ಮಡಿಕೇರಿ, ನ. ೨೬ : ದೂರ ಶಿಕ್ಷಣ ಮೂಲಕ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ೬ ತಿಂಗಳ ತರಬೇತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಹಕಾರ ಸಂಘ, ಸಂಸ್ಥೆ, ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಇತ್ತೀಚಿನ ಕಾಯಿದೆ ತಿದ್ದುಪಡಿ ಅನ್ವಯ ಕೆ.ಸಿ.ಎಸ್ ನಿಯಮ ೧೭(ಎ)(ಬಿ) ಪ್ರಕಾರ ಪದೋನ್ನತಿ, ಬಡ್ತಿ ಹೊಂದಲು ಕಡ್ಡಾಯವಾಗಿ ಡಿಸಿಎಂ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ಪಡೆಯಬೇಕಿದೆ.

ವೃತ್ತಿಕೌಶಲ್ಯ, ವೃತ್ತಿಪರತೆ, ಅಧ್ಯಯನ ಸಾಹಿತ್ಯ ನೀಡಲಾಗುವುದು. ೬ ತಿಂಗಳ ಅವಧಿಯಲ್ಲಿ ೧೦ ದಿನಗಳ ಸಂಪರ್ಕ ತರಗತಿಗಳು ಜನವರಿ-೨೦೨೩ನೇ ಬ್ಯಾಚ್‌ಗೆ ಡಿಸೆಂಬರ್-೨೦೨೨ ರಿಂದ ಪ್ರವೇಶ ಪ್ರಾರಂಭ ಆನ್‌ಲೈನ್‌ನಲ್ಲಿ ಪ್ರವೇಶಾತಿ ತಿತಿತಿ.ಞsಛಿಜಿಜಛಿm.ಛಿo.iಟಿ. ಹೆಚ್ಚಿನ ಮಾಹಿತಿಗೆ ದೂ.ಸಂ.೯೮೪೫೩೧೮೩೬೪, ೮೭೬೨೧೧೦೯೫೨, ೮೭೬೨೯೨೫೮೬೨, ೯೪೪೯೨೪೫೦೨೪ ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲೆ

ಡಾ. ಆರ್.ಎಸ್.ರೇಣುಕಾ ತಿಳಿಸಿದ್ದಾರೆ.