ವೀರಾಜಪೇಟೆ, ನ. ೨೬: ಬೊಟ್ಟಿಯತ್ ನಾಡ್, ಕುತ್ತ್ನಾಡ್ ಹಾಗೂ ಬೇರಳಿನಾಡ್ ಈ ಮೂರು ನಾಡುಗಳಿಗೆ ಸೇರಿದ ಇತಿಹಾಸ ಪ್ರಸಿದ್ದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಈ ಬಾರಿ ವಿಜೃಂಭಣೆಯಿAದ ಆಚರಿಸಲು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಪೈಪೋಟಿ ಒಳಗೊಂಡAತೆ ಕೋಲ್‌ಮಂದ್ ಡಿಸೆಂಬರ್ ೯ರಂದು ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.

ಮೂರು ನಾಡಿನ ತಕ್ಕ ಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್'ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕಳೆದ ಎರಡು ವರ್ಷಗಳಿಂದ ಕೊರೊನಾ ಪರಿಸ್ಥಿತಿ ಜನರನ್ನು ತತ್ತರಿಸುವಂತೆ ಮಾಡಿದೆ ಮಾತ್ರವಲ್ಲ ಜನರಿಗೆ ಯಾವುದೇ ಮನರಂಜನೆ ಕೂಡ ಇಲ್ಲದಾಗಿದೆ. ಒಗ್ಗೂಡುವಿಕೆ ಕೂಡ ದೂರವಾಗಿತ್ತು. ಇದರಿಂದ ವರ್ಷಕೊಮ್ಮೆ ನಡೆಯುವ ಪುತ್ತರಿ ಕೋಲ್ ಮಂದ್ ಸಹ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕೈಮುಡಿಕೆ ಪುತ್ತರಿ ಕೋಲ್ ಮಂದನ್ನು ಜಿಲ್ಲಾ ಮಟ್ಟದ ಪೈಪೋಟಿಯೊಂದಿಗೆ ವಿಜೃಂಭಣೆಯಿAದ ಆಚರಿಸಲು ತಿರ್ಮಾನಿಸಲಾಯಿತು.

ಡಿಸೆಂಬರ್ ೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮೂರು ನಾಡಿನವರ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಬಳಿಕ ವಿವಿಧ ಪೈಪೋಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಾಗೂ ಈ ಬಾರಿ ಜಿಲ್ಲೆಯ ವಿವಿಧ ಮಂದ್‌ಗಳು ಸೇರಿದಂತೆ ಸಂಘ ಸಂಸ್ಥೆ ಹಾಗೂ ಶಾಲಾಕಾಲೇಜುಗಳು ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮೂರು ನಾಡಿನ ತಕ್ಕ ಮುಖ್ಯಸ್ಥ ಅಡ್ಡಂಡ ಕುಶಾಲಪ್ಪ ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಪೈಪೋಟಿಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿ ಪೈಪೋಟಿಯನ್ನು ನಡೆಸಲು ಸಭೆ ತೀರ್ಮಾನಿಸಿದ್ದು. ಹತ್ತನೇ ತರಗತಿಯ ಒಳಗೆ ಒಂದು ವಿಭಾಗ, ಪಿ.ಯು.ಸಿ ಹಾಗೂ ಪದವಿ ತರಗತಿ ಸೇರಿ ಮತ್ತೊಂದು ವಿಭಾಗ, ಹಾಗೂ ಜಿಲ್ಲೆಯ ವಿವಿಧ ಮಂದ್ ಅಥವಾ ಸಂಘ ಸಂಸ್ಥೆ, ಸಮಾಜಗಳು ಸೇರಿ ಸಾರ್ವಜನಿಕರ ವಿಭಾಗವಾಗಿ ಪೈಪೋಟಿ ನಡೆಸಲು ತಿರ್ಮಾನಿಸಲಾಯಿತು.

ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಪರೆಯಕಳಿ, ಕಪ್ಪೆಯಾಟ್, ದುಡಿಕೊಟ್ಟ್ ಪಾಟ್(ಬಾಳೋಪಾಟ್), ವಾಲಗತಾಟ್, ಪಾಟ್ ಪೈಪೋಟಿ ಸೇರಿದಂತೆ ಅಳಿವಿನಂಚಿನಲ್ಲಿರುವ ಯರವ ಜನಾಂಗಕ್ಕಾಗಿ ವಿಶೇಷ ಪೈಪೋಟಿಯನ್ನು ಏರ್ಪಡಿಸಲಾಗಿದ್ದು ಯರವಾಟ್ ಪೈಪೋಟಿಯೊಂದಿಗೆ, ಈ ಬಾರಿ ಚೀನಿ ಹಾಗೂ ಚೀನಿ ದುಡಿಯನ್ನು ನುಡಿಸುವ ವಿಶೇಷ ಸ್ಪರ್ಧೆ ನಡೆಯಲಿದೆ. ಇದರ ಪರಿಕರವನ್ನು ಅವರೇ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಪೈಪೋಟಿಗೆ ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಕಾರ್ಯಕ್ರಮವು ಪುತ್ತರಿ ಕಳೆದು ಎರಡನೇ ದಿನದಂದು ಬೆಳಿಗ್ಗೆ ೧೦.೩೦ ಗಂಟೆಯಿAದ ಸಂಜೆಯವರೆಗೆ ನಡೆಯಲ್ಲಿದ್ದು ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕುತ್ತ್'ನಾಡ್ ತಕ್ಕರಾದ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕರಾದ ಮಳವಂಡ ಭುವೇಶ್ ದೇವಯ್ಯ ಮೂರು ನಾಡಿನ ಗೌರವ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ, ಊರು ತಕ್ಕರು ಹಾಗೂ ನಾಡಿನವರಾದ ಕೊಂಡAದೇರ ಬಾಂಡ್ ಗಣಪತಿ, ಅಪ್ಪಂಡೇರAಡ ಮನು ಮೋಹನ್, ಚಮ್ಮಟೀರ ಸುಗುಣ ಮುತ್ತಣ್ಣ, ತೀತಮಾಡ ಉತ್ತಪ್ಪ, ತೀತಮಾಡ ವಾಸು ಗಣಪತಿ, ಸಣ್ಣುವಂಡ ಅಪ್ಪಿ , ಚಮ್ಮಟೀರ ಪ್ರವೀಣ್ ಉತ್ತಪ್ಪ, ಮೇಚಂಡ ಹ್ಯಾರಿ ಅಚ್ಚಪ್ಪ, ತೀತಿಮಾಡ ಗಾಂದಿ, ಬಲ್ಲಣಮಾಡ ಲಿತಿನ್, ಕಡೇಮಾಡ ಶರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.