ಮಡಿಕೇರಿ, ನ. ೨೬: ಕೊಡಗು ಯುವಸೇನೆಯ ಸೋಮವಾರಪೇಟೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ತೋಳೂರು ಶೆಟ್ಟಳ್ಳಿಯ ರುದ್ರಪ್ಪ (ಶೇಖರ್) ಅವರು ನೇಮಕಗೊಂಡಿದ್ದಾರೆ. ಐದು ವರ್ಷಗಳ ಕಾಲ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸತೀಶ್ ಅವರನ್ನು ಜಿಲ್ಲಾ ಕಾರ್ಯಕಾರಿ ಸಮಿತಿಗೆ ನೇಮಿಸಿ ನೂತನ ಅಧ್ಯಕ್ಷರಾಗಿ ರುದ್ರಪ್ಪ (ಶೇಖರ್) ಅವರನ್ನು ನೇಮಕಗೊಳಿಸಲಾಯಿತು. ಉಪಾಧ್ಯಕ್ಷರುಗಳಾಗಿ ಶನಿವಾರಸಂತೆಯ ಡಿ.ಪಿ. ಶಂಬು, ಸೋಮಾರಪೇಟೆಯ ರೇಣು ಕುಮಾರ್ ಹಾಗೂ ಕೂಡಿಗೆಯ ಹರೀಶ್ ಮತ್ತು ರದೀಶ್ ಪ್ರಧಾನ ಕಾರ್ಯದರ್ಶಿಯಾಗಿ ನಗರೂರಿನ ಕೆ.ವಿ. ಪ್ರಭಾಕರ್ ಕಾರ್ಯದರ್ಶಿಗಳಾಗಿ ರಮೇಶ್ ಕೆ.ಕೆ., ಐಗೂರುವಿನ ನಾಗೇಶ್, ಸೋಮವಾರಪೇಟೆಯ ಯಶ್ ಸಂಘಟನಾ ಕಾರ್ಯದರ್ಶಿಗಳಾಗಿ ಐಗೂರುವಿನ ಕೆ.ಬಿ. ಪ್ರಣಿಶ್, ಹೆಚ್.ಎ. ಅಮೃತ್ ಸಹ ಕಾರ್ಯದರ್ಶಿಗಳಾಗಿ ಎಡವರೇಯ ವಿಜೂ ಬಿ.ಆರ್. ಹಾಗೂ ನಗರೂರಿನ ಗಂಗಯ್ಯ ಸಲೆಹೆಗಾರರಾಗಿ ಡಿ.ಪಿ. ಲೋಕೇಶ್ ಹಾಗೂ ಪಿ.ಕೆ. ಚಂದ್ರು ಅವರುಗಳನ್ನು ಯುವಸೇನೆಯ ಜಿಲ್ಲಾ ಸಲಹೆಗಾರರಾದ ಎಸ್.ಎ. ಮುರುಳಿಧರ್ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ತಾಲೂಕು ಉಸ್ತುವಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್ ಅವರ ಸೂಚನೆಯ ಮೇರೆಗೆ ನೇಮಕವನ್ನು ಮಾಡಲಾಗಿದೆ ಎಂದು ಯುವಸೇನೆಯ ಸಂಸ್ಥಾಪಕ ಕುಲದೀಪ್ ಪೂಣಚ್ಚ ಅವರು ತಿಳಿಸಿದ್ದಾರೆ.