*ಗೋಣಿಕೊಪ್ಪ, ನ. ೨೫: ಸೋಮವಾರಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ಮಂಡಲ ಅಧ್ಯಕ್ಷರಾಗಿ ಪ್ರಕಾಶ್ ಬೆಳ್ಳಪ್ಪ ಅವರನ್ನು ನೇಮಿಸಲಾಗಿದೆ.

ಮಡಿಕೇರಿಯಲ್ಲಿ ನಡೆದ ಕೃಷಿ ಮೋರ್ಚಾ ಸಮಿತಿ ಸಭೆಯಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆಯಲ್ಲಿ ರಾಜ್ಯ ಕೃಷಿ ಮೋರ್ಚಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆದಿದೆ. ಮುಂದಿನ ಅವಧಿಯ ಅಧಿಕಾರವನ್ನು ಪ್ರಕಾಶ್ ಬೆಳ್ಳಪ್ಪ ಅವರಿಗೆ ಹಸ್ತಾಂತರಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್ ದಾಸ್, ದಿನೇಶ್ ಕುಂದಳ್ಳಿ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀಕಾಂತ್, ಸದಸ್ಯರುಗಳಾದ ಸಂದೇಶ್, ರವಿ, ಧರ್ಮಪಾಲ, ತಮ್ಮಯ್ಯ, ಮನೋಹರ್ ಉಪಸ್ಥಿತರಿದ್ದರು.