*ಗೋಣಿಕೊಪ್ಪ, ನ. ೨೩: ಸಾಮಾನ್ಯ ಸೇವಾಕೇಂದ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಬಿಟ್ಟಂಗಾಲದಲ್ಲಿ ತೆರೆಯಲಾಯಿತು.

ಕೇಂದ್ರ ಸರ್ಕಾರದ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ತೆರೆಯಲಾದ ಕೇಂದ್ರವನ್ನು ಬಿಟ್ಟಂಗಾಲ ಪಂಚಾಯಿತಿ ಸದಸ್ಯ ನಾಯಡ ಬೋಪಣ್ಣ ಉದ್ಘಾಟಿಸಿದರು.

ಸದಸ್ಯೆ ಶಾರದಾ, ಮೇಲ್ವಿಚಾರಕ ನಾಗರಾಜ್, ನೋಡೆಲ್ ಅಧಿಕಾರಿ ಭರತ್, ಒಕ್ಕೂಟದ ಅಧ್ಯಕ್ಷ ರಂಜನ್, ಪದಾಧಿಕಾರಿ ಹೊನ್ನಮ್ಮ, ವಿಪತ್ತು ನಿರ್ವಹಣೆ ಸಂಯೋಜಕಿ ರೇಖಾ ಗಣೇಶ್, ಸಂಯೋಜಕ ಅರುಣ್, ಸೇವಾ ಪ್ರತಿನಿಧಿ ಸಬಿತ, ರೇಖಾ, ಸಹಾಯಕಿ ಚೈತ್ರ, ಗೀತಾ, ಮೀನಾ, ಜ್ಯೋತಿ, ಪುಷ್ಪ, ಕವಿತಾ, ನವೀನ್, ರೇಖಾ ಬೋಪಣ್ಣ, ನಾರಾಯಣ್ ಹಾಜರಿದ್ದರು.