ವೀರಾಜಪೇಟೆ, ನ. ೨೩: ಅಂಗಾAಗಳ ದಾನಕ್ಕಿಂತ ರಕ್ತದಾನ ಶ್ರೇಷ್ಠವಾದುದ್ದಾಗಿದೆ ಎಂದು ವೀರಾಜಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ಹರೀಶ್ ಶಂಕರ್ ಹೇಳಿದರು.

ವೀರಾಜಪೇಟೆ ಪುರಭವನದ ಸಭಾಂಗಣದಲ್ಲಿ ವೀರಾಜಪೇಟೆ ರೋಟರಿ ಸಂಸ್ಥೆ, ಹೆಚ್ ಡಿಎಫ್‌ಸಿ ಬ್ಯಾಂಕ್, ವೀರಾಜಪೇಟೆ ಹಿಂದೂ ಮಲೆಯಾಳಿ ಸಂಘ, ಪುರಸಭೆ, ಮತ್ತು ಜೈ ಹಿಂದ್ ಆಟೋ ಚಾಲಕ ಮತ್ತು ಮಾಲಿಕರ ಸಂಘ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಈ ರೀತಿ ಶಿಬಿರಗಳನ್ನು ಆಯೋಜಿಸುವುದರಿಂದ ಇಂದು ರಕ್ತದ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ತುರ್ತು ಸಂದರ್ಭಗಳಿಗೆ ಬೇಕಾದ ರಕ್ತವನ್ನು ಪಡೆಯಬಹುದು. ವಿಜ್ಞಾನ ಹೇಳುವಂತೆ ರಕ್ತದಾನ ಮಾಡುವುದರಿಂದ ಹೃದಯಾಘಾತ, ಕ್ಯಾನ್ಸರ್‌ನಂತಹ ರೋಗಗಳ ಸಾಧ್ಯತೆ ಕಡಿಮೆ ಇದೆ. ಇಲ್ಲಿ ರಕ್ತದಾನಿಗಳ ನೊಂದಾವಣೆ ಆಗುವ ಕಾರಣ ಅಗತ್ಯ ತುರ್ತು ಸಂದರ್ಭಗಳಲ್ಲಿ ಅಗತ್ಯವಾದ ಗುಂಪಿನ ರಕ್ತ ಪಡೆಯಬಹುದು. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹರೀಶ್ ಶಂಕರ್ ಹೇಳಿದರು.

ಮಡಿಕೇರಿ ಜಿಲ್ಲಾ ಕೇಂದ್ರದ ಅಧಿಕಾರಿ ರಕ್ತ ನಿಧಿ ಕೇಂದ್ರದ ಡಾ. ಕರುಂಬಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದಿಗೂ ನಮ್ಮಲ್ಲಿ ಅನೇಕರಿಗೆ ರಕ್ತದಾನ ಎಂದರೆ ಒಂದು ರೀತಿ ಭಯ, ಆತಂಕ ಇದೆ, ಜೊತೆಗೆ ಕೆಲವು ಮೂಢನಂಬಿಕೆ ಸಹ ಇದೆ. ಸಂಘ ಸಂಸ್ಥೆಗಳು ಈ ಕುರಿತು ಜಾಗೃತಿ ಮೂಡಿಸಿ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯ ಸಮಸ್ಯೆ ಸೇರಿದಂತೆ ಯಾವ ತೊಂದರೆ ಬರುವುದಿಲ್ಲ. ಆದರಿಂದ ಆರೋಗ್ಯವಂತರು ಮುಕ್ತವಾಗಿ ರಕ್ತದಾನ ಮಾಡುವ ಮೂಲಕ ವೈದ್ಯಕೀಯ ಹಾಗೂ ರೋಗಿಗಳ ಅಗತ್ಯಕ್ಕೆ ಬೇಕಾದ ರಕ್ತ ನೀಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವ ಶ್ರೇಷ್ಠ ಕೆಲಸ ಮಾಡಿ ಎಂದರು.

ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ವಿವೇಕನಂದಾ ಯೂತ್ ಮೂವ್‌ಮೆಂಟ್ ಸ್ಕಿçÃನಿಂಗ್ ಕಮಿಟಿ ಸದಸ್ಯ ಅಜಯ ಸೂದ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಡಿಕೇರಿಯ ಹೆಚ್ ಡಿಎಫ್‌ಸಿ ಬ್ಯಾಂಕ್ ಕಾರ್ಯನಿರ್ವಹಣಾ ವ್ಯವಸ್ಥಾಪಕ ನಾರಾಯಣ, ವೀರಾಜಪೇಟೆ ಜೈ ಹಿಂದ್ ಆಟೋ ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಭರತ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಶಾಂತರಾಮ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.