ಮಡಿಕೇರಿ, ನ. ೨೫: ಸಿನಿಮಾ ಕ್ಷೇತ್ರದಲ್ಲಿ ಕೊಡಗಿನ ಅದೆಷ್ಟೋ ಪ್ರತಿಭೆಗಳು ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಅಂದಿನ ಪ್ರೇಮಾರಿಂದ ಇಂದಿನ ರಶ್ಮಿಕಾ ಮಂದಣ್ಣ ತನಕ ಹಲವರು ಬೆಳ್ಳಿಪರದೆಯಲ್ಲಿ ಮಿಂಚು ಹರಿಸಿದ್ದಾರೆ. ಕನ್ನಡ ಚಿತ್ರ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ನಟ-ನಟಿಯರು ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದೀಗ ಕೊಡಗಿನ ಮತ್ತೊಂದು ಪ್ರತಿಭೆ ‘ಸ್ಯಾಂಡಲ್ ವುಡ್’ಗೆ ಪದಾರ್ಪಣೆ ಮಾಡಿದ್ದು, ಭರವಸೆಯನ್ನು ಹುಟ್ಟು ಹಾಕಿದ್ದಾರೆ. ಮಡಿಕೇರಿಯ ಪ್ರಸನ್ನ ಭಟ್ ಹಾಗೂ ಸಂಗೀತಾ ದಂಪತಿಯ ಪುತ್ರಿ, ಕೊಡವ ಭಾಷೆಯ ‘ಕೊಡಗ್‌ರ ಸಿಪಾಯಿ’ ಚಿತ್ರದಲ್ಲಿ ತನ್ನ ಮನೋಜ್ಞ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ತೇಜಸ್ವಿನಿ ಶರ್ಮ ಇದೀಗ ‘ಫ್ಲಾö್ಯಟ್ ನಂಬರ್ ೯’ ಚಿತ್ರದ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದು, ಚಿತ್ರದ ಟ್ರೆöÊಲರ್ ಕುತೂಹಲವನ್ನು ಹುಟ್ಟುಹಾಕಿದೆ.
ಕಿಶೋರ್ ಶರ್ಮ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಕಿರುತೆರೆಯ ಖ್ಯಾತ ನಟರುಗಳಾದ ಚಂದು ಗೌಡ, ಸ್ಕಂದ ಅಭಿನಯ ಮಾಡಿದ್ದಾರೆ. ಈ ಚಿತ್ರ ಡಿ.೨ಕ್ಕೆ ಬಿಡುಗಡೆಯಾಗಲಿದ್ದು, ಟ್ರೆöÊಲರ್ ಜನಮನ್ನಣೆ ಗಳಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಕೊಡಗಿನ ಪ್ರತಿಭೆ ತೇಜಸ್ವಿನಿ, ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸವಾಲಿನ ಪಾತ್ರವೂ ಆಗಿದೆ. ನುರಿತ ತಂಡ ಚಿತ್ರದಲ್ಲಿ ಕೆಲಸ ಮಾಡಿದೆ. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಜನರಿಗೆ ಇಷ್ಟವಾಗುವ ಎಲ್ಲಾ ಅಂಶಗಳಿವೆ ಎಂದು ತಮ್ಮ ಅನಿಸಿಕೆಯನ್ನು ‘ಶಕ್ತಿ’ಯೊಂದಿಗೆ ಹಂಚಿಕೊAಡರು.