ಮಡಿಕೇರಿ, ನ. ೨೫: ವೀರಾಜಪೇಟೆ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಇವರು ವೀರಾಜಪೇಟೆ ಕೊಡವ ಸಮಾಜದ ಸಹಕಾರ ದೊಂದಿಗೆ ಇದೇ ಮೊದಲ ಬಾರಿಗೆ ಕೊಡವ ವಾಲಗತ್ತಾಟ್ ನಮ್ಮೆ-೨೦೨೨ ಎಂಬ ವಿಶೇಷ ಕಾರ್ಯಕ್ರಮವನ್ನು ಡಿಸೆಂಬರ್ ೬ ರಂದು ನಡೆಯಲಿದೆ. ಈ ಸ್ಪರ್ಧೆಯಲ್ಲಿ ೫ ವಿಭಾಗಗಳಿದ್ದು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ಚಿಕ್ಕ ಮಕ್ಕಳ ವಿಭಾಗ ೧ ರಿಂದ ೭ನೇ ತರಗತಿ, ಪ್ರೌಢಶಾಲಾ ವಿಭಾಗ ೮ ರಿಂದ ೧೦ನೇ ತರಗತಿವರೆಗೆ, ಕಾಲೇಜು ವಿಭಾಗ ಪ್ರಥಮ ಪಿಯುಸಿಯಿಂದ ಪದವಿಯವರೆಗೆ, ಸಾರ್ವಜನಿಕ ವಿಭಾಗ ೬೦ ವರ್ಷದೊಳಗೆ ಯಾರು ಬೇಕಾದರು ಭಾಗವಹಿಸಬಹುದು. ಹಿರಿಯ ನಾಗರಿಕರು ೬೦ ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಅಲ್ಲದೆ ಕೊಡವ ವಾಲಗ ಕುಣಿತದಲ್ಲಿ ಆಸಕ್ತಿ ಇರುವ ಕೊಡವೇತರರಿಗೆ ಪುರುಷರು ಮತ್ತು ಮಹಿಳೆಯರು ಎಂಬ ಪ್ರತ್ಯೇಕ ಎರಡು ವಿಭಾಗದಲ್ಲಿ ಸ್ಪರ್ಧೆ ಇರುತ್ತದೆ. ಕೊಡವ ವಾಲಗ ಕುಣಿತವನ್ನು ಇಷ್ಟ ಪಡುವವರು, ಕುಣಿಯುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವವರು ಡಿಸೆಂಬರ್ ೨ ರೊಳಗೆ ತೂಕ್ಬೊಳಕ್ ಪತ್ರಿಕೆ ಕಾರ್ಯಾಲಯ, ಮೂರ್ನಾಡು ರಸ್ತೆ, ವೀರಾಜಪೇಟೆ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ. ೯೪೮೫೫೬೬೬೭ನ್ನು ಸಂಪರ್ಕಿಸಬಹುದು.