ಸುಂಟಿಕೊಪ್ಪ, ನ. ೨೬: ಕತಾರ್‌ನಲ್ಲಿ ಆರಂಭಗೊAಡಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಅಂಗವಾಗಿ ಕೇರಳದ ತಿರುವನಂತಪುರAನಿAದ ಆಗಮಿಸಿದ್ದ ಫುಟ್ಬಾಲ್ ಪ್ರಚಾರ ಜಾಥಾಕ್ಕೆ ಸುಂಟಿಕೊಪ್ಪ ಫುಟ್ಬಾಲ್ ಪ್ರೇಮಿಗಳಿಂದ ಸ್ವಾಗತ ಕೋರಲಾಯಿತು.

ತಿರುವನಂತಪುರAನಿAದ ಸುಂಟಿಕೊಪ್ಪಕ್ಕೆ ಆಗಮಿಸಿದ್ದ ಪುಟ್ಬಾಲ್ ಪ್ರಚಾರ ಜಾಥಾಕ್ಕೆ ಗದ್ದೆಹಳ್ಳದ ಅ್ಯಮೆಟಿ ಫುಟ್ಬಾಲ್ ಅಭಿಮಾನಿಗಳು ಹಾಗೂ ಜಿ ಟೌನ್ ಅಭಿಮಾನಿಗಳು ಗದ್ದೆಹಳ್ಳದ ಗಾಂಧಿ ವೃತ್ತದಿಂದ ಸುಂಟಿಕೊಪ್ಪ ಕನ್ನಡ ವೃತ್ತದವರೆಗೆ ರೊನಾಲ್ಡೊ, ಅರ್ಜೆಂಟೈನಾದ ಲಿಯೊನೆಲ್ ಮೆಸ್ಸಿ, ಪೋರ್ಚುಗಲ್ ತಂಡದ ನೈಮರ್ ಅವರುಗಳ ತಂಡದ ಭಾವಚಿತ್ರ ಹೊತ್ತ ಕಂಟೈನರ್ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ನಾಸಿಕ್ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯನ್ನು ನಡೆಸಿದರು.