ಮಡಿಕೇರಿ, ನ. ೨೫: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ೦-೬ ವರ್ಷದ ಒಳಗಿನ ಮಕ್ಕಳು ಪೋಷಣೆ ಮತ್ತು ರಕ್ಷಣೆಯನ್ನು ಪಡೆಯುತ್ತಿದ್ದಾರೆ.

ಈ ಸಂಸ್ಥೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಯಾ ಹುದ್ದೆ ಖಾಲಿ ಇದ್ದು, ಪ್ರಸ್ತುತ ೩ ಜನ ಆಯಾಗಳ ಅವಶ್ಯಕತೆ ಇರುತ್ತದೆ. ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮಡಿಕೇರಿಯ ಮಡಿಲು ಸರ್ಕಾರಿ ದತ್ತು ಸಂಸ್ಥೆಯ ಅಧೀಕ್ಷಕಿ ಪಿ.ಎಸ್. ನಾಗರತ್ನ ಅವರು ತಿಳಿಸಿದ್ದಾರೆ.