ಕೂಡಿಗೆ, ನ. ೨೫: ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಸೋಮವಾರಪೇಟೆ ತಹಶೀಲ್ದಾರ್ ನರಗುಂದ್ ಅವರ ಅಧ್ಯಕ್ಷತೆಯಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆಯ ಆಂದೋಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮಗಳ ಜನತೆಗೆ ಪೌತಿ ಖಾತೆ ಬದಲಾವಣೆ, ಪಟ್ಟೆದಾರಿಕೆ ಬದಲಾವಣೆ ಹಾಗೂ ಗ್ರಾಮಗಳ ಜನತೆಗೆ ಪಹಣಿಯಲ್ಲಿ ತಿದ್ದುಪಡಿ ಸಂಬAಧ ಆಂದೋಲನವನ್ನು ಏರ್ಪಡಿಸಲಾಗಿತ್ತು.
ಅಗತ್ಯ ದಾಖಲಾತಿಗಳಾದ ಮೂಲ ಜಮಾ ಬಂದಿ, ಪಹಣಿ, ಆಕಾರ್ ಬಂದ್, ವಂಶವೃಕ್ಷ, ಮರಣ ದೃಢೀಕರಣ ಪತ್ರ, ನೈಜ ದೃಢೀಕೃತ ದಾಖಲೆಗಳೊಂದಿಗೆ ಹಾಜರಾಗಿ ಅರ್ಜಿಗಳನ್ನು ಅನೇಕ ರೈತರು ಸಲ್ಲಿಸಿದರು. ಅದಕ್ಕೆ ಅನುಗುಣವಾಗಿ ಖಾತೆಯ ದಾಖಲೆಗಳನ್ನು ನೀಡುವ ಕಾರ್ಯಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಮಹೇಶ್ ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಕೆ.ಜೆ. ಮಧುಸೂದನ್ ಕಂದಾಯ ಇಲಾಖೆಯ ನಿಯಮಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ ಬೇಬಿಯಣ್ಣ, ಮಾಜಿ ಅಧ್ಯಕ್ಷ, ಸದಸ್ಯರಾದ ದೇವರಾಜ್, ಶಿವಕುಮಾರ್, ತೀರ್ಥನಾಂದ, ಶೋಭಪ್ರಕಾಶ್, ಲಿಂಗಜಮ್ಮ, ಅಭಿವೃದ್ಧಿ ಅಧಿಕಾರಿ ವೀಣಾ, ಕಂದಾಯ ಇಲಾಖೆಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಪೀರ್ ಮಹಮದ್ ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.