ಮಡಿಕೇರಿ, ನ. ೨೫: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾನಿನಿ ಮಹಿಳಾ ಘಟಕದ ಸಹಯೋಗದೊಂದಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕ ಡಾ. ರೂಪೇಶ್ ಗೋಪಾಲ್, ಮಾದಕ ವ್ಯಸನಕ್ಕೆ ತುತ್ತಾದವರು ಜೀವನದ ಹಾದಿಯಲ್ಲಿ ಸೋಲನ್ನೇ ಕಾಣುತ್ತಾರೆ. ಮಾದಕ ವ್ಯಸನ ಎಂಬುದು ಸಮಾಜಕ್ಕೆ ಕಂಟಕ ಎಂದು ಮಾಹಿತಿ ನೀಡಿದರು.
ಮನೋವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕ ಡಾ. ಸತೀಶ್ ಕುಮಾರ್, ಯಾರೂ ಮಾದಕ ವ್ಯಸನಗಳಿಗೆ ಬಲಿಯಾಗದಿರಿ ಎಂದು ಹಿತವಚನ ನೀಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘಲನ್, ನಿರ್ದೇಶಕಿಯರಾದ ಉಮಾಗೌರಿ, ಮಲ್ಲಿಗೆ ಪೈ, ಆಗ್ನೇಸ್ ಮುತ್ತಣ್ಣ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ನಿರ್ಮಲಾ ಕೆ.ಡಿ., ಮಹಿಳಾ ಘಟಕದ ಸಂಚಾಲಕಿ ಡಾ. ಕಾವೇರಿ ಪ್ರಕಾಶ್ ಹಾಜರಿದ್ದರು. ಡಾ. ಅನುಷಾ ಸಭಾಪತಿ, ಲಕ್ಷಿö್ಮ ನಿರೂಪಿಸಿ, ಚೈತ್ರ ವಂದಿಸಿದರು.