ಗೋಣಿಕೊಪ್ಪಲು, ನ. ೨೫: ಕೊಟ್ಟಿಗೆಯಲ್ಲಿ ರಾಸುಗಳನ್ನು ಕಟ್ಟಿರುವ ಸಂದರ್ಭ ಅಥವಾ ಮೇಯಲು ಬಿಟ್ಟಾಗ ಹುಲಿ ಸಂರಕ್ಷಿತ ಪ್ರದೇಶದಿಂದ ಸಮೀಪದ ಗ್ರಾಮಗಳಿಗೆ ನುಸುಳುವ ಹುಲಿಗಳು ಜಾನುವಾರು, ಹಂದಿ, ಮೇಕೆ ಇತ್ಯಾದಿ ಸಾಕು ಪ್ರಾಣಿಗಳನ್ನು ಕೊಂದು ತಿನ್ನುವದು ಸಹಜ ಎಂಬAತಾಗಿದೆ.

ಕಳೆದ ೧೦ ವರ್ಷಗಳಿಂದೀಚೆಗೆ ನಾಗರಹೊಳೆ ರಾಷ್ಟಿçÃಯ ಉದ್ಯಾನದಿಂದ ನಿರಂತರವಾಗಿ ಹುಲಿ, ಚಿರತೆ, ಕಾಡಾನೆ, ಕಾಡುಕೋಣ, ಕಾಡುಹಂದಿ ಇತ್ಯಾದಿ ವನ್ಯಜೀವಿಗಳು ಆಹಾರ ಅರಸಿ ಅರಣ್ಯದ ಅಂಚಿನ ಗ್ರಾಮಗಳಿಗೆ ನುಸುಳಿ ಬರುತ್ತಿದ್ದು, ಕೃಷಿಕ ವರ್ಗ ನಿರಂತರ ನಷ್ಟ ಅನುಭವಿಸುತ್ತಾ ಬಂದಿದ್ದಾರೆ.

ದೇವನೂರು ಗ್ರಾಮದ ಪೋಡಮಾಡ ಸ್ವಾತಿ ಕುಟ್ಟಯ್ಯ ಅವರು ಹಲವಾರು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು. ಕಳೆದ ಮೂರು ವರ್ಷದ ಅವಧಿಯಲ್ಲಿ ಇವರ ೮ ರಾಸುಗಳನ್ನು ಹುಲಿ ಕಬಳಿಸಿದೆ. ಅರಣ್ಯ ಇಲಾಖೆಯಲ್ಲಿಯೂ ರಾಸುಗಳನ್ನು ಹುಲಿ ಹಿಡಿದ ಬಗ್ಗೆ, ಪಶುವೈದ್ಯರು ವರದಿ ನೀಡಿದ ಬಗ್ಗೆ ಮಾಹಿತಿ ಇದ್ದರೂ ಇವರಿಗೆ ಇಲ್ಲಿಯವರೆಗೆ ಯಾವ ಪರಿಹಾರವೂ ಅರಣ್ಯ ಇಲಾಖೆಯಿಂದ ಸಿಕ್ಕಿಲ್ಲ.

ಇತ್ತೀಚೆಗೆ ಇವರ ತೋಟಕ್ಕೆ ನಾಗರಹೊಳೆಯ ಚಾತರಕುಪ್ಪ ಅರಣ್ಯ ಪ್ರದೇಶದಿಂದ ಹುಲಿಯೊಂದು ಬಂದಿದ್ದು ಕರುವನ್ನು ಕೊಂದು ಹಾಕಿದೆ. ಮತ್ತಿಗೋಡು ವಲಯಾರಣ್ಯಾಧಿಕಾರಿ ಪಿ.ಸಿ. ದಿಲೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೀಘ್ರದಲ್ಲಿಯೇ ಪರಿಹಾರ ನೀಡಲಾಗುವದು ಎಂದು ತಿಳಿಸಿದ್ದಾರೆ.ಹಸು ಕಟ್ಟಿ ಹಾಕುವ ಕೊಟ್ಟಿಗೆ ದುರಸ್ತಿಗೊಳಗಾಗಿದ್ದು, ಜಾನುವಾರುಗಳನ್ನು ಸಮೀಪದ ಮರವೊಂದರ ಬುಡದಲ್ಲಿಯೇ ಕಟ್ಟುತ್ತಿದ್ದರು.ಇದರಿಂದ ಹುಲಿಗೆ ಬೇಟೆ ಸುಲಭವಾಗಿದೆ. ಹುಲಿ ಕೊಂದ ಕಡಸನ್ನು ಹೂತು ಹಾಕದೆ ಹಾಗೇಯೇ ಬಿಟ್ಟಿದ್ದರಿಂದಾಗಿ ಹುಲಿರಾಯ ರಾತ್ರಿ ವೇಳೆ ಮೂರು ಬಾರಿ ಬಂದು ಮಾಂಸವನ್ನು ಭಕ್ಷಣೆ ಮಾಡಿರುವದು ‘ಕ್ಯಾಮೆರಾ ಟ್ರಾಪಿಂಗ್’ನಲ್ಲಿ ಸೆರೆಯಾಗಿದೆ. ಇಲ್ಲವೇ ಮತ್ತಷ್ಟು ಹಸುಗಳನ್ನು ಹುಲಿಯು ಕೊಲ್ಲುವ ಸಾಧ್ಯತೆ ಇತ್ತು ಅನ್ನುವದು ಸ್ವಾತಿ ಕುಟ್ಟಯ್ಯನವರ ಅನಿಸಿಕೆ.

