ಬೆಂಗಳೂರು, ನ. ೨೩: ನಂದಿನಿ ಹಾಲು ಮತ್ತು ಮೊಸರಿನ ದರ ಲೀಟರ್‌ಗೆ ೨ ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ. ಹಾಲು, ಮೊಸರಿನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಟೋನ್ಡ್ ಹಾಲಿನ ದರ ೩೭ ರಿಂದ ೩೯ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಸ್ಪೆಷಲ್ ಹಾಲಿನ ದರ ೪೩ ರಿಂದ ೪೫ ರೂಪಾಯಿಗೆ, ಸಮೃದ್ಧಿ ಹಾಲಿನ ದರ ೪೮ ರಿಂದ ೫೦ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೋಮೋಜಿನೈಸ್ಡ್ ಹಾಲು ೩೮ ರೂ. ರಿಂದ ೪೦ ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಹಸುವಿನ ಹಾಲು ೪೨ ರೂ. ರಿಂದ ೪೪ ರೂ.ಗೆ ಏರಿಕೆ. ಶುಭಂ ಹಾಲು ೪೩ ರೂ. ರಿಂದ ೪೫ ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಸ್ಟಾö್ಯಂಡಡೈಸ್ಡರ್ ಹಾಲು ೪೪ ರೂ. ರಿಂದ ೪೬ ರೂ. ಗೆ ಏರಿಕೆ. ಸಂತೃಪ್ತಿ ಹಾಲು ೫೦ ರೂ. ರಿಂದ ೫೨ ರೂ.ಗೆ ಏರಿಕೆ. ಡಬಲ್ ಟೋನ್ಡ್ ಹಾಲು ೩೬ ರೂ. ರಿಂದ ೩೮ ರೂ.ಗೆ ಏರಿಕೆಯಾಗಿದೆ. ಮೊಸರಿನ ದರವನ್ನು ಲೀಟರ್‌ಗೆ ೪೫ ರಿಂದ ೪೭ ರೂಪಾಯಿಗೆ ಏರಿಕೆ ಮಾಡಲಾಗಿದೆ. ರೈತರಿಗೆ ಪ್ರೋತ್ಸಾಹಧನ ನೀಡುವ ಸಲುವಾಗಿ ದರ ಏರಿಕೆ ಮಾಡುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.