ವೀರಾಜಪೇಟೆ, ನ. ೨೬: ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ದೇಶತಕ್ಕ ಕುಟುಂಬದವರಾದ ನಾಲಡಿ ಗ್ರಾಮದ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ವೀರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಪರದಂಡ ಸುಬ್ರಮಣಿ ಕಾವೇರಪ್ಪನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ತನಕ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪ ಅವರು ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ನೂತನ ಆಯ್ಕೆ ನಡೆದಿದೆ.

ಸ್ವಾತಂತ್ರ÷್ಯ ಪೂರ್ವ ೧೯೪೨ರಲ್ಲಿ ತಕ್ಕಾಮೆ ಅಡಿಯಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದ ಬೈಲಾ ಪ್ರಕಾರ ದೇಶ ತಕ್ಕ ಕುಟುಂಬವರನ್ನೇ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂಬ ನಿಯಮದಡಿಯಲ್ಲಿ ಕಳೆದ ೧೫ ದಿವಸದ ಹಿಂದೆ ನಡೆದ ಮಹಾಸಭೆಯಲ್ಲಿ ಇಬ್ಬರು ದೇಶ ತಕ್ಕ ಕುಟುಂಬದವರು ಉಪಸ್ಥಿತರಿದ್ದರು. ಈ ಸಲುವಾಗಿ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಬೊಳ್ಳೇರ ವಿನಯ್ ಅಪ್ಪಯ್ಯ ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎನ್ನಲಾಯಿತು. ಮಹಾಸಭೆಯಲ್ಲಿ ಇವರಿಬ್ಬರನ್ನು ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಿ ಉಳಿದ ಒಂದಷ್ಟು ಜನರನ್ನು ಕೂಡ ಸಮಿತಿಗೆ ತೆಗೆದುಕೊಳ್ಳಲಾಯಿತು.

ಶನಿವಾರ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರ ಹಸ್ತಾಂತರದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಾಗ ಇಬ್ಬರು ದೇಶ ತಕ್ಕ ಕುಟುಂಬದವರು ಉಪಸ್ಥಿತರಿದ್ದು,

(ಮೊದಲ ಪುಟದಿಂದ) ದೇಶ ತಕ್ಕ ಕುಟುಂಬದ ಬೊಳ್ಳೇರ ವಿನಯ್ ಅಪ್ಪÀಯ್ಯ, ಪರದಂಡ ಸುಬ್ರಮಣಿ ಕಾವೇರಪ್ಪ ಹೆಸರನ್ನು ಸೂಚಿಸಿದರೆ ಮಂಡೆಪAಡ ಸುಗುಣ ಮುತ್ತಣ್ಣ ಅನುಮೋದಿಸುವ ಮೂಲಕ ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ಪರದಂಡ ಸುಬ್ರಮಣಿ ಕಾವೇರಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮೂಲತಃ ನಾಲ್ಕುನಾಡಿನ ನಾಲಡಿ ಗ್ರಾಮದವರಾದ ಪರದಂಡ ದಿ. ಬಾಬು ಕಾವೇರಪ್ಪ ಹಾಗೂ ಪದ್ಮಿನಿ ಕಾವೇರಪ್ಪ ದಂಪತಿಗಳ ಪುತ್ರರಾಗಿದ್ದಾರೆ.

ಈ ಸಂದರ್ಭ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ೧೯೪೨ರಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದಲ್ಲಿ ನಾಲ್ಕು ತಲೆಮಾರುಗಳೊಂದಿಗೆ ಒಡನಾಡಿದ ಅನುಭವವಿದೆ. ಯುವ ಸಮುದಾಯದಿಂದ ಜನಾಂಗದ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ, ಈ ಸ್ಥಾನದ ಮಹತ್ವ ಅರಿತು ಹೆಚ್ಚಿನ ಜವಬ್ದಾರಿಯಿಂದ ಸಮಾಜವನ್ನು ಮುನ್ನಡೆಸಬೇಕಿದೆ, ಈ ಸ್ಥಾನಕ್ಕೆ ಅದರದೇ ಆದ ಕಟ್ಟು ಪಾಡುಗಳಿವೆ ಹಾಗೂ ಜವಬ್ದಾರಿಗಳಿವೆ ನಮ್ಮ ಮುಂದಿನ ಪೀಳಿಗೆಗೂ ಈ ಸಮಾಜವನ್ನು ಉಳಿಸಿ ಬೆಳಸಬೇಕಿದೆ ಎಂದರು.

