ಮಡಿಕೇರಿ, ನ. ೨೪: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ತೀತಿರ ಧರ್ಮಜ ಉತ್ತಪ್ಪ ಅವರ ಸ್ಥಾನವನ್ನು ಅಧಿಕೃತಗೊಳಿಸಿ ಎಐಸಿಸಿ ಇದೀಗ ಆದೇಶ ಹೊರಡಿಸಿದೆ.
ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ರಾಜಿನಾಮೆ ಬಳಿಕ ಧರ್ಮಜ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿ ಕೆಪಿಸಿಸಿ ಮೂಲಕ ಆಯ್ಕೆ ಮಾಡಲಾಗಿತ್ತು. ಇದೀಗ ಬೆಂಗಳೂರು ಗ್ರಾಮಾಂತರ, ಯಾದಗಿರಿ, ತುಮಕೂರು, ಹಾಸನ ಜಿಲ್ಲೆಗಳ ಪಕ್ಷದ ಅಧ್ಯಕ್ಷರನ್ನು ಎಐಸಿಸಿ ನೂತನ ಅಧ್ಯಕ್ಷರ ಒಪ್ಪಿಗೆಯಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಟಿಸಿದ್ದು, ಇದರೊಂದಿಗೆ ಧರ್ಮಜ ಉತ್ತಪ್ಪ ಅವರ ಸ್ಥಾನವನ್ನು ಅಧ್ಯಕ್ಷರಾಗಿ ಮುಂದಿನ ಅವಧಿಗೂ ಪ್ರಕಟಿಸಲಾಗಿದೆ.