ಇಕೋ ಕ್ಲಬ್ನ ಸಹಯೋಗದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸೋಮವಾರಪೇಟೆ ತಾಲೂಕುಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರಗಳ ವಿರುದ್ಧ ಜನಜಾಗೃತಿ ಮೂಡಿಸಬೇಕು ಎಂದರು. ವಿಜ್ಞಾನ ದಿಂದ ಮನುಕುಲಕ್ಕೆ ಮಾರಕವಾಗ ಬಾರದು. ಪ್ರಕೃತಿ ಪರವಾದ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಸುರೇಶ್ ಹೇಳಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರು, ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಆವಿಷ್ಕಾರಕ್ಕೆ ಆದ್ಯತೆ ನೀಡುವುದರೊಂದಿಗೆ ಅಬ್ದುಲ್ ಕಲಾಂರAತೆ ವಿಜ್ಞಾನಿಗಳಾಗಿ ದೇಶದ ಪ್ರಗತಿ ಮತ್ತುರಕ್ಷಣೆಗೆ ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಸಂಯೋಜಕ ಕೆ.ಬಿ. ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾತಿಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಫ್ರಿ ಡಿಸೋಜ ಮಾತನಾಡಿ, ಇಂತಹ ಸ್ಪರ್ಧೆಗಳು ಮಕ್ಕಳ ಕಲಿಕೆಗೆ ಪೂರಕವಾಗಿವೆ ಎಂದರು. ಪತ್ರಕರ್ತ ಹೆಚ್.ಎಂ. ರಘು, ಮಕ್ಕಳ ವಿಜ್ಞಾನ ಸಮ್ಮೇಳನದ ಜಿಲ್ಲಾ ಸಂಯೋಜಕ ಜಿ. ಶ್ರೀಹರ್ಷ, ಶಾಲೆಯ ವಿಜ್ಞಾನ ಶಿಕ್ಷಕ ಅಂತೋಣಿ ಕಮಲನಾಥನ್, ವಿವಿಧ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ಪಾಲ್ಗೊಂಡಿದ್ದರು.
ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ: ಅವಿಭಜಿತ ತಾಲೂಕಿನಿಂದ ವಿವಿಧ ಪ್ರೌಢಶಾಲೆಗಳಿಂದ ಮಾರ್ಗ ದರ್ಶಿ ಶಿಕ್ಷಕರೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಭೌತಶಾಸ್ತç, ರಸಾಯನಶಾಸ್ತç, ಗಣಿತ, ಭೂಮಿ, ಬಾಹ್ಯಾಕಾಶ, ಪರಿಸರ, ಇಂಜಿನಿ ಯರಿಂಗ್ ಹಾಗೂ ಕಂಪ್ಯೂಟರ್ಕ್ಷೇತ್ರ ಸೇರಿದಂತೆ ವಿಜ್ಞಾನದ ವಿವಿಧ ಉಪ ವಿಷಯಗಳ ಶೀರ್ಷಿಕೆ ಯೊಂದಿಗೆ ವಿವಿಧ ಮಾದರಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಪ್ರದರ್ಶನದಲ್ಲಿ ಮಳೆ ನೀರುಕೊಯ್ಲು, ಜಲಪಾತ, ಪವನ ಶಕ್ತಿಯಿಂದ ವಿದ್ಯುತ್ತಯಾರಿಕೆ, ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ, ಕೈಗಾರಿಕೆಗಳ ಸ್ಥಾಪನೆ, ಭೂಮಿ ಫಲವತ್ತತೆಯ ಸಂರಕ್ಷಣೆ, ವೈಜ್ಞಾನಿಕ ಮಾದರಿಗಳು, ತರಕಾರಿ, ಎಣ್ಣೆ ಕಾಳು, ಆರೋಗ್ಯ ಭಾಗ್ಯ, ಶಿಕ್ಷಣ, ರೇಡಿಯೇಷನ್, ಗ್ರಹಗಳು, ನೀರಿನ ಸಂರಕ್ಷಣೆ ಹೀಗೆ ಹತ್ತಾರು ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು.