ಮಡಿಕೇರಿ, ನ. ೨೪ : ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾವಳಿಯ ೩ನೇ ದಿನದ ಪಂದ್ಯದಲ್ಲಿ ೬ ತಂಡಗಳು ಮುನ್ನಡೆ ಕಾಯ್ದುಕೊಂಡಿವೆ.
ಬಾಡಗ (ಬಿ) ಹಾಗೂ ನಾಲಡಿ ನಡುವೆ ನಡೆದ ಪಂದ್ಯದಲ್ಲಿ ೩-೧ ಅಂತರದಲ್ಲಿ ನಾಲಡಿ ಗೆಲುವು ಸಾಧಿಸಿತು. ಅಶೋಕ್, ನಾಣಯ್ಯ, ನಾಚಪ್ಪ ನಾಲಡಿ ಪರ ತಲಾ ಒಂದೊAದು ಗೋಲು ಗಳಿಸಿದರೆ, ಬಾಡಗ ಪರ ಚಂದನ್ ಏಕೈಕ ಗೋಲು ಬಾರಿಸಿದರು.
೩-೨ ಗೋಲುಗಳ ಅಂತರದಲ್ಲಿ ಕಾರ್ಮಾಡು ವಿರುದ್ಧ ಚೆಂಬೆಬೆಳ್ಳೂರು ವಿಜಯಸಾಧಿಸಿತು. ಚೆಂಬೆಬೆಳ್ಳೂರು ಪರ ಮೋಕ್ಷಿತ್ ೨, ತಿಮ್ಮಯ್ಯ ೧, ಕಾರ್ಮಾಡು ಪರ ಗೋಲು ಹೊಡೆದರೆ, ಕಾರ್ಮಾಡು ಪರ ಪ್ರಜ್ವಲ್ ಜಾಗೂ ದೇವಯ್ಯ ತಲಾ ಒಂದೊAದು ಗೋಲು ಗಳಿಸಿದರು.
೫-೦ ಗೋಲುಗಳ ಅಂತರದಲ್ಲಿ ನಾಪೋಕ್ಲು ತಂಡ ಬೇಂಗ್ನಾಡ್ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಂಡಿತು. ನಾಪೋಕ್ಲು ಪರ ವಿವಿನ್, ಅಪ್ಪಚ್ಚು, ಮುತ್ತಪ್ಪ, ಚಿಟ್ಟಿಯಪ್ಪ, ನಾಚಪ್ಪ ತಲಾ ಒಂದು ಗೋಲು ಹೊಡೆದು ಎದುರಾಳಿ ತಂಡವನ್ನು ಗೋಲು ಹೊಡೆಯದಂತೆ ಕಟ್ಟಿಹಾಕಿತು.
ನಾಣಯ್ಯ ಬಾರಿಸಿದ ಏಕೈಕ ಗೋಲು ಗಳಿಸಿದ ಪರಿಣಾಮ ೧-೦ ಗೋಲುಗಳ ಅಂತರದಲ್ಲಿ ಮರಂದೋಡ ವಿರುದ್ಧ ಕುಂದ ಜಯಸಾಧಿಸಿತು.
ಯವಕಪಾಡಿಯನ್ನು ಮಣಿಸಿ ಕಾಂತೂರು ೧-೦ ಗೋಲುಗಳ ಅಂತರದಲ್ಲಿ ಗೆದ್ದುಕೊಂಡಿತು. ತಂಡದ ಪರ ಲೋಕೇಶ್ ಏಕೈಕ ಗೋಲು ಗಳಿಸಿದರು.