ಅಧಿಕಾರ ವಹಿಸಿಕೊಂಡು ಮಾತನಾಡಿದ ನೂತನ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕುವುದಾಗಿ ತಿಳಿಸಿದ ಅವರು, ಇಗ್ಗುತಪ್ಪನ ಸೇವೆ ಮಾಡುತ್ತಿರುವ ನಮ್ಮ ಕುಟುಂಬಕ್ಕೆ ಇದು ಬಯಸದೆ ಬಂದಿರುವ ಅದೃಷ್ಟ. ಸಮಾಜವನ್ನು ರಾಜಕೀಯ ರಹಿತವಾಗಿ ಹಾಗೂ ಕಳಂಕರಹಿತವಾಗಿ ಮುನ್ನಡೆಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಈ ಹಿಂದಿನ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪ ಅವರ ಮಾರ್ಗದರ್ಶನವನ್ನು ನೆನೆಸಿಕೊಂಡ ಅವರು ಕಳೆದ ಎರಡು ವರ್ಷಗಳ ಹಿಂದೆ ಯೂತ್ ವಿಂಗ್ ಸ್ಥಾಪನೆಯಾಗಲು ಮಾತಂಡ ಮೊಣ್ಣಪ್ಪ ಮೂಲ ಕಾರಣಕರ್ತರು, ಇವರ ತ್ಯಾಗ ಕೂಡ ನಮ್ಮ ಜನಾಂಗಕ್ಕೆ ಅಧಿಕವಾಗಿದೆ ಎಂದರಲ್ಲದೆ ನೂತನ ಅಧ್ಯಕ್ಷರಿಗೆ ಎಲ್ಲ ಸಹಕಾರ ನೀಡಿ ಜೊತೆಯಾಗಿ ಮುನ್ನಡೆಯುವುದಾಗಿ ಹೇಳಿದರು.

ಪರದಂಡ ಕುಟುಂಬದಿAದ, ೪೯ ವರ್ಷ ಸೇವೆ ಸಲ್ಲಿಸಿದ ಮಾತಂಡ ಮೊಣ್ಣಪ್ಪ ಅವರಿಗೆ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಒಳಗಿರುವ ಬಿಂಬದ ಭಾವಚಿತ್ರವುಳ್ಳ ದೊಡ್ಡದಾದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲಾಯಿತು.

ಈ ಸಂದರ್ಭ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೆಪAಡ ಸುಗುಣ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಸಹ ಕಾರ್ಯದರ್ಶಿಗಳಾದ ನಂದೇಟಿರ ರಾಜ ಮಾದಪ್ಪ ಹಾಗೂ ಅಪುö್ಪಮಣಿಯಂಡ ತುಳಸಿ ಕಾಳಪ್ಪ, ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಪರದಂಡ ವಿಠಲ, ಮೂವೇರ ರೇಖಾ ಪ್ರಕಾಶ್, ಕೊಣಿಯಂಡ ಬೋಜಮ್ಮ ಉತ್ತಪ್ಪ, ಅಪ್ಪಚ್ಚೀರ ಕಮಲ ನೀಲಮ್ಮ, ಮಾಚಿಮಾಡ ರವೀಂದ್ರ, ಚೀರಂಡ ಕಂದಾ ಸುಬ್ಬಯ್ಯ, ಚೊಟ್ಟೆಯಾಂಡಮಾಡ ವಿಶ್ವನಾಥ್, ಚಟ್ಟಂಗಡ ರವಿ ಸುಬ್ಬಯ್ಯ, ಅಮ್ಮಣಿಚಂಡ ಪ್ರವೀಣ್ ಚೆಂಗಪ್ಪ, ಮಾಳೆಟೀರ ರತ್ನ ಮಾದಯ್ಯ, ಪಂದಿಮಾಡ ರಮೇಶ್ ಅಚ್ಚಪ್ಪ, ಕುಂಬೇರ ಮನು ಕುಮಾರ್, ಚೇಮಿರ ಅರ್ಜುನ್, ತೇಲಪಂಡ ಸೋಮಯ್ಯ, ಚೇಂದAಡ ವಸಂತ್, ಸೇರಿದಂತೆ ಹಳೆಯ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.