ಕೊಟ್ಟಿಗೆ ಕಟ್ಟಿ ಕೊಡಿ, ಪರಿಹಾರ ಬೇಡ

ತಮ್ಮ ಹಸುಗಳು ಹುಲಿಗೆ ಆಹಾರವಾದಾಗಲೆಲ್ಲಾ ನಮಗೆ ಹಣ ಬೇಡ ಉತ್ತಮ ಕೊಟ್ಟಿಗೆ ನಿರ್ಮಾಣ ಮಾಡಿಕೊಡಿ ಎಂದು ಹೇಳಿದ್ದಾರೆ. ಸುಮಾರು ರೂ.೧ ಲಕ್ಷ ವೆಚ್ಚದಲ್ಲಿ ಈಗಿರುವ ಕೊಟ್ಟಿಗೆಯನ್ನೇ ದುರಸ್ತಿ ಮಾಡಿ ಉತ್ತಮ ಕೊಟ್ಟಿಗೆ ನಿರ್ಮಾಣ ಮಾಡಿದ್ದಲ್ಲಿ ರಾತ್ರಿ ಹುಲಿಗೆ ಹಸು ಬೇಟೆ ಅಸಾಧ್ಯ. ಸುಮಾರು ೮ ಜಾನುವಾರುಗಳಿಂದ ಸ್ವಾತಿ ಕುಟ್ಟಯ್ಯನವರಿಗೆ ರೂ. ೨ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ನಮಗೆ ಉತ್ತಮ ಕೊಟ್ಟಿಗೆ ನಿರ್ಮಾಣ ಮಾಡಿಕೊಡಿ ಎಂದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೇವಲ ರೂ. ೫ ಸಾವಿರ, ೧೦ ಸಾವಿರ ಪರಿಹಾರ ಚೆಕ್ ಬಂದಾಗೆಲ್ಲ ತಿರಸ್ಕರಿಸಿದ ಉದಾಹರಣೆಯೂ ಇದೆ,

ಇದೀಗ ಆನೆಚೌಕೂರು ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ದಿಲೀಪ್ ಅವರು ರೂ. ೩೦ ಸಾವಿರದವರೆಗೆ ಇತ್ತೀಚೆಗೆ ಸಾವನ್ನಪ್ಪಿದ ಹಸುವಿಗೆ ಪರಿಹಾರ ನೀಡಬಹುದಾಗಿದೆ. ಕೊಟ್ಟಿಗೆ ನಿರ್ಮಾಣಕ್ಕೆ ಶೇ.೫೦ ಮಾತ್ರ ನಾವು ನೀಡುತ್ತೇವೆ. ಉಳಿದ ಮೊತ್ತ ಮಾಲೀಕರೇ ಭರಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಕಿರಣ್ ಕುಮಾರ್ ವಲಯಾರಣ್ಯಾಧಿಕಾರಿಯಾಗಿದ್ದಾಗಲೂ ಸುಮಾರು ೭ ಹಸುಗಳು ಹುಲಿಗೆ ಆಹಾರವಾಗಿದೆ. ಅರಣ್ಯ ಇಲಾಖೆಯ ನಿರ್ಲಕ್ಷವೇ ಪರಿಹಾರ ನೆನೆಗುದಿಗೆ ಬೀಳಲು ಕಾರಣ. ಸ್ವಾತಿ ಕುಟ್ಟಯ್ಯ ಅವರ ಪುತ್ರ ಅಯ್ಯಪ್ಪ ನಾಚಯ್ಯ ಕೂಡಾ ೮ ಜಾನುವಾರು ಬಲಿಯಾದರೂ ನಮಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ನಮಗೆ ದೊಡ್ಡದಾದ ಕೊಟ್ಟಿಗೆ ಕಟ್ಟಿಕೊಡಿ ಎಂದರೂ ನಿರ್ಲಕ್ಷ÷್ಯ ತಾಳಿರುವದಾಗಿ ದೂರಿದ್ದಾರೆ.